

ಅಮೃತಸರ: ಬೇರೊಬ್ಬನ ಜತೆ ಹೋಟೆಲ್ ರೂಮಿನಲ್ಲಿ ಉಳಿದುಕೊಂಡಿದ್ದ ಮಹಿಳೆಯನ್ನು ಆಕೆಯ ಪತಿ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಪಂಜಾಬ್ನ ಅಮೃತಸರದಲ್ಲಿ ಈ ಘಟನೆ ನಡೆದಿದ್ದು, ಪತ್ನಿಯ ಕಳ್ಳಾಟ ಕಣ್ಣಾರೆ ನೋಡಿದ ಪತಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೋಟೆಲ್ ರೂಮಿನಲ್ಲಿ ಪತ್ನಿ ಬೇರೊಬ್ಬನ ಜತೆ ಇರುವುದನ್ನು ನೋಡಿ ಜೀವನದ ಬಗ್ಗೆ ಕಂಡಿದ್ದ ಕನಸುಗಳೆಲ್ಲಾ ಆಗಲೇ ಮುಗಿದ ಅನುಭವವಾಗಿತ್ತು. ಹೋಟೆಲ್ ಹೊರಗೆ ಬಂದು ಪತಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.
ಮೂಲಗಳ ಪ್ರಕಾರ ರವಿ ಎಂಬುವವರು 15 ವರ್ಷಗಳ ಹಿಂದೆ ಅಂದರೆ, ಏಪ್ರಿಲ್ 25, 2010 ರಂದು ಹಿಮಾನಿ ಎಂಬುವವರನ್ನು ಮದುವೆಯಾಗಿದ್ದರು. ಆರಂಭದಲ್ಲಿ ಇಬ್ಬರೂ ಅನ್ಯೂನ್ಯವಾಗಿಯೇ ಇದ್ದರು. ಈ ಜೋಡಿಯ ಅನ್ಯೋನ್ಯತೆಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಸಂಸಾರದಲ್ಲಿ ಸಣ್ಣ ಪುಟ್ಟ ಕಲಹಗಳೂ ಇದ್ದವು. ಇವುಗಳೆಲ್ಲದರ ನಡುವೆಯೂ ಇವರಿಬ್ಬರ ಸಂಸಾರ ನಡೆದಿತ್ತು.
ಈ ನಡುವೆ ಮೊದಲ ಬಾರಿಗೆ ಪತ್ನಿ 2018ರಲ್ಲಿ ಹೊಟೆಲ್ ರೂಮಿನಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಿಕ್ಕಿಬಿದ್ದಿದ್ದರು. ಈ ವೇಳೆ ದೊಡ್ಡ ಗಲಾಟೆಯೂ ನಡೆದಿತ್ತು. ಆ ಸಮಯದಲ್ಲಿ, ಅವರ ಮಕ್ಕಳ ಭವಿಷ್ಯವು ಅಪಾಯದಲ್ಲಿತ್ತು. ಈ ವೇಳೆ ಪತ್ನಿಯ ಪೋಷಕರು ಬಂದು ಸಂಧಾನ ನಡೆಸಿ ಕ್ಷಮೆಯಾಚಿಸಿದರು. ಅಲ್ಲದೆ ಭವಿಷ್ಯದಲ್ಲಿ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆಗಳನ್ನು ನೀಡಿದರು. ಹೀಗಾಗಿ ಪತಿ ರವಿ ಆಕೆಯನ್ನು ಕ್ಷಮಿಸಿ ಸಂಸಾರ ಮುಂದುವರೆಸಿದ್ದರು. ಆಕೆ ತಪ್ಪು ತಿದ್ದಿಕೊಂಡು ಬಾಳ್ವೆ ನಡೆಸುತ್ತಾರೆ ಎಂದು ಭಾವಿಸಿದ್ದರು.
ಆದರೆ ಮಹಿಳೆ ಮತ್ತದೇ ತಪ್ಪು ಮಾಡಿ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದಾರೆ. ಮಹಿಳೆ ಮಧ್ಯಾಹ್ನ 3.30ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಳು. ನಂತರ ರವಿ ಎಷ್ಟೇ ಕರೆ ಮಾಡಿದರೂ ಆಕೆ ಉತ್ತರಿಸಿರಲಿಲ್ಲ. ಆಗ ಅನುಮಾನ ಬಂದಿತ್ತು. ಕೂಡಲೇ ಆತ ಪತ್ನಿಯ ಸ್ಕೂಟಿಗೆ ಅಂಟಿಸಿದ್ದ ಜಿಪಿಎಸ್ ಟ್ರ್ಯಾಕರ್ ಆನ್ ಮಾಡಿ ಆಕೆ ಎಲ್ಲಿದ್ದಾಳೆಂದು ತಿಳಿದುಕೊಂಡಿದ್ದರು. ಆತ ಅಲ್ಲಿಗೆ ಹೋಗಿ ನೋಡಿದಾಗ ಆಕೆ ಬೇರೊಬ್ಬ ವ್ಯಕ್ತಿಯ ಜತೆ ಹೊಟೆಲ್ ರೂಮಿನಲ್ಲಿದ್ದಳು.
ಇದನ್ನು ಕಂಡ ಪತಿ ಆಘಾತಕ್ಕೊಳಗಾಗಿದ್ದು, ಕೂಡಲೇ ಹೋಟೆಲ್ನಿಂದ ಹೊರಬಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಘಟನೆ ನಮ್ಮ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಏಳು ವರ್ಷಗಳ ಹಿಂದೆ, ಎರಡೂ ಕುಟುಂಬಗಳು ಒಟ್ಟಿಗೆ ಕುಳಿತು ವಿಷಯವನ್ನು ಬಗೆಹರಿಸಿಕೊಂಡಿದ್ದವು. ಆದರೆ ಈಗ ರವಿ ದೃಢ ನಿರ್ಧಾರ ಮಾಡಿದ್ದು, ಇನ್ನುಮುಂದೆ ತಾನು ಪತ್ನಿಯೊಂದಿಗೆ ಇರಲು ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
Advertisement