
ಕಠ್ಮಂಡು: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರವು ಬೆಳಗ್ಗೆ 6:50 ಕ್ಕೆ ದಾಖಲಿಸಿದೆ.
ಭೂಕಂಪದ ಕೇಂದ್ರಬಿಂದು ಚೀನಾದ ಡಿಂಗ್ಗಿಯಾಗಿದ್ದು, ಇದರಿಂದ ಬಿಹಾರ, ದೆಹಲಿ-ಎನ್‌ಸಿಆರ್ ಮೇಲೂ ಹೆಚ್ಚು ಪರಿಣಾಮ ಬೀರಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಭೂಕಂಪವು ನೇಪಾಳ-ಟಿಬೆಟ್ ಗಡಿಯ ಬಳಿ ಲೊಬುಚೆಯಿಂದ ಈಶಾನ್ಯಕ್ಕೆ 93 ಕಿಮೀ ದೂರದಲ್ಲಿ ಬೆಳಿಗ್ಗೆ 6.35 ಕ್ಕೆ ಸಂಭವಿಸಿದೆ.
ನೇಪಾಳದಲ್ಲಿ ಹುಟ್ಟಿಕೊಂಡ ಭೂಕಂಪ ನಂತರ ದೆಹಲಿ-ಎನ್‌ಸಿಆರ್ ಮತ್ತು ಬಿಹಾರದ ಕೆಲವು ಭಾಗಗಳು ಸೇರಿದಂತೆ ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಬಲವಾದ ಕಂಪನದ ಅನುಭವವನ್ನುಂಟು ಮಾಡಿದೆ.
ಪ್ರಮಾಣವನ್ನು ಇನ್ನೂ ದೃಢೀಕರಿಸಬೇಕಾಗಿದ್ದರೂ, ಆರಂಭಿಕ ಅಂದಾಜುಗಳು ರಿಕ್ಟರ್ ಮಾಪಕದಲ್ಲಿ 6.0 ಮತ್ತು 7.0 ರ ನಡುವೆ ಇರಬಹುದೆಂದು ಸೂಚಿಸುತ್ತವೆ.
ಕಾವ್ರೆಪಲಾಂಚ್‌ವೋಕ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ಕಠ್ಮಂಡುವಿನಲ್ಲಿ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಬಂದರು.ಆದರೆ, ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
Advertisement