

ಚೆನ್ನೈ: ತಮಿಳುನಾಡಿನಲ್ಲಿ SIR (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಆಡಳಿತಾರೂಢ ಡಿಎಂಕೆಗೆ ತೀವ್ರ ಹೊಡೆತ ನೀಡಿದೆ.
ರಾಜ್ಯದ ಎಲ್ಲಾ 38 ಜಿಲ್ಲೆಗಳಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು (DEO) ಶುಕ್ರವಾರ ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಿಂದ 97 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಕೈಬಿಡಲಾಗಿದೆ. ಸದ್ಯ ಇರುವ 6.41 ಕೋಟಿ ಮತದಾರ ಪಟ್ಟಿಯಿಂದ 97 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ಡಿಸೆಂಬರ್ 14 ರಂದು SIR ಪ್ರಕ್ರಿಯೆ ಅಂತಿಮಗೊಂಡಾಗ ಸುಮಾರು 97.4 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ ಎಂದು TNIE ಡಿಸೆಂಬರ್ 16 ರಂದು ವರದಿ ಮಾಡಿತ್ತು.
ಶುಕ್ರವಾರ ಅಧಿಕೃತವಾಗಿ ಬಿಡುಗಡೆಯಾದ ಅಂಕಿಅಂಶಗಳು ಅದನ್ನೇ ದೃಢಪಡಿಸಿದ್ದು, ರಾಜ್ಯದ ಮತದಾರರ ಪಟ್ಟಿಯ ಗಾತ್ರವು ಶೇ.15. 2 ರಷ್ಟು ಅಂದರೆ 5.4 ಕೋಟಿಗೆ ಕುಗ್ಗಿದೆ.
ಜಿಲ್ಲೆಗಳ ಪೈಕಿ ಚೆನ್ನೈಯಲ್ಲಿ ಅತಿ ಹೆಚ್ಚು ಶೇ. 35. 6 ರಷ್ಟು ದೊಡ್ಡ ಕುಸಿತವನ್ನು ಕಂಡಿದೆ. ಸದ್ಯ ಇರುವ 40.04 ಲಕ್ಷ ಮತದಾರರ ಪಟ್ಟಿಯಿಂದ 14.25 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಕೈಬಿಡಲಾದ 97.4 ಲಕ್ಷ ಮತದಾರರ ಹೆಸರುಗಳಲ್ಲಿ ಸರಿ ಸುಮಾರು 53 ಲಕ್ಷ (ಶೇ. 54) ಮತದಾರರು ಸ್ಥಳಾಂತರವಾಗಿರುವುದಾಗಿ ಹೇಳಲಾಗಿದೆ.
27 ಲಕ್ಷ ಮತದಾರರು (ಶೇ.28) ಮೃತಪಟ್ಟಿದ್ದು, 13.6 ಲಕ್ಷ (ಶೇ.14) ಮತದಾರರು ಗೈರುಹಾಜರಿ ಅಥವಾ ಪತ್ತೆಯಾಗಿಲ್ಲ, 3.98 ಲಕ್ಷ (ಶೇ.4) ಮತದಾರರು ನಕಲು ಮತದಾರರು ಎನ್ನಲಾಗಿದೆ. ಸುಮಾರು 16,400 (ಶೇ. 0.2) ಮತದಾರರ ಹೆಸರು ಕೈಬಿಡಲು ಇತರ ಕಾರಣಗಳನ್ನು ನೀಡಲಾಗಿದೆ.
ಚೆಂಗಲ್ಪಟ್ಟು, ತಿರುಪ್ಪೂರ್, ಕೊಯಮತ್ತೂರು ಮತ್ತು ಕಾಂಚೀಪುರಂನಲ್ಲಿಯೂ ಮತದಾರರ ಸಂಖ್ಯೆಯಲ್ಲಿ ತೀವ್ರ ಕಡಿಮೆಯಾಗಿದೆ. ಈ ಜಿಲ್ಲೆಗಳಲ್ಲಿ ಕ್ರಮವಾಗಿ 7 ಲಕ್ಷ, 5.6 ಲಕ್ಷ, 6.5 ಲಕ್ಷ ಮತ್ತು 2.7 ಲಕ್ಷ ಮತದಾರರಿದ್ದಾರೆ.
Advertisement