ಉತ್ತರ ಪ್ರದೇಶ: ನವಜಾತ ಶಿಶುವಿನ ತಲೆಯನ್ನು ತಿಂದ ಬೀದಿ ನಾಯಿಗಳು! ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

ಆಸ್ಪತ್ರೆ ಆಡಳಿತವು ಜವಾಬ್ದಾರಿಯಿಂದ ನುಣುಚಿಕೊಂಡಿದ್ದು, ಪೋಷಕರ ಕುಟುಂಬವು ಆಲ್ಪತ್ರೆಯ ನಿರ್ಲಕ್ಷ್ಯವನ್ನು ಖಂಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಉತ್ತರ ಪ್ರದೇಶ: ಬೀದಿ ನಾಯಿಗಳು ನವಜಾತ ಶಿಶುವಿನ ತಲೆಯನ್ನು ತಿಂದಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ನಡೆದಿದ್ದು, ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳವಾರ ಲಲಿತ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ನಾಯಿಗಳು ಮಗುವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಜನರು ನಾಯಿಗಳನ್ನು ಓಡಿಸುವಷ್ಟರಲ್ಲಿ ಮಗುವಿನ ತಲೆಯನ್ನು ತಿಂದು ಹಾಕಿವೆ.

ಆಸ್ಪತ್ರೆ ಆಡಳಿತವು ಜವಾಬ್ದಾರಿಯಿಂದ ನುಣುಚಿಕೊಂಡಿದ್ದು, ಪೋಷಕರ ಕುಟುಂಬವು ಆಲ್ಪತ್ರೆಯ ನಿರ್ಲಕ್ಷ್ಯವನ್ನು ಖಂಡಿಸಿದೆ.

ಭಾನುವಾರ (ಫೆಬ್ರುವರಿ 9) ಲಲಿತ್‌ಪುರ ವೈದ್ಯಕೀಯ ಕಾಲೇಜಿನ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗು ಕಡಿಮೆ ತೂಕ ಹೊಂದಿದ್ದರಿಂದ ವಿಶೇಷ ನವಜಾತ ಆರೈಕೆ ಘಟಕಕ್ಕೆ (ಎಸ್‌ಎನ್‌ಸಿಯು) ದಾಖಲಿಸಲಾಗಿತ್ತು.

'ಮಗುವು ಜನ್ಮಜಾತ ದೋಷಗಳೊಂದಿಗೆ ಜನಿಸಿತ್ತು'. ಮಗುವಿನ ತಲೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರಲಿಲ್ಲ. ಬೆನ್ನುಮೂಳೆಯೂ ಇರಲಿಲ್ಲ ಮತ್ತು 1.3 ಕೆಜಿ ತೂಕವಿತ್ತು. ನಾವು ಅದನ್ನು SNCUಗೆ ಸ್ಥಳಾಂತರಿಸಿದೆವು. ಆಗ ಮಗು ಪ್ರತಿ ನಿಮಿಷಕ್ಕೆ 80 ಬಾರಿ ಹೃದಯ ಬಡಿತವನ್ನು ಹೊಂದಿತ್ತು. ಮಗು ಬದುಕುವ ಬಗ್ಗೆ ನಮಗೆ ಖಾತರಿ ಇರಲಿಲ್ಲ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಮೀನಾಕ್ಷಿ ಸಿಂಗ್ ಹೇಳಿದ್ದಾರೆ.

ವೈದ್ಯರು ಹೇಳಿದ ಪ್ರಕಾರ, ಸಂಜೆ ವೇಳೆಗೆ ಮಗು ಸಾವಿಗೀಡಾಗಿದೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

'ಮಗುವಿನ ಚಿಕ್ಕಮ್ಮ ಮೃತದೇಹವನ್ನು ತೆಗೆದುಕೊಂಡರು. ನಾವು ಚಿಕ್ಕಮ್ಮನ ಥಂಬ್ ಇಂಪ್ರೆಷನ್ ಅನ್ನು ಹೊಂದಿದ್ದೇವೆ' ಎಂದು ಡಾ. ಸಿಂಗ್ ಹೇಳಿದರು.

ಸಂಗ್ರಹ ಚಿತ್ರ
ಆಸ್ಪತ್ರೆ ಶೌಚಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆ ಪ್ರಕರಣ: ನೇಪಾಳ ಮೂಲದ ಜೋಡಿ ಬಂಧನ

ಮಂಗಳವಾರ ಮಧ್ಯಾಹ್ನ ಆಸ್ಪತ್ರೆ ಆಡಳಿತ ಮಂಡಳಿಗೆ ನಾಯಿ ದಾಳಿಯ ಸುದ್ದಿ ತಿಳಿಯಿತು. ಪರಿಶೀಲನೆ ನಡೆಸಿದಾಗ ನೆಲದ ಮೇಲೆ ಮಗುವಿನ ತಲೆ ಇಲ್ಲದ ಶವ ಪತ್ತೆಯಾಗಿದೆ. ಕುಟುಂಬಸ್ಥರು ಮಗುವಿನ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದಿದ್ದಾರೆ. ಮಗುವಿಗೆ ಆಸ್ಪತ್ರೆಯ ಟ್ಯಾಗ್ ಅನ್ನು ಲಗತ್ತಿಸಲಾಗಿದೆ. ಹೀಗಾಗಿ, ಅದನ್ನು ನಾವು ಗುರುತಿಸಿದೆವು ಎಂದು ಆಸ್ಪತ್ರೆ ಆಡಳಿತ ಮಂಡಳಿ ಆರೋಪಿಸಿದೆ.

ಲಲಿತಪುರ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಿ. ನಾಥ್ ಅವರು ನಾಲ್ವರು ವೈದ್ಯರ ಸಮಿತಿ ರಚಿಸಿ, ನವಜಾತ ಶಿಶುವಿಗೆ ಸಂಬಂಧಿಸಿದ ಸಂಪೂರ್ಣ ತನಿಖಾ ವರದಿಯನ್ನು 24 ಗಂಟೆಯೊಳಗೆ ಕಳುಹಿಸುವಂತೆ ಆದೇಶ ಹೊರಡಿಸಿದ್ದಾರೆ.

ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದ ಬಗ್ಗೆ ವರದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com