ಪಂಜಾಬ್‌ನಲ್ಲಿ ಭೀಕರ ರಸ್ತೆ ಅಪಘಾತ: ವ್ಯಾನ್-ಟ್ರಕ್ ನಡುವೆ ಡಿಕ್ಕಿ, 9 ಮಂದಿ ದುರ್ಮರಣ

ಜಲಾಲಾಬಾದ್‌ನ ಮದುವೆಯೊಂದರಲ್ಲಿ ವೇಟರ್‌ಗಳಾಗಿ ಕೆಲಸ ಮಾಡುತ್ತಿದ್ದ 20 ಮಂದಿಯನ್ನು ಮಹೀಂದ್ರಾ ಪಿಕಪ್ ವ್ಯಾನ್ ಹೊತ್ತೊಯ್ಯುತ್ತಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಂಡೀಗಢ: ಪಿಕಪ್ ವ್ಯಾನ್ ಮತ್ತು ಟ್ರಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 9 ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಗೋಲು ಕಾ ಮೂರ್ ಗ್ರಾಮದ ಬಳಿ ಶುಕ್ರವಾರ ನಡೆದಿದೆ.

ಜಲಾಲಾಬಾದ್‌ನ ಮದುವೆಯೊಂದರಲ್ಲಿ ವೇಟರ್‌ಗಳಾಗಿ ಕೆಲಸ ಮಾಡುತ್ತಿದ್ದ 20 ಮಂದಿಯನ್ನು ಮಹೀಂದ್ರಾ ಪಿಕಪ್ ವ್ಯಾನ್ ಹೊತ್ತೊಯ್ಯುತ್ತಿತ್ತು. ಈ ವೇಳೆ ಕ್ಯಾಂಟರ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ 9 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು. ಎಲ್ಲರನ್ನೂ ಫರೀದ್‌ಕೋಟ್‌ನಲ್ಲಿರುವ ಗುರು ಗೋಬಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ 5 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಿತ್ತು. ಫಿರೋಜ್‌ಪುರ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಸ್ಥಳೀಯ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದು.. ಗಾಯಾಳುಗಳನ್ನು ಜಲಾಲಾಬಾದ್‌ನಲ್ಲಿರುವ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುಹರ್ಸಹೈ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ

ಸಂಗ್ರಹ ಚಿತ್ರ
ಉತ್ತರ ಪ್ರದೇಶ ಮಿರ್ಜಾಪುರ ಬಳಿ ಅಪಘಾತ: ಪ್ರಯಾಗ್ ರಾಜ್ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ರಾಜ್ಯದ ಇಬ್ಬರು ಯುವಕರು ಸಾವು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com