ಕೇಂದ್ರ ಬಜೆಟ್ 2025; ಮಧುಬನಿ ಸೀರೆಯುಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಏನಿದರ ವಿಶೇಷತೆ..?

ಪದ್ಮ ಪ್ರಶಸ್ತಿ ವಿಜೇತೆ ಬಿಹಾರದ ದುಲಾರಿ ದೇವಿ ಗೌರವಾರ್ಥ ನಿರ್ಮಲಾ ಸೀತಾರಾಮನ್ ಮಧುಬನಿ ಸೀರೆ ಧರಿಸಿದ್ದಾರೆ. ಈ ಸೀರೆಯನ್ನು ದುಲಾರಿ ದೇವಿ ಅವರು ನಿರ್ಮಲಾ ಅವರಿಗೆ ನೀಡಿದ್ದರು ಎನ್ನಲಾಗಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೀರೆ ಹಲವರ ಗಮನ ಸೆಳೆಯುತ್ತಿದೆ.

ನಿರ್ಮಲಾ ಅವರು ಈ ಬಾರಿ ಕೆನೆ ಬಣ್ಣದ ಮಧುಬನಿ ಸೀರೆ ಉಟ್ಟಿದ್ದು, ಕೆಂಪು ಬಣ್ಣದ ರವಿಕೆ, ಶಾಲು ತೊಟ್ಟಿದ್ದಾರೆ. ಪದ್ಮ ಪ್ರಶಸ್ತಿ ವಿಜೇತೆ ಬಿಹಾರದ ದುಲಾರಿ ದೇವಿ ಗೌರವಾರ್ಥ ನಿರ್ಮಲಾ ಸೀತಾರಾಮನ್ ಈ ಸೀರೆ ಧರಿಸಿದ್ದಾರೆ. ಈ ಸೀರೆಯನ್ನು ದುಲಾರಿ ದೇವಿ ಅವರು ನಿರ್ಮಲಾ ಅವರಿಗೆ ನೀಡಿದ್ದರು ಎನ್ನಲಾಗಿದೆ.

ಪ್ರತಿ ಬಾರಿಯೂ ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಅವರು ಧರಿಸುವ ಸೀರೆ ಟ್ರೆಂಡ್ ಆಗುತ್ತದೆ. ವಿಭಿನ್ನ ಸೀರೆಗಳನ್ನು ಉಟ್ಟುಕೊಂಡು ಬರುವ ಮೂಲಕ ನಿರ್ಮಲಾ ಅವರು ದೇಶದ ಜನತೆಯ ಗಮನ ಸೆಳೆಯುತ್ತಾರೆ.

ದುಲಾರಿ ದೇವಿ ಅವರು 2021 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಮಿಥಿಲಾ ಕಲಾ ಸಂಸ್ಥಾನದಲ್ಲಿ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮವೊಂದಕ್ಕಾಗಿ ಹಣಕಾಸು ಸಚಿವರು ಮಧುಬನಿಗೆ ಭೇಟಿ ನೀಡಿದ್ದಾಗ, ಅವರು ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು. ಬಿಹಾರದಲ್ಲಿ ಮಧುಬನಿ ಕಲೆಯ ಕುರಿತು ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ದುಲಾರಿ ದೇವಿ ಅವರು ಹಣಕಾಸು ಸಚಿವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು ಮತ್ತು ಬಜೆಟ್ ದಿನದಂದು ಅದನ್ನು ಧರಿಸುವಂತೆ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com