ಗುಜರಾತ್: ಆಳವಾದ ಕಂದಕಕ್ಕೆ ಉರುಳಿದ ಬಸ್; 5 ಮಂದಿ ಯಾತ್ರಿಕರು ಸಾವು, 35 ಮಂದಿಗೆ ಗಾಯ

ಸಪುತಾರಾ ಗಿರಿಧಾಮದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ನಸುಕಿನ ಜಾವ 4.15 ಗಂಟೆಗೆ ಆಳವಾದ ಕಂದಕಕ್ಕೆ ಬಿದ್ದಿದೆ.
Wreckage of a bus is seen after it fell into a gorge, in Dang district, Gujarat on Sunday.
ಕಂದಕಕ್ಕೆ ಉರುಳಿಬಿದ್ದ ಬಸ್
Updated on

ಡಾಂಗ್: ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ಭಾನುವಾರ ನಸುಕಿನ ಜಾವ ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುತ್ತಿದ್ದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಮೃತಪಟ್ಟು, 35 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳಲ್ಲಿ 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಪುತಾರಾ ಗಿರಿಧಾಮದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ನಸುಕಿನ ಜಾವ 4.15 ಗಂಟೆಗೆ ಆಳವಾದ ಕಂದಕಕ್ಕೆ ಬಿದ್ದಿದೆ ಎಂದು ಉಸ್ತುವಾರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಿ. ಪಾಟೀಲ್ ತಿಳಿಸಿದ್ದಾರೆ.

48 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ತಡೆಗೋಡೆಯನ್ನು ಮುರಿದು ಸುಮಾರು 35 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಐವರು ಸ್ಥಳದಲ್ಲೇ ಮೃತಪಟ್ಟು 17 ಮಂದಿ ಗಂಭೀರವಾಗಿ ಗಾಯಗೊಂಡರು. ಅವರನ್ನು ಅಹ್ವಾದ ನಾಗರಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಕ್ಷಣಾ ಕಾರ್ಯಾಚರಣೆ ಬಹುತೇಕ ಮುಗಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ಬಸ್ ಚಾಲಕನೂ ಸೇರಿದ್ದಾನೆ. ಸಮೀಪದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHC) ಒಟ್ಟು 35 ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದರು, 17 ಜನರನ್ನು ಜಿಲ್ಲೆಯ ಅಹ್ವಾದಲ್ಲಿರುವ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಧಾರ್ಮಿಕ ಸ್ಥಳವಾದ ತ್ರಯಂಬಕೇಶ್ವರದಿಂದ ಪ್ರಯಾಣಿಕರು ರಾತ್ರಿ ಗುಜರಾತ್‌ನ ದ್ವಾರಕಕ್ಕೆ ಹೊರಟರು.

ಗಿರಿಧಾಮದಿಂದ 2.5 ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದಾಗ ಅವರು ತಮ್ಮ ಪ್ರಯಾಣವನ್ನು ಪುನರಾರಂಭಿಸುವ ಮೊದಲು ಚಹಾ ವಿರಾಮಕ್ಕಾಗಿ ಸಪುತಾರದಲ್ಲಿ ಸ್ವಲ್ಪ ಸಮಯ ನಿಲ್ಲಿಸಿದ್ದರು.

ಮಧ್ಯಪ್ರದೇಶದ ಗುಣ, ಶಿವಪುರಿ ಮತ್ತು ಅಶೋಕ್ ನಗರ ಜಿಲ್ಲೆಗಳಿಂದ ಬಂದ ಯಾತ್ರಿಕರು ಡಿಸೆಂಬರ್ 23, 2024 ರಂದು ವಿವಿಧ ರಾಜ್ಯಗಳ ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ನಾಲ್ಕು ಬಸ್‌ಗಳಲ್ಲಿ ಹೊರಟಿದ್ದರು. ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ನಾಲ್ಕು ಬಸ್‌ಗಳಲ್ಲಿ ಒಂದು ಕಮರಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಡ್ಯಾಂಗ್ ಜಿಲ್ಲಾಧಿಕಾರಿ ಮಹೇಶ್ ಪಟೇಲ್ ತಿಳಿಸಿದ್ದಾರೆ.

ಮೃತರನ್ನು ಬಸ್ ಚಾಲಕ ರತನ್ ಲಾಲ್ ಜಾತವ್, ಭೋಲಾರಾಮ್ ಕೋಸ್ವಾ ಮತ್ತು ಬಿಜ್ರೋನಿ ಯಾದವ್ ಮತ್ತು ಇಬ್ಬರು ಮಹಿಳೆಯರು ಗುಡ್ಡಿಬಾಯಿ ಯಾದವ್ ಮತ್ತು ಕೈಲಾಶ್ಬಾಯಿ ಯಾದವ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿಯ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸಿತು.

Wreckage of a bus is seen after it fell into a gorge, in Dang district, Gujarat on Sunday.
ಪಂಜಾಬ್‌ನಲ್ಲಿ ಭೀಕರ ರಸ್ತೆ ಅಪಘಾತ: ವ್ಯಾನ್-ಟ್ರಕ್ ನಡುವೆ ಡಿಕ್ಕಿ, 9 ಮಂದಿ ದುರ್ಮರಣ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com