
ಬರೇಲಿ: ತನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಬೆದರಿಸಿ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಪಾಪಿಯನ್ನು ಮಹಿಳೆಯೊಬ್ಬರು ಸೆಕ್ಸ್ ಮಾಡುವಾಗಲೇ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಇಲ್ಲಿನ ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಘುರ್ ಸಂಸಪುರ ಗ್ರಾಮದಲ್ಲಿ ಮಹಿಳೆಯೊಬ್ಬರು 32 ವರ್ಷದ ಇಕ್ಬಾಲ್ ಎಂಬಾತನನ್ನು ಕೊಂದು ಹಾಕಿದ್ದಾರೆ. ಹತ್ಯೆ ನಡೆದು 2 ದಿನಗಳ ಬಳಿಕ ಇಕ್ಬಾಲ್ ಮೃತದೇಹ ಪತ್ತೆಯಾದ ಬಳಿಕ ಈ ಘಟನೆ ಬಯಲಾಗಿದ್ದು, ಆತನನ್ನು ಕೊಂದಿದ್ದು ನಾನೇ ಎಂದು 35 ವರ್ಷದ ಮಹಿಳೆ ಶಹನಾಜ್ ಪೊಲೀಸರಿಗೆ ಶರಣಾಗಿದ್ದಾರೆ.
ಪೊಲೀಸರ ಬಳಿ ತನಗಾದ ದೌರ್ಜನ್ಯವನ್ನು ವಿವರಿಸಿರುವ ಮಹಿಳೆ ಶಹನಾಜ್, 'ಇಕ್ಬಾಲ್ ತನ್ನ ಖಾಸಗಿ ಫೋಟೋಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಮುಂದಿಟ್ಟುಕೊಂಡು ನಿರಂತರವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಬೆದರಿಸಿ ನನ್ನನ್ನು ತನ್ನ ಕಾಮತೃಷೆ ಬಳಸಿಕೊಳ್ಳುತ್ತಿದ್ದ. ಸಾಕಷ್ಟು ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆತನ ಕಿರುಕುಳದಿಂದ ಬೇಸತ್ತು ಆತನನ್ನು ಕರೆದು ಸೆಕ್ಸ್ ಮಾಡುವಾಗ ಹತ್ಯೆ ಮಾಡಿದೆ' ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಶಹನಾಜ್-ಇಕ್ಬಾಲ್ ನಡುವೆ ಅಕ್ರಮ ಸಂಬಂಧ
ವೃತ್ತಿಯಲ್ಲಿ ಇಕ್ಬಾಲ್ ಸೀರೆಗಳಿಗೆ ಡಿಸೈನ್ ಮಾಡುವ ವ್ಯಕ್ತಿಯಾಗಿದ್ದು, ಮನೆ ಮನೆಗೆ ತೆರಳಿ ಸೀರೆ ಮಾರಾಟ ಮಾಡುತ್ತಿದ್ದ. ಇದೇರೀತಿ ಸೀರೆಗೆ ಡಿಸೈನ್ ಮಾಡಿಸಲು ಶಹನಾಜ್ ಆತನ ಬಳಿ ಬಂದಿದ್ದರು. ಆಗ ಇಬ್ಬರು ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಬಳಿಕ ಪರಿಚಯ ಸ್ನೇಹವಾಗಿ, ಸ್ನೇಹ ಪರಸ್ಪರ ಸಂಬಂಧಕ್ಕೆ ತಿರುಗಿದೆ. ಇಬ್ಬರೂ ಮೊಬೈಲ್ ನಲ್ಲಿ ವಾಟ್ಸಪ್ ಸಂದೇಶ ರವಾನಿಸಿಕೊಳ್ಳುತ್ತಿದ್ದರು. ಒಮ್ಮೆ ಇಕ್ಬಾಲ್ ತನ್ನ ಮನೆಯವರು ಊರಿಗೆ ಹೋಗಿದ್ದಾರೆ. ನೀನು ಬಾ ಎಂದು ಕರೆದಿದ್ದಾನೆ. ಈ ವೇಳೆ ಮನೆಗೆ ಬಂದ ಶಹನಾಜ್ ಳೊಂದಿಗೆ ಆತ ಲೈಂಗಿಕ ಕ್ರಿಯೆ ನಡೆಸಿದ್ದು ಅದನ್ನೂ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.
ಗಂಡನಿಗೆ ನಿದ್ರೆ ಮಾತ್ರೆ ಹಾಕಿದ ಶಹನಾಜ್
ಈ ಘಟನೆ ಬಳಿಕ ಇಕ್ಬಾಲ್ ಮತ್ತೆ ಆಕೆಯನ್ನು ಕರೆದಾಗ ಆಕೆ ನಿರಾಕರಿಸಿದ್ದಾಳೆ. ಮನೆಯಲ್ಲಿ ಗಂಡನಿದ್ದು ಅತನಿಗೆ ವಿಚಾರ ತಿಳಿದರೆ ಕಷ್ಟ ಎಂದು ಹಿಂಜರಿದಿದ್ದಾಳೆ. ಈ ವೇಳೆ ಇಕ್ಬಾಲ್ ಆಕೆಗೆ ಕೆಲ ನಿದ್ರೆ ಮಾತ್ರೆಗಳನ್ನು ನೀಡಿ ಆತನಿಗೆ ಹಾಲಿನಲ್ಲಿ ಹಾಕಿಕೊಟ್ಟು ಆತ ಮಲಗಿದ ಬಳಿಕ ಬಾ ಎಂದು ಕರೆದಿದ್ದಾನೆ. ಶಹನಾಜ್ ಕೂಡ ಆತ ನೀಡಿದ ನಿದ್ರೆ ಮಾತ್ರೆಗಳನ್ನು ಹಾಲಿಗೆ ಹಾಕಿ ಕುಡಿಸಿದ್ದಾಳೆ. ಆತ ಮಲಗಿದ ಬಳಿಕ ಅದೇ ಮನೆಯಲ್ಲೇ ಶಹನಾಜ್ ಮತ್ತು ಇಕ್ಬಾಲ್ ಕಾಮಕೇಳಿ ನಡೆಸಿದ್ದಾರೆ.
ಲೈಂಗಿಕಕ್ರಿಯೆಗೆ ಪೀಡಿಸುತ್ತಿದ್ದ ಇಕ್ಬಾಲ್
ಇನ್ನು ಈ ಅಕ್ರಮ ಸಂಬಂಧ ಮುಂದುವರೆದಂತೆಯೇ ಇಕ್ಬಾಲ್ ತನಗೆ ಯಾವಾಗ ಬೇಕೋ ಆಗ. ಹಗಲು ರಾತ್ರಿ ಎಂಬುದಿಲ್ಲದೇ ಶಹನಾಜ್ ಳನ್ನು ಕರೆಯುತ್ತಿದ್ದ. ಸಾಕಷ್ಟು ಬಾರಿ ಶಹನಾಜ್ ಬೇಡ ಎಂದರೂ ಆತ ತನ್ನ ಬಳಿ ನಿನ್ನ ಖಾಸಗಿ ಫೋಟೋ, ಸಂದೇಶ ಮತ್ತು ನಮ್ಮಿಬ್ಬರ ವಿಡಿಯೋ ಇದೆ ಎಂದು ಹೇಳಿ ಆಕೆಯನ್ನು ಬೆದರಿಸಿ ಕರೆಸಿಕೊಳ್ಳುತ್ತಿದ್ದ. ಆತನ ಈ ವರ್ತನೆಯಿಂದ ಬೇಸತ್ತಿದ್ದ ಶಹನಾಜ್ ಆತನಿಗೆ ಒಂದು ಗತಿಕಾಣಿಸಲು ನಿರ್ಧರಿಸಿದ್ದಳು.
ತಾನೇ ಇಕ್ಬಾಲ್ ಗೆ ಕರೆ ಮಾಡಿದ್ದ ಶಹನಾಜ್
ಇಕ್ಬಾಲ್ ನ ಕಿರುಕುಳ ಹೆಚ್ಚಾಗುತ್ತಲೇ ಆತನಿಗೆ ಒಂದು ಕಾಣಿಸಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿದ್ದ ಶಹನಾಜ್ ಒಂದು ದಿನ ಆತನಿಗೆ ಕರೆ ಮಾಡಿದ್ದಾಳೆ. ಅಲ್ಲದೆ ಅದೇ ದಿನ ತನ್ನ ಗಂಡನಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಆತ ಮಲಗಿದ ಬಳಿಕ ರಾತ್ರಿ 11.40ರ ಸುಮಾರಿನಲ್ಲಿ ಇಕ್ಬಾಲ್ ಮನೆಗೆ ಹೋಗಿದ್ದಾಳೆ. ಇಕ್ಬಾಲ್ ಮನೆಗೆ ಹೋದ ಶಹನಾಜ್ ಆಪ್ತವಾಗಿರುವಂತೆ ನಟಿಸಿ ಆತ ಸೆಕ್ಸ್ ಮಾಡುವಾಗ ಹರಿತವಾದ ಚಾಕುವಿನಿಂದ ಆತನ ಕತ್ತು ಸೀಳಿದ್ದಾಳೆ. ತೀವ್ರ ರಕ್ತಸ್ರಾವದಿಂದ ಇಕ್ಬಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಬಳಿಕ ಶಹನಾಜ್ ಮನೆಗೆ ಹಿಂದಿರುಗಿದ್ದಾಳೆ.
ಮರುದಿನ ಬೆಳಿಗ್ಗೆ ನೆರೆಹೊರೆಯವರು ಇಕ್ಬಾಲ್ ಅವರ ಬಾಗಿಲು ತೆರೆದಿರುವುದನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಆತ ಶವವಾಗಿ ಬಿದ್ದಿದ್ದ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ವಿಚಾರ ತಿಳಿಯುತ್ತಲೇ ಆಕೆಯೇ ಪೊಲೀಸರಿಗೆ ಶರಣಾಗಿದ್ದಾಳೆ.
ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಉತ್ತರ) ಮುಖೇಶ್ ಚಂದ್ರ ಮಿಶ್ರಾ, 35 ವರ್ಷದ ಆರೋಪಿ ಮಹಿಳೆ ಶಹನಾಜ್ ರನ್ನು ಭಾನುವಾರ ಬಂಧಿಸಿ ಕೊಲೆ ಆರೋಪ ಹೊರಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
Advertisement