

ನೈನಿತಾಲ್: ಉತ್ತರಾಖಂಡದ ನೈನಿತಾಲ್ ನಲ್ಲಿ ಕಾರಿನಲ್ಲಿ ಮಲಗಿದ್ದ ಕಾರು ಚಾಲಕ ಅಲ್ಲಿಯೇ ಪ್ರಾಣ ಬಿಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಮಥುರಾದ ಮನೀಶ್ ಗಂಧರ್ ಎಂಬ ಟ್ಯಾಕ್ಸಿ ಚಾಲಕ ತನ್ನ ಕಾರಿನೊಳಗೆ ಮೃತಪಟ್ಟಿರುವುದು ಪತ್ತೆಯಾಗಿದೆ. ಟ್ಯಾಕ್ಸಿ ಚಾಲಕ ಡಿಸೆಂಬರ್ 27 ರಂದು ನೋಯ್ಡಾದಿಂದ ಪ್ರಯಾಣಿಕರನ್ನು ಕರೆದುಕೊಂಡು ಅದೇ ದಿನ ಪ್ರವಾಸಿ ತಾಣವಾದ ಉತ್ತರಾಖಂಡದ ನೈನಿತಾಲ್ ತಲುಪಿದನು.
ರಾೃತ್ರಿ ಪ್ರಯಾಣಿಕರು ರೂಮಿಗೆ ತೆರಳಿದರೆ ಚಾಲಕ ತನ್ನ ಕಾರಿನಲ್ಲೇ ಮಲಗಿದ್ದ, ರಾತ್ರಿ 9:00 ರ ಸುಮಾರಿಗೆ ಸುಖತಾಲ್‌ನಲ್ಲಿ ತನ್ನ ಕಾರನ್ನು ನಿಲ್ಲಿಸಿದ್ದ. ತೀವ್ರ ಚಳಿ ಇದ್ದಿದ್ದರಿಂದ ಬೆಚ್ಚಗಿರಲು ಇದ್ದಿಲಿಗೆ ಬೆಂಕಿ ಹಚ್ಚಿ ಅದನ್ನು ಕಾರಿನೊಳಗೆ ಇಟ್ಟು ಕಾರಿ ಕಿಟಕಿಗಳನ್ನು ಮುಚ್ಚಿ ಮಲಗಿದ್ದಾನೆ. ಆದರೆ ಇದ್ದಿಲಿನ ಹೊಗೆ ಹೊರಹೋಗಲಾಗದೇ ಕಾರಿನಲ್ಲೇ ಉಳಿದಿದ್ದರಿಂದ ಕಾರಿನಲ್ಲೇ ಉಸಿರುಗಟ್ಟಿ ಚಾಲಕ ದಾರುಣ ಸಾವನ್ನಪ್ಪಿದ್ದಾನೆ.
ಮರುದಿನ ಅಂದರೆ ಡಿಸೆಂಬರ್ 28 ರಂದು ಬೆಳಿಗ್ಗೆ, ಪಾರ್ಕಿಂಗ್ ಸಿಬ್ಬಂದಿ ಬಂದು ಕಾರಿನ ಚಾಲಕ ಪ್ರತಿಕ್ರಿಯಿಸಿಲ್ಲ. ಇದರಿಂದ ಅನುಮಾನಗೊಂಡ ಅವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರು ಬಂದು ಅವನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಆತ ಎಚ್ಚರವಾಗಲಿಲ್ಲ.
ಅಂತಿಮವಾಗಿ ಪೊಲೀಸರು ಕಿಟಕಿಯನ್ನು ಒಡೆದು ಅತನನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಎಚ್ಚರಗೊಂಡಿಲ್ಲ. ಕೊನೆಗೆ ಆತನ್ನು ಪರೀಕ್ಷಿಸಿದಾಗ ಆತ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಆತನನ್ನು ಪರಿಶೀಲಿಸಿದಾಗ ಆತನ ಬಾಯಿಂದ ನೊರೆ ಬಂದಿದೆ. ಇದು ಆತನ ದೇಹಕ್ಕೆ ವಿಷ ಹೊಕ್ಕಿರುವುದು ಸೂಚಿಸುತ್ತದೆ.
ಕೂಡಲೇ ಚಾಲಕನನ್ನು ಬಿಡಿ ಪಾಂಡೆ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಆತ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ ಟ್ಯಾಕ್ಸಿ ಚಾಲಕ ಮತ್ತು ಮಥುರಾ ಜಿಲ್ಲೆಯ ಸಿರೋಹಾ ಯಮುನಾಪರ್ ನಿವಾಸಿ ಮನೀಶ್ ಗಂಧರ್ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement