ತಮಿಳುನಾಡು ಚುನಾವಣೆ 2026: 'ಶುದ್ಧ ಶಕ್ತಿ' ಟಿವಿಕೆ ಮತ್ತು 'ದುಷ್ಟ ಶಕ್ತಿ' ಡಿಎಂಕೆ ನಡುವಿನ ಸ್ಪರ್ಧೆ; ನಟ ವಿಜಯ್

ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವಿಗೀಡಾದ ನಂತರ, ತಮಿಳುನಾಡಿನಲ್ಲಿ ನಟ ವಿಜಯ್ ನಡೆಸಿದ ಮೊದಲ ಸಾರ್ವಜನಿಕ ಸಭೆ ಇದಾಗಿದೆ.
Tamilaga Vettri Kazhagam (TVK) chief Vijay speaks during a public meeting, in Erode, Tamil Nadu.
ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ತಮಿಳುನಾಡಿನ ಈರೋಡ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
Updated on

ಈರೋಡ್: ನಟ-ರಾಜಕಾರಣಿ ವಿಜಯ್ ಗುರುವಾರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅದನ್ನು 'ದುಷ್ಟ ಶಕ್ತಿ' ಎಂದು ಕರೆದಿದ್ದಾರೆ. ದಿವಂಗತ ಎಐಎಡಿಎಂಕೆ ನಾಯಕರಾದ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರು ದ್ರಾವಿಡ ಪಕ್ಷವನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ಬಳಸುತ್ತಿದ್ದ ಪದವನ್ನು ಪುನರಾವರ್ತಿಸಿದ್ದಾರೆ.

ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) 'ಶುದ್ಧ ಶಕ್ತಿ'ಯಾಗಿದೆ. ಈಗ ಸ್ಪಷ್ಟವಾಗಿ 2026ರ ಚುನಾವಣಾ ಹೋರಾಟ, ಈ ಇಬ್ಬರ ನಡುವೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವಿಗೀಡಾದ ನಂತರ, ತಮಿಳುನಾಡಿನಲ್ಲಿ ನಟ ವಿಜಯ್ ನಡೆಸಿದ ಮೊದಲ ಸಾರ್ವಜನಿಕ ಸಭೆ ಇದಾಗಿದೆ.

ಕಾಲ್ತುಳಿತದ ನಂತರ ಅವರು ಕಾಂಚೀಪುರಂನಲ್ಲಿ ಆಯ್ದ ಪ್ರೇಕ್ಷಕರೊಂದಿಗೆ ಮುಚ್ಚಿದ ಬಾಗಿಲಿನ ಸಭೆಯನ್ನು ನಡೆಸಿದ್ದರು ಮತ್ತು ನೆರೆಯ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ದಿವಂಗತ ಮುಖ್ಯಮಂತ್ರಿಗಳಾದ ಎಂಜಿಆರ್ ಮತ್ತು ಜಯಲಲಿತಾ ಅವರನ್ನು ಉಲ್ಲೇಖಿಸಿ, ಅವರು ಡಿಎಂಕೆಯನ್ನು 'ಥೀಯ ಶಕ್ತಿ' (ದುಷ್ಟ ಶಕ್ತಿ) ಎಂದು ಆಗಾಗ್ಗೆ ಬಣ್ಣಿಸುತ್ತಿದ್ದರು. ಟಿವಿಕೆ 'ಥೂಯ ಶಕ್ತಿ' (ಶುದ್ಧ ಶಕ್ತಿ) ಆಗಿದೆ. ಈಗ ಸ್ಪರ್ಧೆಯು ಥೂಯ ಶಕ್ತಿ ಟಿವಿಕೆ ಮತ್ತು ಥೀಯ ಶಕ್ತಿ ಡಿಎಂಕೆ ನಡುವೆ ಇದೆ' ಎಂದು ಅವರು 2026ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಹೇಳಿದರು.

Tamilaga Vettri Kazhagam (TVK) chief Vijay speaks during a public meeting, in Erode, Tamil Nadu.
ಪುದುಚೇರಿ: ನಟ ವಿಜಯ್ ರ್‍ಯಾಲಿಗೆ ಗನ್ ಹಿಡಿದು ಬಂದಿದ್ದ ವ್ಯಕ್ತಿಯ ಬಂಧನ!

'ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಎಂದು ಆರೋಪಿಸಿದ ಅವರು, ದಿವಂಗತ ಮುಖ್ಯಮಂತ್ರಿಗಳಾದ ಸಿ.ಎನ್. ಅಣ್ಣಾದೊರೈ ಮತ್ತು ಎಂಜಿಆರ್ ಎಲ್ಲರಿಗೂ ಸ್ಫೂರ್ತಿಯಾಗಿದ್ದರು, ಅವರು ಯಾರ ವೈಯಕ್ತಿಕ ಆಸ್ತಿಯೂ ಅಲ್ಲ. ಅವರನ್ನು ಉಲ್ಲೇಖಿಸಿದ್ದಕ್ಕಾಗಿ ಯಾರೂ ನನ್ನ ವಿರುದ್ಧ ದೂರು ನೀಡಲು ಸಾಧ್ಯವಿಲ್ಲ' ಎಂದು ಅವರು ಪ್ರತಿಪಾದಿಸಿದರು.

ಕಾನೂನು ಸುವ್ಯವಸ್ಥೆ ಮತ್ತು ಕೃಷಿ ಸೇರಿದಂತೆ ಹಲವು ವಿಷಯಗಳಲ್ಲಿ ಡಿಎಂಕೆ ಸರ್ಕಾರವನ್ನು ಟೀಕಿಸಿದರು.

ಇತ್ತೀಚೆಗೆ ಟಿವಿಕೆ ಸೇರಿದ ಸ್ಥಳೀಯ ಪ್ರಬಲ ವ್ಯಕ್ತಿ, ಎಐಎಡಿಎಂಕೆಯ ಮಾಜಿ ಹಿರಿಯ ಕೆಎ ಸೆಂಗೊಟ್ಟೈಯನ್ ಅವರಂತೆ, ಇನ್ನಷ್ಟು ನಾಯಕರು ಪಕ್ಷಕ್ಕೆ ಬರಲಿದ್ದಾರೆ ಮತ್ತು ಅವರಿಗೆ ಸೂಕ್ತ ಮನ್ನಣೆ ನೀಡಲಾಗುವುದು ಎಂದು ವಿಜಯ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com