HMPV Advisory: ದೇಶದಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ; ಕೇಂದ್ರ ಆರೋಗ್ಯ ಸಚಿವಾಲಯ ಕೊಟ್ಟ ಮುನ್ನೆಚ್ಚರಿಕೆ ಏನು?

ಚೀನಾದಲ್ಲಿ ಹರಡುತ್ತಿರುವ ಹೊಸ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಇಬ್ಬರು ಸೋಂಕಿತರು ಸೇರಿದಂತೆ ದೇಶಾದ್ಯಂತ ಸೋಂಕಿತರ ಸಂಖ್ಯೆ 5ಕ್ಕೇರಿದೆ.
JP Nadda
ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ
Updated on

ನವದೆಹಲಿ: ಚೀನಾದಲ್ಲಿ ಹರಡುತ್ತಿರುವ ಹೊಸ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಇಬ್ಬರು ಸೋಂಕಿತರು ಸೇರಿದಂತೆ ದೇಶಾದ್ಯಂತ ಸೋಂಕಿತರ ಸಂಖ್ಯೆ 5ಕ್ಕೇರಿದೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದೆ.

ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು, ಕೇಂದ್ರದ ಸಿದ್ಧತೆಗಳು ಮತ್ತು ಹೊಸ ವೈರಸ್ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಮತ್ತು ನೆರೆಯ ದೇಶಗಳಲ್ಲಿ ವೈರಸ್‌ನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಜೆಪಿ ನಡ್ಡಾ ಹೇಳಿದ್ದಾರೆ. ನಾವು ಸಿದ್ಧರಿದ್ದೇವೆ, ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ನಾವು ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಇದು ಹೊಸ ವೈರಸ್ ಅಲ್ಲ, 2001ರಲ್ಲಿಯೇ ವೈರಸ್ ಅನ್ನು ಗುರುತಿಸಲಾಗಿದೆ ಎಂದು ಜೆಪಿ ನಡ್ಡಾ ಹೇಳಿದರು.

ಈ ಹೊಸ ವೈರಸ್ ಬಗ್ಗೆ ರಾಜ್ಯ ಸರ್ಕಾರಗಳು ಅಲರ್ಟ್ ಮೋಡ್‌ನಲ್ಲಿವೆ. ಮೊದಲ ಪ್ರಕರಣವು ಬೆಂಗಳೂರಿನಲ್ಲಿ 3 ತಿಂಗಳ ಹೆಣ್ಣುಮಗುವಿನಲ್ಲಿ ಪತ್ತೆಯಾಗಿತ್ತು. ಬ್ರಾಂಕೋಪ್ನ್ಯುಮೋನಿಯಾದೊಂದಿಗೆ ಆಸ್ಪತ್ರೆಗೆ ದಾಖಲಾದ ನಂತರ HMPV ರೋಗನಿರ್ಣಯ ಮಾಡಲಾಯಿತು. ಸಚಿವಾಲಯದ ಮಾಹಿತಿ ಪ್ರಕಾರ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಎರಡನೇ ಪ್ರಕರಣವು 8 ತಿಂಗಳ ಗಂಡು ಶಿಶುವಿನಲ್ಲಿ ಪತ್ತೆಯಾಗಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಎರಡು ಶಿಶುಗಳಿಗೂ ಯಾವುದೇ ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸವಿಲ್ಲ ಎಂದು ICMR ದೃಢಪಡಿಸಿದೆ. ಇದರ ಬೆನ್ನಲ್ಲೇ ಗುಜರಾತ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿತ್ತು. ಗುಜರಾತ್‌ನಲ್ಲಿ ಇದು ಮೊದಲ ಎಚ್‌ಎಂಪಿವಿ ಪ್ರಕರಣವಾಗಿದೆ. ಸುಮಾರು 2 ವರ್ಷ ವಯಸ್ಸಿನ ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿತ್ತು. ರೋಗಿಯನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಇದೀಗ ಚೆನ್ನೈನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 5ಕ್ಕೇ ಏರಿಕೆಯಾಗಿದೆ.

JP Nadda
ಕರ್ನಾಟಕ, ಗುಜರಾತ್ ನಂತರ ತಮಿಳುನಾಡಿನಲ್ಲೂ HMPV ಪತ್ತೆ; ಚೆನ್ನೈನಲ್ಲಿ ಇಬ್ಬರು ಮಕ್ಕಳಿಗೆ ಪಾಸಿಟಿವ್

ಏನು ಮಾಡಬಾರದು?

  • ಯಂ-ಚಿಕಿತ್ಸೆ ಮಾಡಬೇಡಿ.

  • ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ.

  • ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್‌ನಿಂದ ತೊಳೆಯಿರಿ.

  • ನೀವು ಅಸ್ವಸ್ಥರಾಗಿದ್ದರೆ ಕಿಕ್ಕಿರಿದ ಸ್ಥಳಗಳನ್ನು ತಪ್ಪಿಸಿ ಮತ್ತು ಸಂಪರ್ಕವನ್ನು ಮಿತಿಗೊಳಿಸಿ.

  • ಆಗಾಗ್ಗೆ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬೇಡಿ.

  • ನೀವು ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಮತ್ತು ಟಿಶ್ಯೂ ಪೇಪರ್ ಅನ್ನು ಮರುಬಳಕೆ ಮಾಡಬೇಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com