Congress Slams Ally AAP As It Faces Delhi Rout
ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಕೇಜ್ರಿವಾಲ್

Delhi Election Results: 'AAP ಸೋಲಿಗೆ ನಾವು ಜವಾಬ್ದಾರರಲ್ಲ.. ಆ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಕೆಲಸವಲ್ಲ'- Congress

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷವಾಗಿರುವ ಎಎಪಿ ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ಅವಧಿಗೆ ಗೆಲ್ಲುವ ಪ್ರಯತ್ನದಲ್ಲಿ ವಿಫಲವಾಗಿವೆ.
Published on

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಕಾಂಗ್ರೆಸ್ ಪಕ್ಷ ಜವಾಬ್ದಾರಿಯಲ್ಲ.. ಆ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಕೆಲಸವಲ್ಲ ಎಂದು ಕಾಂಗ್ರೆಸ್ ಹೇಳಿದೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಸೋಲಿನತ್ತ ಮುಖ ಮಾಡಿದ್ದು, ಬಿಜೆಪಿ ಭಾರಿ ಅಂತರದ ಗೆಲುವಿನತ್ತ ದಾಪುಗಾಲಿರಿಸಿದೆ. ಈ ವರೆಗಿನ ಫಲಿತಾಂಶಗಳ ಅನ್ವಯ ಒಟ್ಟು 70ಕ್ಷೇತ್ರಗಳ ಪೈಕಿ ಬಿಜೆಪಿ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಎಪಿ 27 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೂ ದೆಹಲಿ ಜನತೆ ಶಾಕ್ ನೀಡಿದ್ದು, ಇಬ್ಬರೂ ನಾಯಕರು ಸೋಲು ಕಂಡಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷವಾಗಿರುವ ಎಎಪಿ ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ಅವಧಿಗೆ ಗೆಲ್ಲುವ ಪ್ರಯತ್ನದಲ್ಲಿ ವಿಫಲವಾಗಿವೆ. ದೆಹಲಿ ಚುನಾವಣಾ ಫಲಿತಾಂಶ ಬೆನ್ನಲ್ಲೇ ಎಎಪಿ ಸೋಲಿಗೆ ಕಾಂಗ್ರೆಸ್ ಕಾರಣ ಎಂಬ ಟೀಕೆಗಳು ಉದ್ಭವಾಗಿದ್ದು, ಈ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ' AAP ಸೋಲಿಗೆ ನಾವು ಜವಾಬ್ದಾರರಲ್ಲ.. ಆ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಕೆಲಸವಲ್ಲ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ, 'ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವುದು ಕಾಂಗ್ರೆಸ್‌ನ ಜವಾಬ್ದಾರಿಯಲ್ಲ. ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಕಾಂಗ್ರೆಸ್‌ನ ಮೇಲಿಲ್ಲ... ನಾವು ಫಲವತ್ತಾದ ರಾಜಕೀಯ ಭದ್ರಕೋಟೆಗಳನ್ನು ಹುಡುಕುತ್ತೇವೆ ಮತ್ತು ಇವುಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ದೆಹಲಿಯು ನಾವು 15 ವರ್ಷಗಳಿಂದ ಸರ್ಕಾರದಲ್ಲಿರುವ ಸ್ಥಳವಾಗಿದೆ. ಇಲ್ಲಿ ಯಾವುದೇ ಪಕ್ಷದ ಮೇಲೂ ಕಾಂಗ್ರೆಸ್ ಅವಲಂಬಿತವಾಗಿಲ್ಲ ಎಂದು ಹೇಳಿದರು.

Congress Slams Ally AAP As It Faces Delhi Rout
Delhi poll result: ನಿಮ್ಮಲ್ಲೇ ನೀವು ಇನ್ನಷ್ಟು ಕಿತ್ತಾಡಿ, ಒಬ್ಬರನ್ನೊಬ್ಬರು ಮುಗಿಸಿಬಿಡಿ!; APP, Congress ಕುರಿತು Omar Abdullah ಟ್ರೋಲ್

ಅಂತೆಯೇ "ನಮ್ಮ ಜವಾಬ್ದಾರಿ ಎಎಪಿಯನ್ನು ಗೆಲ್ಲಿಸುವುದು ಅಲ್ಲ.. ನಮ್ಮ ಜವಾಬ್ದಾರಿ ಉತ್ಸಾಹಭರಿತ ಪ್ರಚಾರವನ್ನು ನಡೆಸುವುದು ಮತ್ತು ಈ ಚುನಾವಣೆಯಲ್ಲಿ (ಅಥವಾ ಯಾವುದೇ ಇತರ) ನಮಗೆ ಸಾಧ್ಯವಾದಷ್ಟು ಬಲವಾಗಿ ಸ್ಪರ್ಧಿಸುವುದು ಎಂದು ಹೇಳಿದ್ದಾರೆ.

ಅಂತೆಯೇ ಎಎಪಿ ಸೋಲಿಗೆ ಕಾಂಗ್ರೆಸ್ ಕಾರಣ ಎಂಬ ತರ್ಕದ ಪ್ರಕಾರ... ಅರವಿಂದ್ ಕೇಜ್ರಿವಾಲ್ ಗೋವಾ, ಹರಿಯಾಣ, ಗುಜರಾತ್, ಉತ್ತರಾಖಂಡ... (ಪ್ರತಿಯೊಂದು ರಾಜ್ಯದಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲು) ಹೋಗಿದ್ದರು...ಆ ಪೈಕಿ ಗೋವಾ ಮತ್ತು ಉತ್ತರಾಖಂಡದಲ್ಲಿ, ನಮ್ಮ ಮತ್ತು ಬಿಜೆಪಿ ನಡುವಿನ ಮತ-ಪಾಲು ವ್ಯತ್ಯಾಸವು ಎಎಪಿಗೆ ನಿಖರವಾಗಿ ಸಿಕ್ಕಿತು.

ಒಂದು ವೇಳೆ ಅಲ್ಲಿ ಹಾಗಾಗದಿದ್ದರೆ ನಾವು ಬಿಜೆಪಿ ಪಕ್ಷವನ್ನು ನಿರಾಯಾಸವಾಗಿ ಸೋಲಿಸುತ್ತಿದ್ದೆವು. ಗೋವಾದಲ್ಲಿ, ಬಿಜೆಪಿ ಶೇ. 40.3 ರಷ್ಟು ಮತಗಳನ್ನು ಪಡೆದರೆ, ಕಾಂಗ್ರೆಸ್ ಶೇ. 13.5 ಮತ್ತು ಎಎಪಿ ಶೇ. 12.8 ರಷ್ಟು ಮತಗಳನ್ನು ಪಡೆದಿವೆ. ಉತ್ತರಾಖಂಡದಲ್ಲಿ, ಬಿಜೆಪಿ ಶೇ. 44.3, ಕಾಂಗ್ರೆಸ್ 37.9 ಮತ್ತು ಎಎಪಿ ಶೇ. 4.82 ಮತಗಳನ್ನು ಪಡೆದಿದ್ದವು ಎಂದು ಹೇಳಿದರು.

Congress Slams Ally AAP As It Faces Delhi Rout
Delhi Election Results 2025: Congress ಶೂನ್ಯದಲ್ಲೂ ಹ್ಯಾಟ್ರಿಕ್ ಸಾಧನೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com