Pune; ಅಪಾರ್ಟ್‌ಮೆಂಟ್‌‌ ಮಹಡಿಯಿಂದ ದುರ್ವಾಸನೆ; ಬಾಗಿಲು ತೆರೆಸಿ ನೋಡಿದರೆ 300 ಬೆಕ್ಕು ಪತ್ತೆ!

ನೆರೆಹೊರೆಯವರು ನಗರಸಭೆಗೆ ಕರೆ ಮಾಡಿ ದೂರು ನೀಡಿದ್ದಾರೆ ಮತ್ತು ನಾವು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಫ್ಲಾಟ್‌ಗಳನ್ನು ಸರ್ವೆ ಮಾಡಿದ್ದೇವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಪುಣೆ: ಪುಣೆಯ ಮಾರ್ವೆಲ್ ಬೌಂಟಿ ಸೊಸೈಟಿಯ ವಸತಿ ಸಮುಚ್ಚಯದಲ್ಲಿ ಸುಮಾರು 300 ಬೆಕ್ಕುಗಳು ಪತ್ತೆಯಾಗಿದ್ದು, ನೆರೆಹೊರೆಯವರ ದೂರಿನ ಮೇರೆಗೆ ಮುನ್ಸಿಪಲ್ ಕಾರ್ಪೊರೇಷನ್ ಮಧ್ಯಪ್ರವೇಶಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಬೀದಿ ಬೆಕ್ಕುಗಳನ್ನು ಕರೆತಂದು ಫ್ಲಾಟ್ ಮಾಲೀಕರೊಬ್ಬರು ಆಹಾರ ನೀಡುತ್ತಿದ್ದಾರೆ. ಬೆಕ್ಕುಗಳು ಸುಧಾರಿಸಿದ ನಂತರ ಅವುಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ, ಬೆಕ್ಕುಗಳಿಂದಾಗಿ ಉಂಟಾಗುವ ಅನೈರ್ಮಲ್ಯದಿಂದಾಗಿ ಸೊಸೈಟಿಯಲ್ಲಿನ ನೆರೆಹೊರೆಯವರು ತೊಂದರೆಗೀಡಾಗಿದ್ದಾರೆ.

ಈ ಕುರಿತು ಮಾತನಾಡಿದ ಇನ್ಸ್‌ಪೆಕ್ಟರ್ ನೀಲೇಶ್ ಜಗದಾಳೆ, ‘ಮಾರ್ವೆಲ್ ಬೌಂಟಿ ಸೊಸೈಟಿಯ ಅಪಾರ್ಟ್‌ಮೆಂಟ್ ಮಾಲೀಕರು ಬೀದಿಯ ಬೆಕ್ಕುಗಳನ್ನು ಮನೆಗೆ ತಂದು ಆರೈಕೆ ಮಾಡುತ್ತಿದ್ದರು ಮತ್ತು ಅವುಗಳು ಉತ್ತಮವಾದಾಗ ಮತ್ತೆ ಅವುಗಳನ್ನು ಬಿಡುತ್ತಿದ್ದರು. ಇದರಿಂದ ಅಪಾರ್ಟ್‌ಮೆಂಟ್‌ನಲ್ಲಿ ಹಲವು ಬೆಕ್ಕುಗಳು ಜಮಾಯಿಸಿದ್ದು, ಅನೈರ್ಮಲ್ಯ ಉಂಟಾಗಿ ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗುತ್ತಿದೆ ಎಂದರು.

9ನೇ ಮಹಡಿಯಲ್ಲಿರುವ ಫ್ಲಾಟ್‌ನ ಮಾಲೀಕರು ಆ ಫ್ಲಾಟ್‌ನಲ್ಲಿ ಹಲವಾರು ಬೆಕ್ಕುಗಳನ್ನು ಸಾಕಿದ್ದಾರೆ. ಇದರ ಪರಿಣಾಮವಾಗಿ ಅಲ್ಲಿ ದುರ್ವಾಸನೆ ಉಂಟಾಗಿದೆ. ದೂರಿನ ನಂತರ, ತಂಡವು ಫ್ಲಾಟ್‌ಗೆ ಭೇಟಿ ನೀಡಿ, ಎರಡು ದಿನಗಳಲ್ಲಿ ಬೆಕ್ಕುಗಳನ್ನು ಸ್ಥಳಾಂತರಿಸಲು ಫ್ಲಾಟ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ನೆರೆಹೊರೆಯವರು ನಗರಸಭೆಗೆ ಕರೆ ಮಾಡಿ ದೂರು ನೀಡಿದ್ದಾರೆ ಮತ್ತು ನಾವು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಫ್ಲಾಟ್‌ಗಳನ್ನು ಸರ್ವೆ ಮಾಡಿದ್ದೇವೆ. 2 ದಿನದೊಳಗೆ ಎಲ್ಲ ಬೆಕ್ಕುಗಳನ್ನು ಬಿಡುಗಡೆ ಮಾಡಲು ಮಾಲೀಕರಿಗೆ ಸೂಚಿಸಲಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಿರಿಯ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com