

ತಿರುವನಂತಪುರಂ: 2025ರ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು ಎಂಬ ಆರು ಪಾಲಿಕೆಗಳ ಪೈಕಿ ನಾಲ್ಕರಲ್ಲಿ UDF ಗೆದ್ದಿದೆ. LDF ಕೋಝಿಕ್ಕೋಡ್ ಅನ್ನು ಉಳಿಸಿಕೊಂಡಿದೆ. ಆದರೆ ಎನ್ ಡಿಎ ತಿರುವಂನಪುರವನ್ನು ಎಲ್ ಡಿಎಫ್ ನಿಂದ ಕಿತ್ತುಕೊಂಡಿದೆ.
59 ಜಿಲ್ಲಾ ಪಂಚಾಯತ್‌ಗಳು, 1,063 ಬ್ಲಾಕ್ ಪಂಚಾಯತ್‌ಗಳು ಮತ್ತು 7,451 ಗ್ರಾಮ ಪಂಚಾಯತ್‌ಗಳಲ್ಲಿ ಯುಡಿಎಫ್ ಗೆದ್ದಿದೆ. ಇನ್ನೂ LDF 30 ಜಿಲ್ಲಾ ಪಂಚಾಯಿತಿಗಳು, 823 ಬ್ಲಾಕ್ ಪಂಚಾಯಿತಿಗಳು ಮತ್ತು 6,137 ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದೆ. ಎನ್‌ಡಿಎ ಕೇವಲ ಒಂದು ಜಿಲ್ಲಾ ಪಂಚಾಯಿತಿ, 50 ಬ್ಲಾಕ್ ಪಂಚಾಯಿತಿಗಳು ಮತ್ತು 1,363 ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದೆ.
ಯುಡಿಎಫ್‌ನ ಅಮೋಘ ಗೆಲುವನ್ನು "ರಾಜ್ಯ ಸರ್ಕಾರದ ವಿರುದ್ಧದ ಎಚ್ಚರಿಕೆ ಮತ್ತು ಕೇರಳವನ್ನು ದುರಾಡಳಿತ ಮಾಡುವವರ ವಿರುದ್ಧ ಜನರ ಪ್ರತಿಭಟನೆ ಎಂದು ಕೇರಳ ವಿರೋಧ ಪಕ್ಷದ ನಾಯಕ ವಿ. ಡಿ .ಸತೀಶನ್ ಹೇಳಿದ್ದಾರೆ. ಎಲ್‌ಡಿಎಫ್ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆಂದು ಫಲಿತಾಂಶಗಳು ಸೂಚಿಸುತ್ತವೆ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಹೇಳಿದ್ದಾರೆ.
ಫಲಿತಾಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುವುದು ಎಂದು ಎಲ್‌ಡಿಎಫ್ ಸಂಚಾಲಕ ಟಿ ಪಿ ರಾಮಕೃಷ್ಣನ್ ಹೇಳಿದ್ದಾರೆ. ಇಂತಹ ಫಲಿತಾಂಶ ಯಾಕೆ ಬಂತು ಎಂಬುದನ್ನು ಸೂಕ್ಷ್ಮ ಮಟ್ಟದಲ್ಲಿ ಪರಿಶೀಲಿಸಲಾಗುವುದು, ಜನರ ಅಭಿಪ್ರಾಯವನ್ನು ಪರಿಗಣಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ತಿರುವನಂತಪುರಂ ಪಾಲಿಕೆಯಲ್ಲಿ ಎನ್ ಡಿಎ 50 ಸ್ಥಾನಗಳು ಭದ್ರ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಲಾಭವೇನೆಂದರೆ, 101 ಸದಸ್ಯರ ತಿರುವನಂತಪುರ ನಗರ ಪಾಲಿಕೆಯಲ್ಲಿ ಎನ್‌ಡಿಎ 50 ಸ್ಥಾನಗಳನ್ನು ಪಡೆದುಕೊಂಡಿದೆ.
"ಕೇರಳ ಯುಡಿಎಫ್ ಮತ್ತು ಎಲ್‌ಡಿಎಫ್‌ನಿಂದ ಬೇಸತ್ತಿದೆ. ಅವರು NDAಯನ್ನು ಉತ್ತಮ ಆಡಳಿತ ನೀಡುವ ಮತ್ತು ಎಲ್ಲರಿಗೂ ಅವಕಾಶಗಳೊಂದಿಗೆ ವಿಕಾಸಿತ ಕೇರಳವನ್ನು ನಿರ್ಮಿಸುವ ಏಕೈಕ ಆಯ್ಕೆಯಾಗಿ ನೋಡುತ್ತಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬರೆದುಕೊಂಡಿದ್ದಾರೆ.
Advertisement