
ತಿರುವನಂತಪುರಂ: ಐದು ವರ್ಷಗಳ ಹಿಂದೆ, ಭಾರತದ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ, ಬಡ ಕೂಲಿ ಕಾರ್ಮಿಕರೊಬ್ಬರ 13 ವರ್ಷದ ಮಗಳ ಮೇಲೆ ಅವರು ವಾಸಿಸುತ್ತಿದ್ದ ಹಳ್ಳಿಯಲ್ಲಿ ಸ್ಕೂಲ್ ಮೇಟ್ಸ್, ನೆರೆಹೊರೆಯವರು, ಸಂಬಂಧಿಕರು ಸೇರಿದಂತೆ ಸುಮಾರು 60 ಜನ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯೊಬ್ಬ, ತನ್ನ ಕೃತ್ಯವನ್ನು ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಆ ವಿಡಿಯೋವನ್ನು ಮುಂದಿನ ಐದು ವರ್ಷಗಳ ಕಾಲ ಡಜನ್ ಗಟ್ಟಲೆ ಇತರ ಪುರುಷರು ಮತ್ತು ಹುಡುಗರಿಂದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವಂತೆ ಹುಡುಗಿಯನ್ನು ಬ್ಲ್ಯಾಕ್‌ಮೇಲ್ ಮಾಡಿ, ಆ ವಿಡಿಯೋವನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದಾನೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಸ್ತುತ 18 ವರ್ಷದ ಬಾಲಕಿ ಕೇರಳ ರಾಜ್ಯದ ತನ್ನ ಕಾಲೇಜಿಗೆ ಭೇಟಿ ನೀಡಿದ ವಕಿಲರೊಂದಿಗೆ ಮಾತನಾಡಿ, ವರ್ಷಗಳ ಭೀಕರ ದೌರ್ಜನ್ಯದ ಬಗ್ಗೆ ವಿವರಿಸಿದ ನಂತರವೇ ಈ ಪ್ರಕರಣ ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ಆರೋಪದ ಮೇಲೆ ಒಟ್ಟು 58 ಪುರುಷರು ಮತ್ತು ಹುಡುಗರನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿರುವ ಇನ್ನಿಬ್ಬರು ಪುರುಷರು ದೇಶದಿಂದ ಪರಾರಿಯಾಗಿದ್ದಾರೆ ಎಂದು ಕೇರಳ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್ ಅಜೀತಾ ಬೇಗಂ ಅವರು ತಿಳಿಸಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.
ಆರೋಪಿಗಳಲ್ಲಿ ಆಕೆಯ ಶಾಲಾ ಸಹಪಾಠಿಗಳು, ಆಕೆಯ ಸಂಬಂಧಿಕರು, ಆಕೆಯ ನೆರೆಹೊರೆಯವರು ಸೇರಿದಂತೆ ಹಲವು ಪುರುಷರು, ಅಪ್ರಾಪ್ತ ವಯಸ್ಕರಿಂದ ಹಿಡಿದು 40 ವರ್ಷದ ಪುರುಷರವರೆಗೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಇನ್ನೂ ಆರೋಪಗಳನ್ನು ದಾಖಲಿಸಲಾಗಿಲ್ಲ ಮತ್ತು 58 ಪುರುಷರು ಬಂಧನದಲ್ಲಿದ್ದಾರೆ. ಯಾವುದೇ ಆರೋಪಿಗಳು ತಮ್ಮ ವಿರುದ್ಧ ಆರೋಪಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ.
Advertisement