ಬಿಹಾರದ ರೈಲ್ವೆ ಯೋಜನೆಗಳಿಗೆ 95,566 ಕೋಟಿ ರೂ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಬಿಹಾರದಲ್ಲಿ ರೈಲ್ವೆ ಹಳಿಗಳ ದ್ವಿಗುಣಗೊಳಿಸುವ ಕೆಲಸವನ್ನು ಕೈಗೊಳ್ಳಲಾಗುತ್ತಿದೆ ಎಂದ ರೈಲ್ವೆ ಸಚಿವರು, ಇದರ ಜೊತೆಗೆ, ಹಲವಾರು ಸ್ಥಳಗಳಲ್ಲಿ ರೇಕ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
Union minister of information and broadcasting (I&B) Ashwini Vaishnaw.
ಅಶ್ವಿನಿ ವೈಷ್ಣವ್online desk
Updated on

ಪಾಟ್ನಾ: ಬಿಹಾರದಲ್ಲಿ ರೈಲ್ವೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 95,566 ಕೋಟಿ ರೂ. ಹೂಡಿಕೆ ಮಾಡುತ್ತಿದೆ ಎಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಭಾನುವಾರ ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ಶೇ. 100 ರಷ್ಟು ರೈಲ್ವೆ ವಿದ್ಯುದೀಕರಣವನ್ನು ಖಚಿತಪಡಿಸಿದ್ದಾರೆ. ರಾಜ್ಯದಲ್ಲಿ 98 ಅಮೃತ ಭಾರತ್ ರೈಲು ನಿಲ್ದಾಣಗಳ ಪುನರ್ನಿರ್ಮಾಣದ ಕೆಲಸಗಳು ಭರದಿಂದ ಸಾಗುತ್ತಿವೆ. ರಾಜ್ಯದಲ್ಲಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 95,566 ಕೋಟಿ ರೂ.ಗಳ ಹೂಡಿಕೆಯನ್ನು ಪ್ರಸ್ತಾಪಿಸಿದೆ ಮತ್ತು ಜನರು ಇದರಿಂದ ಪ್ರಯೋಜನ ಪಡೆಯುತ್ತಾರೆ" ಎಂದು ವೈಷ್ಣವ್ ಮಾಧ್ಯಮಗಳಿಗೆ ತಿಳಿಸಿದರು.

ಬಿಹಾರದಲ್ಲಿ ರೈಲ್ವೆ ಹಳಿಗಳ ದ್ವಿಗುಣಗೊಳಿಸುವ ಕೆಲಸವನ್ನು ಕೈಗೊಳ್ಳಲಾಗುತ್ತಿದೆ ಎಂದ ರೈಲ್ವೆ ಸಚಿವರು, ಇದರ ಜೊತೆಗೆ, ಹಲವಾರು ಸ್ಥಳಗಳಲ್ಲಿ ರೇಕ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

Union minister of information and broadcasting (I&B) Ashwini Vaishnaw.
ಕೇಂದ್ರ ಬಜೆಟ್ ಅಲ್ಲ, ಬಿಹಾರಿ ಬಜೆಟ್; ಬಿಹಾರಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸೊನ್ನೆ: ಕಾಂಗ್ರೆಸ್ ವ್ಯಂಗ್ಯ

ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದ ರೈಲ್ವೆ ಸಚಿವರು, "ಜನವರಿ 2025 ರವರೆಗೆ ಚೇರ್ ಕಾರ್‌ಗಳನ್ನು ಹೊಂದಿರುವ 136 ವಂದೇ ಭಾರತ್ ರೈಲು ಕಾರ್ಯನಿರ್ವಹಿಸುತ್ತಿವೆ. ಕುತೂಹಲಕಾರಿ ಸಂಗತಿಯೆಂದರೆ ಈ ರೈಲುಗಳಲ್ಲಿ ಆಕ್ಯುಪೆನ್ಸಿ ಶೇಕಡಾ 100 ರಷ್ಟಿದೆ" ಎಂದು ಅವರು ತಿಳಿಸಿದರು.

ಇದೇ ವೇಳೆ ಪಾಟ್ನಾ ನಡುವೆ ಮುಜಫರ್‌ಪುರ ಮೂಲಕ ನಮೋ ಭಾರತ್ ರೈಲು ಓಡಿಸಲಾಗುವುದು ಎಂದು ವೈಷ್ಣವ್ ಘೋಷಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com