Bangladesh ವಿಚಾರ ಮೋದಿಗೆ ಬಿಡುತ್ತೇನೆ: ಮಹಮದ್ ಯೂನಿಸ್ ಸರ್ಕಾರಕ್ಕೆ Donald Trump ಆಘಾತ!

ಬಾಂಗ್ಲಾದೇಶದ ಬಿಕ್ಕಟ್ಟಿನಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ. ನೂರಾರು ವರ್ಷಗಳಿಂದ ಭಾರತವು ಅಲ್ಲಿ ಕೆಲಸ ಮಾಡುತ್ತಿದೆ.
Donald Trump-PM Modi
ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷ ಮತ್ತು ಹಿಂದೂಗಳ ಮೇಲಿನ ದೌರ್ಜನ್ಯ ಚಾಲ್ತಿಯಲ್ಲಿರುವಂತೆಯೇ ಈ ವಿಚಾರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಡುತ್ತೇನೆ ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಗ್ಲಾದೇಶ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ಹೇಳಿದ್ದಾರೆ.

ಶ್ವೇತಭವನದಲ್ಲಿ (White House) ಟ್ರಂಪ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು. ನಂತರ ಮಾಧ್ಯಮಗಳ ಜೊತೆ ಡೊನಾಲ್ಡ್‌ ಟ್ರಂಪ್‌ ಮತ್ತು ನರೇಂದ್ರ ಮೋದಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಡೀಪ್‌ ಸ್ಟೇಟ್‌ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಟ್ರಂಪ್‌, ಇದರಲ್ಲಿ ಡೀಪ್‌ ಸ್ಟೇಟ್‌ ಪಾತ್ರವಿಲ್ಲ. ಈ ವಿಚಾರದಲ್ಲಿ ಮೋದಿಯವರು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವನ್ನು ನಾನು ಮೋದಿ ಅವರಿಗೆ ಬಿಡುತ್ತೇನೆ ಎಂದು ತಿಳಿಸಿದರು.

ಬಾಂಗ್ಲಾದೇಶದ ಬಿಕ್ಕಟ್ಟಿನಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ. ನೂರಾರು ವರ್ಷಗಳಿಂದ ಭಾರತವು ಅಲ್ಲಿ ಕೆಲಸ ಮಾಡುತ್ತಿದೆ. ಆದ ಕಾರಣದಿಂದ ನಾನು ಬಾಂಗ್ಲಾದೇಶವನ್ನು ಪ್ರಧಾನಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.

Donald Trump-PM Modi
ಮೋದಿ-ಟ್ರಂಪ್ ಮಾತುಕತೆ: ಭಾರತಕ್ಕೆ F-35 ಯುದ್ಧ ವಿಮಾನ ಪೂರೈಕೆಗೆ ಅಮೆರಿಕಾ ಒಪ್ಪಿಗೆ, ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಮುಂದು

ಮಹಮದ್ ಯೂನಿಸ್ ಸರ್ಕಾರಕ್ಕೆ Donald Trump ಆಘಾತ

ಇನ್ನು ಈ ಬೆಳವಣಿಗೆ ಮೂಲಕ ಬಾಂಗ್ಲಾದೇಶ ವಿಚಾರದಲ್ಲಿ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂಬ ಮಹಮದ್ ಯೂನಿಸ್ ಸರ್ಕಾರದ ಭರವಸೆ ಚಿವುಟಿ ಹೋಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುವ ನಿರ್ಣಯಗಳ ಮೇಲೆ ಬಾಂಗ್ಲಾದೇಶ ಆರ್ಥಿಕ ಭವಿಷ್ಯ ನಿಲ್ಲುವಂತಾಗಿದೆ.

ಬಾಂಗ್ಲಾಗೆ ಹಣಕಾಸಿನ ನೆರವು ಹಿಂಪಡೆದಿದ್ದ ಟ್ರಂಪ್​ಸರ್ಕಾರ

ಇನ್ನು ಕೆಲ ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ USAID ಮೂಲಕ ಬಾಂಗ್ಲಾದೇಶದಕ್ಕೆ ನೀಡುತ್ತಿರುವ ಎಲ್ಲಾ ಸಹಾಯವನ್ನು ತಕ್ಷಣದಿಂದಲೇ ನಿಲ್ಲಿಸುವುದಾಗಿ ಘೋಷಿಸಿತ್ತು. ಇದರೊಂದಿಗೆ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಹಂಗಾಮಿ ಸರ್ಕಾರಕ್ಕೆ ಅಮೆರಿಕ ನೀಡಿದ್ದ ಬೆಂಬಲ ಸಹ ಕೊನೆಯಾಗಿತ್ತು.

ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ದಾನಿ ಸಂಸ್ಥೆ USAID ಮೂಲಕ ಬಾಂಗ್ಲಾದೇಶದಲ್ಲಿನ ಎಲ್ಲಾ ಕೆಲಸಗಳಿಗೆ ಅನುದಾನವನ್ನು ತಕ್ಷಣದಿಂದಲೇ ನಿಲ್ಲಿಸುವುದಾಗಿ ಘೋಷಿಸಿದ ಬೆನ್ನಲ್ಲಿಯೇ ಈ ಹೇಳಿಕೆ ನೀಡಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರಕ್ಕೆ ಅಮೆರಿಕ ಎಲ್ಲಾ ಸಹಾಯವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಈ ಮಾತು ಆಡಿದ್ದಾರೆ.

ಇದರಲ್ಲಿ ಬಾಂಗ್ಲಾದೇಶದಲ್ಲಿ ಅಮೆರಿಕ ಕೈಗೊಳ್ಳುವ ಒಪ್ಪಂದಗಳು, ಅನುದಾನಗಳು, ಸಹಕಾರಿ ಒಪ್ಪಂದಗಳು ಮತ್ತು ಇತರ ಖರೀದಿ ಸಾಧನಗಳು ಸೇರಿವೆ. USAID ಹೊರಡಿಸಿದ ಪತ್ರದಲ್ಲಿ, ಸಂಸ್ಥೆಯು ತನ್ನ ಬಾಂಗ್ಲಾದೇಶ ಕಾರ್ಯಾಚರಣೆಗಳ ಅಡಿಯಲ್ಲಿರುವ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪಾಲುದಾರರಿಗೆ ತಿಳಿಸಿದೆ.

"ಈ ಪತ್ರವು ಎಲ್ಲಾ USAID/ಬಾಂಗ್ಲಾದೇಶ ಅನುಷ್ಠಾನ ಪಾಲುದಾರರಿಗೆ ನಿಮ್ಮ USAID/ಬಾಂಗ್ಲಾದೇಶ ಒಪ್ಪಂದ, ಕೆಲಸದ ಆದೇಶ, ಅನುದಾನ, ಸಹಕಾರಿ ಒಪ್ಪಂದ ಅಥವಾ ಇತರ ನೆರವು ಅಥವಾ ಸ್ವಾಧೀನ ಸಾಧನದ ಅಡಿಯಲ್ಲಿ ಯಾವುದೇ ಕೆಲಸವನ್ನು ತಕ್ಷಣವೇ ನಿಲ್ಲಿಸಲು ಅಥವಾ ಸ್ಥಗಿತಗೊಳಿಸಲು ನಿರ್ದೇಶಿಸುತ್ತಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತವು ಆ ದೇಶದ ಪರಿಸ್ಥಿತಿಯನ್ನು ಹೇಗೆ ನೋಡುತ್ತದೆ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.

ಭಾರೀ ಪ್ರತಿಭಟನೆಯ ನಂತರ ಪ್ರಧಾನಿ ಶೇಖ್ ಹಸೀನಾ ಬೃಹತ್ ಢಾಕಾದಿಂದ ಭಾರತಕ್ಕೆ ಪಲಾಯನ ಮಾಡಿದ ನಂತರ ಭಾರತ-ಬಾಂಗ್ಲಾದೇಶ ಸಂಬಂಧ ಹಳಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com