

ಶಿಮ್ಲಾ: ಪ್ರವಾಸಿಗರಿದ್ದ ವಾಹನವೊಂದು ಇದ್ದಕ್ಕಿದ್ದಂತೆ ಇಳಿಜಾರಿನಲ್ಲಿ ಉರುಳಲು ಪ್ರಾರಂಭಿಸಿದ್ದು, ಈ ವೇಳೆ ಸಂಭಾವ್ಯ ಅಪಾಯದ ಅರಿತ ಪ್ರಯಾಣಿಕರು ಕೂಡಲೇ ವಾಹನದಿಂದ ಕೆಳಗಿಳಿಯುವ ಪ್ರಯತ್ನ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಡಾಲ್ಹೌಸಿ ಬಳಿ ಈ ಘಟನೆ ನಡೆದಿದ್ದು, ಪ್ರವಾಸಿಗರ ವಾಹನವೊಂದು ಇದ್ದಕ್ಕಿದ್ದಂತೆ ಇಳಿಜಾರಿನಲ್ಲಿ ಉರುಳಲು ಪ್ರಾರಂಭಿಸಿದೆ.
ಈ ವೇಳೆ ಪ್ರಯಾಣಿಕರು ವಾಹನದಿಂದ ಕೆಳಗಿಳಿಯಲು ಯತ್ನಿಸಿದ್ದಾರೆ. ಒಂದಷ್ಟು ಜನ ಯಶಸ್ವಿಯಾಗಿ ವಾಹನದಿಂದ ಕೆಳಕ್ಕೆ ಹಾರಿದರೂ ಕೆಲವರು ಹಾರುವಾಗ ಕಂದಕಕ್ಕೆ ಬಿದ್ದಿದ್ದಾರೆ.
ಬಳಿಕ ವಾಹನ ಮರಕ್ಕೆ ಡಿಕ್ಕಿ ಹೊಡೆದ ನಂತರ ಕಮರಿಗೆ ಬೀಳದಂತೆ ನಿಂತಿದೆ. ಈ ವೇಳೆ ಸ್ಥಳೀಯರು ಮತ್ತು ಪ್ರವಾಸಿಗರು ಪ್ರಯಾಣಿಕರನ್ನು ಸುರಕ್ಷಿತವಾಗಿ ಎಳೆದು ಅವರ ಪ್ರಾಣ ಉಳಿಸಿದ್ದಾರೆ.
ಆಗಿದ್ದೇನು?
ಶಿಮ್ಲಾದ ಇಳಿಜಾರು ರಸ್ತೆಯಲ್ಲಿ ನಿಲ್ಲಿಸಿದ್ದ ವ್ಯಾನ್ ಅನ್ನು ಪ್ರವಾಸಿಗರು ಹತ್ತುತ್ತಿದ್ದಾಗ ವಾಹನ ದಿಢೀರ್ ಹಿಂದಕ್ಕೆ ಚಲಿಸಿದೆ. ಈ ವೇಳೆ ಪ್ರಯಾಣಿಕರು ಎಲ್ಲರೂ ಮಹಿಳೆಯರು ಆತಂಕದಿಂದ ಹೊರಕ್ಕೆ ಇಳಿಯಲೆತ್ನಿಸಿದ್ದಾರೆ. ವ್ಯಾನ್ ವೇಗ ಪಡೆಯುತ್ತಿದ್ದಂತೆ ಇಬ್ಬರು ರಸ್ತೆಗೆ ಬಿದ್ದರು.
ಮತ್ತಿಬ್ಬರು ಮಹಿಳೆಯರು ಕಂದಕಕ್ಕೆ ಬಿದ್ದಿದ್ದಾರೆ. ಆ ಇಬ್ಬರು ಮಹಿಳೆಯರನ್ನು ಪಕ್ಕದಲ್ಲಿದ್ದವರು ರಕ್ಷಿಸುತ್ತಿರುವುದನ್ನು ಕಾಣಬಹುದು. ವ್ಯಾನ್ ಮರಕ್ಕೆ ಡಿಕ್ಕಿ ಹೊಡೆದು ಕೊನೆಗೂ ನಿಲ್ಲುತ್ತದೆ ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬ್ರೇಕ್ ವೈಫಲ್ಯ
ಮೇಲ್ನೋಟಕ್ಕೆ ವಾಹನದ ಬ್ರೇಕ್ ನಿಯಂತ್ರಣ ತಪ್ಪಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
Advertisement