
ನವದೆಹಲಿ: ದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಭಾರತದಲ್ಲಿ ದ್ವೇಷ ಭಾಷಣವು 2024ರಲ್ಲಿ ಆತಂಕಗೊಳಿಸುವಷ್ಟು ಏರಿಕೆ ಕಂಡಿದೆ ಎಂದು ಅಮೆರಿಕ ಮೂಲದ ಚಿಂತಕರ ಚಾವಡಿ ಹೇಳಿದೆ. ಆಡಳಿತ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಹಿಂದೂ ರಾಷ್ಟ್ರ ಚಳುವಳಿಯ ಸೈದ್ಧಾಂತಿಕ ಮಹತ್ವಾಕಾಂಕ್ಷೆಗಳೊಂದಿಗೆ ಆಳವಾಗಿ ಹೆಣೆದುಕೊಂಡಿದೆ ಎಂದು ಇಂಡಿಯಾ ಹೇಟ್ ಲ್ಯಾಬ್ (ಐಎಚ್‌ಎಲ್) ವರದಿಯಲ್ಲಿ ತಿಳಿಸಿದೆ.
ಕಳೆದ ವರ್ಷ ನಡೆದ ಜಿದ್ದಾಜಿದ್ದಿನ ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು, ಬಹುಸಂಖ್ಯಾತ ಹಿಂದೂ ಮತಗಳನ್ನು ಕ್ರೋಢಿಕರಿಸುವ ಪ್ರಯತ್ನದಲ್ಲಿ ತಮ್ಮ ಪ್ರಚಾರದ ಸಮಯದ ವೇಳೆ ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳನ್ನು ಮಾಡಿದ್ದರು ಎಂದು ಆರೋಪಿಸಿದೆ. ಬಿಜೆಪಿ ರ್ಯಾಲಿಗಳಲ್ಲಿ, ಅವರು ಮುಸ್ಲಿಮರನ್ನು 'ನುಸುಳುಕೋರರು' ಎಂದು ಉಲ್ಲೇಖಿಸಿದ್ದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಗೆದ್ದರೆ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡುತ್ತದೆ ಎಂಬ ಹೇಳಿಕೆಗಳು ಬಂದಿದ್ದವು.
ಜೂನ್‌ನಲ್ಲಿ ಸತತ ಮೂರನೇ ಅವಧಿಗೆ ಮೋದಿ ಪ್ರಧಾನಿದರು. ಆದರೆ ಬಿಜೆಪಿಗೆ ಆಘಾತಕಾರಿ ಚುನಾವಣಾ ಹಿನ್ನಡೆಯಿಂದಾಗಿ ದಶಕದಲ್ಲಿ ಮೊದಲ ಬಾರಿಗೆ ಸಂಪೂರ್ಣ ಬಹುಮತವಿಲ್ಲದೆ ಉಳಿದ ಮಿತ್ರಪಕ್ಷಗಳನ್ನು ಸೇರಿಸಿಕೊಂಡು ಸಮ್ಮಿಶ್ರ ಸರ್ಕಾರವನ್ನು ರಚಿಸಿದೆ.
ಬಿಜೆಪಿಯ ಹಿಂದೂ ರಾಷ್ಟ್ರೀಯತಾವಾದಿ ಭಾಷಣಗಳು ಭಾರತದ 220 ಮಿಲಿಯನ್‌ಗಿಂತಲೂ ಹೆಚ್ಚಿರುವ ಮುಸ್ಲಿಂರು ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗುವಂತೆ ಮಾಡಿತ್ತು. ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ದ್ವೇಷ ಭಾಷಣ ಘಟನೆಗಳ ಸಂಖ್ಯೆ 2023ರಲ್ಲಿ 668 ರಿಂದ 2024ರಲ್ಲಿ 1,165ಕ್ಕೆ ಏರಿತು. ಇದು ಶೇ. 74.4ರಷ್ಟು ಹೆಚ್ಚಳವಾಗಿದೆ ಎಂದು ಐಎಚ್‌ಎಲ್ ವರದಿ ಹೇಳಿದೆ. 2024 ಸಾರ್ವತ್ರಿಕ ಚುನಾವಣಾ ವರ್ಷವಾಗಿತ್ತು. ಹೀಗಾಗಿ ಬಿಜೆಪಿಗರು ತಮ್ಮ ಭಾಷಣಗಳಲ್ಲಿ ಶೇಕಡ 98.5ರಷ್ಟು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿತ್ತು. ಅವುಗಳಲ್ಲಿ ಮೂರನೇ ಎರಡರಷ್ಟು ಹೆಚ್ಚು ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಸರ್ಕಾರವಿರುವ ರಾಜ್ಯಗಳಲ್ಲಿ ನಡೆಯುತ್ತಿದ್ದವು ಎಂದು ವರದಿ ತಿಳಿಸಿದೆ.
450ಕ್ಕೂ ಹೆಚ್ಚು ದ್ವೇಷ ಭಾಷಣಗಳನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಅವುಗಳಲ್ಲಿ 63ಕ್ಕೆ ಮೋದಿ ಅವರೇ ಕಾರಣ ಎಂದು ವರದಿ ಹೇಳಿದೆ. ಈ ಆರೋಪಗಳನ್ನು ಬಿಜೆಪಿ ಸುಳ್ಳು ಎಂದು ತಿರಸ್ಕರಿಸಿದೆ. ಮುಸ್ಲಿಮರನ್ನು ನಿರ್ದಿಷ್ಟವಾಗಿ ಹಿಂದೂಗಳು ಮತ್ತು ಭಾರತೀಯ ರಾಷ್ಟ್ರಕ್ಕೆ ಅಸ್ತಿತ್ವದ ಬೆದರಿಕೆ ಎಂದು ಚಿತ್ರಿಸಲಾಗಿದೆ. ಮತ್ತೊಂದೆಡೆ ಪೂಜಾ ಸ್ಥಳಗಳನ್ನು ಧ್ವಂಸವನ್ನು ಪ್ರತಿಪಾದಿಸುವ ಭಾಷಣಗಳಲ್ಲಿ ಅತ್ಯಂತ ಆತಂಕಕಾರಿ ಏರಿಕೆ ಕಂಡುಬಂದಿದೆ ಎಂದು ವರದಿ ಹೇಳಿದೆ. ಕಳೆದ ವರ್ಷದ ಮತದಾನಕ್ಕೆ ಮುಂಚಿತವಾಗಿ ಮೋದಿ ಅವರು ರಾಮಮಂದಿರ ಉದ್ಘಾಟಿಸಿದ ನಂತರ ಇದು ಹೆಚ್ಚಾಯಿತು ವರದಿ ಹೇಳಿದೆ.
Advertisement