ಭಾರತ ಇನ್ನೂ 'ಹಿಂದೂ-ಮುಸ್ಲಿಂ' ಸಮಸ್ಯೆ ಎದುರಿಸುತ್ತಿದೆ, ಇದಕ್ಕೆ ಕಾಂಗ್ರೆಸ್ ಕಾರಣ: ನಿತಿನ್ ಗಡ್ಕರಿ

1947 ರ ನಂತರ, ಕಾಂಗ್ರೆಸ್ ದೇಶವನ್ನು ಆಳುವ ಅವಕಾಶವನ್ನು ಪಡೆಯಿತು. ತಮ್ಮ ಚಿಂತನೆಯ ಆಧಾರದ ಮೇಲೆ, ಕೆಲವು ಬೀಜಗಳನ್ನು ಬಿತ್ತಿದರು.ಸ್ವಾತಂತ್ರ್ಯದ ನಂತರ, ವಿವಿಧ ರೀತಿಯ ಹಿಂದೂ-ಮುಸ್ಲಿಂ ಸಮಸ್ಯೆಗಳು ಹುಟ್ಟಿಕೊಂಡವು
 Nitin Gadkari
ನಿತಿನ್ ಗಡ್ಕರಿonline desk
Updated on

ನವದೆಹಲಿ: ಕಾಂಗ್ರೆಸ್‌ನ ಜಾತ್ಯತೀತತೆಯ ಕಲ್ಪನೆ ಮತ್ತು ಮತ ಬ್ಯಾಂಕ್ ರಾಜಕೀಯದಿಂದಾಗಿ ದೇಶವು ಇನ್ನೂ ಸಮಾಜದಲ್ಲಿ ಹಿಂದೂ-ಮುಸ್ಲಿಂ ಸಮಸ್ಯೆ ಎದುರಿಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, "ಜಾತ್ಯತೀತ" ಎಂಬ ಇಂಗ್ಲಿಷ್ ಪದದ ಅರ್ಥ ಹಿಂದಿಯಲ್ಲಿ "ಸರ್ವ ಧರ್ಮ ಭಾವ" ಅಥವಾ ಇಂಗ್ಲಿಷ್‌ನಲ್ಲಿ "ಎಲ್ಲರಿಗೂ ನ್ಯಾಯ ಮತ್ತು ಎಲ್ಲರನ್ನೂ ಸಮಾಧಾನಪಡಿಸುವುದು ಎಂದು ಹೇಳಿದ್ದಾರೆ.

"1947 ರ ನಂತರ, ಕಾಂಗ್ರೆಸ್ ದೇಶವನ್ನು ಆಳುವ ಅವಕಾಶವನ್ನು ಪಡೆಯಿತು. ಅದರ ಚಿಂತನೆಯ ಆಧಾರದ ಮೇಲೆ, ಕೆಲವು ಬೀಜಗಳನ್ನು ಬಿತ್ತಿದರು... ಸ್ವಾತಂತ್ರ್ಯದ ನಂತರ, ವಿವಿಧ ರೀತಿಯ ಹಿಂದೂ-ಮುಸ್ಲಿಂ ಸಮಸ್ಯೆಗಳು ಹುಟ್ಟಿಕೊಂಡವು" ಎಂದು ತಿಳಿಸಿದ್ದಾರೆ.

ದೇಶವು ಇನ್ನೂ ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಸೃಷ್ಟಿಸಿದ್ದು ಕಾಂಗ್ರೆಸ್‌ನ "ಜಾತ್ಯತೀತವಾದ" (ಜಾತ್ಯತೀತತೆ) ಮತ್ತು ಅದರ ವಿವರಣೆ ಎಂದು ಗಡ್ಕರಿ ಸಮರ್ಥನೆ ನೀಡಿದ್ದಾರೆ,

 Nitin Gadkari
ಕರ್ನಾಟಕಕ್ಕೆ 3,187 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ: ನಿತಿನ್ ಗಡ್ಕರಿ

ಜಾತ್ಯತೀತ ಪದದ ಅರ್ಥವನ್ನು ನೀವು ನಿಘಂಟಿನಲ್ಲಿ ಕಂಡುಕೊಳ್ಳಬಹುದು. ಅದರ ಅರ್ಥ 'ಧರ್ಮನಿರ್ಪೇಕ್ಷ' ಅಲ್ಲ. ಜಾತ್ಯತೀತ ಎಂದರೆ 'ಸರ್ವ ಧರ್ಮ ಸಮಭಾವ ಎಂಬುದು ನಿಜವಾದ ಅರ್ಥ" ಎಂದು ಗಡ್ಕರಿ ಹೇಳಿದರು.

ದುರದೃಷ್ಟವಶಾತ್, 1947 ರ ನಂತರ ಧರ್ಮನಿರ್ಪೇಕ್ಷದ ವ್ಯಾಖ್ಯಾನದ ರೂಪದಲ್ಲಿ ಉದ್ಭವಿಸಿದ ರಾಜಕೀಯ ಸಮಸ್ಯೆ ಇನ್ನೂ ನಮಗೆ ತೊಂದರೆಗಳನ್ನು ಸೃಷ್ಟಿಸುತ್ತಿದೆ, ಕಾಂಗ್ರೆಸ್ ತನ್ನ ಮತ ಬ್ಯಾಂಕ್ ರಾಜಕೀಯದ ಭಾಗವಾಗಿ ಅಳವಡಿಸಿಕೊಂಡ ನೀತಿಗಳು ಸಮಸ್ಯೆಗಳನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು.

ಭವಿಷ್ಯದಲ್ಲಿ ಅವು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಹಿಂದೆ ಮಾಡಿದ "ತಪ್ಪುಗಳಿಂದ" ಕಲಿಯಲು ಇತಿಹಾಸದ ಮರುಕಳಿಕೆಯ ಅಗತ್ಯವಿದೆ ಎಂದು ಕೇಂದ್ರ ಸಚಿವರು ಹೇಳಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಪ್ರತಿಪಾದಿಸಿದ್ದನ್ನು ಪುನರುಚ್ಚರಿಸಿದ ಗಡ್ಕರಿ, "ಭಾರತ ಜಾತ್ಯತೀತ ದೇಶ, ಅದು ಜಾತ್ಯತೀತವಾಗಿತ್ತು ಮತ್ತು ಅದು ಜಾತ್ಯತೀತವಾಗಿಯೇ ಉಳಿಯುತ್ತದೆ" ಎಂದು ಹೇಳಿದರು.

ಬಿಜೆಪಿ-ಆರ್‌ಎಸ್‌ಎಸ್‌ನಿಂದಾಗಿ ಅಲ್ಲ. ಇದು ಭಾರತೀಯ 'ಸಂಸ್ಕೃತಿ', ಹಿಂದೂ ಸಂಸ್ಕೃತಿ ಮತ್ತು ಸನಾತನ ಸಂಸ್ಕೃತಿಯಿಂದಾಗಿ, ಅದರಲ್ಲಿ ನಾವು 'ವಿಶ್ವ ಕಾ ಕಲ್ಯಾಣ್ ಹೋ' (ಜಗತ್ತು ಆಶೀರ್ವದಿಸಲ್ಪಡಲಿ) ಎಂದು ಹೇಳುತ್ತೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com