ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೆಹಲಿ: 'ಚೋಲಿ ಕೆ ಪೀಚೆ ಕ್ಯಾ ಹೈ' ಎಂದ ವರ; ಸಿಟ್ಟಿಗೆದ್ದ ಮಾವ; ಮದುವೆಯೇ ಕ್ಯಾನ್ಸಲ್!

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತನ ಸ್ನೇಹಿತರು ವರನಿಗೆ ನೃತ್ಯ ಮಾಡಲು ಒತ್ತಾಯಿಸಿದರು. ಹಾಡು ಪ್ಲೇ ಆಗಲು ಪ್ರಾರಂಭಿಸಿದಾಗ, ವರ ಹೆಜ್ಜೆಹಾಕಲು ಮುಂದಾಗಿದ್ದಾನೆ.
Published on

ನವದೆಹಲಿ: ವರನೊಬ್ಬ ತನ್ನ ಮದುವೆಯಲ್ಲಿ ಬಾಲಿವುಡ್‌ನ ಜನಪ್ರಿಯ 'ಚೋಲಿ ಕೆ ಪೀಚೆ ಕ್ಯಾ ಹೈ' ಹಾಡಿಗೆ ನೃತ್ಯ ಮಾಡಿ ಸಂಕಟಕ್ಕೆ ಸಿಲುಕಿಕೊಂಡಿದ್ದಾನೆ. ಹಾಡಿಗೆ ನೃತ್ಯ ಮಾಡುವಂತೆ ವರನ ಸ್ನೇಹಿತರು ಬಲವಂತ ಪಡಿಸಿದ್ದರಿಂದ ಹೆಜ್ಜೆ ಹಾಕಿದ ನಂತರ ವಧುವಿನ ತಂದೆ ಮದುವೆಯನ್ನು ರದ್ದುಗೊಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ವರನು ಮೆರವಣಿಗೆಯೊಂದಿಗೆ ವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತನ ಸ್ನೇಹಿತರು ವರನಿಗೆ ನೃತ್ಯ ಮಾಡಲು ಒತ್ತಾಯಿಸಿದರು. ಹಾಡು ಪ್ಲೇ ಆಗಲು ಪ್ರಾರಂಭಿಸಿದಾಗ, ವರ ಹೆಜ್ಜೆಹಾಕಲು ಮುಂದಾದನು. ಕೆಲವು ಅತಿಥಿಗಳು ಕೂಡ ಆತನನ್ನು ಹುರಿದುಂಬಿಸಿದ್ದಾರೆ. ಆದರೆ, ವರನ ಈ ನಡೆಯಿಂದ ವಧುವಿನ ತಂದೆ ಕೋಪಗೊಂಡಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಹೇಳಿದೆ.

ವರ ನೃತ್ಯ ಮಾಡಿರುವುದನ್ನು ಅನುಚಿತ ಪ್ರದರ್ಶನ ಎಂದು ಕರೆದ ಅವರು ತಕ್ಷಣವೇ ಮದುವೆಯನ್ನು ರದ್ದುಗೊಳಿಸಿದ್ದಾರೆ. ವರನ ಈ ನಡೆಯು ತನ್ನ ಕುಟುಂಬದ ಮೌಲ್ಯಗಳನ್ನು ಅವಮಾನಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮದುವೆ ನಿಂತಿದ್ದಕ್ಕೆ ವಧು ಕಣ್ಣೀರು ಹಾಕಿದ್ದಾರೆ. ವರನು ತನ್ನ ಮಾವನೊಂದಿಗೆ ಮಾತುಕತೆ ಆಡಲು ಪ್ರಯತ್ನಿಸಿದರಾದರೂ ಅದು ಪ್ರಯೋಜನವಾಗಲಿಲ್ಲ.

ಈ ಸುದ್ದಿಯು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
ಉ.ಪ್ರ: ಊಟದಲ್ಲಿ ಗೋ ಮಾಂಸ ನೀಡಲು ನಿರಾಕರಿಸಿದ್ದಕ್ಕೆ ಮದುವೆ ರದ್ದು

'ಮಾವ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ, ಇಲ್ಲದಿದ್ದರೆ, ಅವರು ಈ ನೃತ್ಯವನ್ನು ಪ್ರತಿದಿನ ನೋಡಬೇಕಾಗಿತ್ತು' ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

'ಇದು ಅರೇಂಜ್ಡ್ ಮ್ಯಾರೇಜ್ ಆಗಿರಲಿಲ್ಲ, ಇದು ಎಲಿಮಿನೇಷನ್ ರೌಂಡ್ ಆಗಿತ್ತು' ಎಂದು ಮತ್ತೊಬ್ಬರು ಬರೆದಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಚಂದೌಲಿಯಲ್ಲಿ ಊಟ ಬಡಿಸಲು ವಿಳಂಬ ಮಾಡಿದ ಕಾರಣ ವರನೊಬ್ಬ ತನ್ನ ಮದುವೆಯನ್ನು ರದ್ದುಗೊಳಿಸಿದ್ದ. ಅದೇ ದಿನ, ಅವನು ತನ್ನ ಸೋದರಸಂಬಂಧಿಯನ್ನು ಮದುವೆಯಾಗಿದ್ದನು. ವಧುವಿನ ಮನೆಯವರು ಪೊಲೀಸ್ ದೂರು ದಾಖಲಿಸಿದ್ದು, ಮದುವೆಗಾಗಿ ಖರ್ಚು ಮಾಡಿದ್ದ 7 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದಾರೆ.

X

Advertisement

X
Kannada Prabha
www.kannadaprabha.com