ಭಾರತೀಯ ಸೇನೆಗೆ ಒಂದು ಲಕ್ಷ 9 MM ಪಿಸ್ತೂಲ್‌ ಖರೀದಿ

ಇದರ ನಂತರ ಲೈಟ್ ಮೆಷಿನ್ ಗನ್‌ಗಳು(LMGs) ಮತ್ತು ಕ್ಲೋಸ್ ಕ್ವಾರ್ಟರ್ ಬ್ಯಾಟಲ್(CQB) ಕಾರ್ಬೈನ್‌ಗಳನ್ನು ಖರೀದಿಸಲಾಗುತ್ತದೆ.
Indian Army to induct one lakh 9 mm Pistols
ಭಾರತೀಯ ಸೇನೆ
Updated on

ನವದೆಹಲಿ: ಶತ್ರುಗಳನ್ನು ಹತ್ತಿರದಿಂದ ಎದುರಿಸಲು ತನ್ನ ಸಿಬ್ಬಂದಿಯನ್ನು ಸಜ್ಜುಗೊಳಿಸಲು ಭಾರತೀಯ ಸೇನೆಯು ಒಂದು ಲಕ್ಷ 9-ಎಂಎಂ ಪಿಸ್ತೂಲ್‌ಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭಿಸಿದೆ.

ಇದರ ನಂತರ ಲೈಟ್ ಮೆಷಿನ್ ಗನ್‌ಗಳು(LMGs) ಮತ್ತು ಕ್ಲೋಸ್ ಕ್ವಾರ್ಟರ್ ಬ್ಯಾಟಲ್(CQB) ಕಾರ್ಬೈನ್‌ಗಳನ್ನು ಖರೀದಿಸಲಾಗುತ್ತದೆ.

ಈ ಹೊಸ ಖರೀದಿಯು ರಕ್ಷಣಾ ವಲಯದಲ್ಲಿ 'ಮೇಕ್-ಇನ್-ಇಂಡಿಯಾ' ಮತ್ತು ಆತ್ಮನಿರ್ಭರ್ ಭಾರತ್ ಅಥವಾ ಸ್ವಾವಲಂಬನೆ ಉಪಕ್ರಮದ ಅಡಿಯಲ್ಲಿ ನಡೆಯಲಿದೆ.

ಭಾರತೀಯ ಸೇನೆಗಾಗಿ ಒಂದು ಲಕ್ಷ ಸ್ಥಳೀಯ 9-ಎಂಎಂ ಪಿಸ್ತೂಲ್‌ಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ(MoD) ಅಧಿಸೂಚನೆ ಹೊರಡಿಸಿದೆ.

Indian Army to induct one lakh 9 mm Pistols
IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಇಶಾಪೋರ್‌ನ ರೈಫಲ್ ಫ್ಯಾಕ್ಟರಿಯಿಂದ ಅಸ್ತಿತ್ವದಲ್ಲಿರುವ 9mm ಸೆಮಿ-ಆಟೋಮ್ಯಾಟಿಕ್, ಮ್ಯಾಗಜೀನ್-ಫೆಡ್ ಪಿಸ್ತೂಲ್ ಅನ್ನು ಭವಿಷ್ಯದಲ್ಲಿ ಖರೀದಿಸಲಾಗುವ ಪಿಸ್ತೂಲ್‌ಗಳೊಂದಿಗೆ ಬದಲಾಯಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹೊಸ ಪಿಸ್ತೂಲ್‌ಗಳು ಹಳೆಯ ಶಸ್ತ್ರಾಸ್ತ್ರಗಳನ್ನು ಆಧುನೀಕರಿಸಲು ಆಂಬಿಡೆಕ್ಸ್ಟ್ರಸ್ ನಿಯಂತ್ರಣಗಳು, ಸಪ್ರೆಸರ್‌ಗಳು ಮತ್ತು ಆಕ್ಸೆಸರಿ ಟ್ರ್ಯಾಕ್ ಒಳಗೊಂಡಿರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com