ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 'ಕ್ರೌಡ್‌ಫಂಡಿಂಗ್ ಅಭಿಯಾನ' ಪ್ರಾರಂಭಿಸಿದ ದೆಹಲಿ ಸಿಎಂ ಅತಿಶಿ

ಡಿಸೆಂಬರ್‌ನಲ್ಲಿ ಎಎಪಿ ನಾಯಕ ಮತ್ತು ಜಂಗ್‌ಪುರದ ಪಕ್ಷದ ಅಭ್ಯರ್ಥಿ ಮನೀಶ್ ಸಿಸೋಡಿಯಾ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದರು.
Delhi minister Atishi Singh addresses a press conference at Delhi Secretariat, Tuesday, May 28, 2024.
ದೆಹಲಿ ಮುಖ್ಯಮಂತ್ರಿ ಅತಿಶಿPhoto | PTI
Updated on

ನವದೆಹಲಿ: ಮುಂಬರುವ ದಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಖ್ಯಮಂತ್ರಿ ಮತ್ತು ಎಎಪಿ ಅಭ್ಯರ್ಥಿ ಅತಿಶಿ ಅವರು ಭಾನುವಾರ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದರು. ಜನರು ತಮ್ಮ ಪಕ್ಷದ ಕೆಲಸ ಮತ್ತು ಪ್ರಾಮಾಣಿಕತೆಯ ರಾಜಕೀಯವನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರು ಹಣ ನೀಡಲು ಆನ್‌ಲೈನ್ ಲಿಂಕ್ ಅನ್ನು ಬಿಡುಗಡೆ ಮಾಡಿದರು. ಚುನಾವಣೆಯಲ್ಲಿ ಹೋರಾಡಲು ತನಗೆ 40 ಲಕ್ಷ ರೂ. ಅಗತ್ಯವಿದೆ ಎಂದು ಹೇಳಿದರು.

ಎಎಪಿ ಯಾವಾಗಲೂ ಸಾಮಾನ್ಯ ಜನರ ಸಣ್ಣ ದೇಣಿಗೆಯ ಸಹಾಯದಿಂದಲೇ ಚುನಾವಣೆಗಳನ್ನು ಎದುರಿಸುತ್ತಿದೆ. ಇದು ಕೆಲಸ ಮತ್ತು ಪ್ರಾಮಾಣಿಕತೆಯ ರಾಜಕೀಯವನ್ನು ಮುಂದುವರಿಸಲು ಸಹಾಯ ಮಾಡಿದೆ. 10 ವರ್ಷಗಳಿಂದ ದೆಹಲಿಯಲ್ಲಿ ಅಧಿಕಾರದಲ್ಲಿದ್ದರೂ ಎಎಪಿ ಬಳಿ ಒಂದೇ ಒಂದು ರೂ. ಭ್ರಷ್ಟಾಚಾರದ ಹಣವಿಲ್ಲ. ಹಿಂದಿನ ಚುನಾವಣೆಗಳಂತೆ ದೆಹಲಿ ಮತ್ತು ದೇಶದ ಜನರ ಬೆಂಬಲದೊಂದಿಗೆ ನಾವು ಚುನಾವಣೆಯನ್ನು ಎದುರಿಸುತ್ತೇವೆ ಎಂದು ದೆಹಲಿ ಸರ್ಕಾರದ ಈಗ ರದ್ದಾಗಿರುವ ಅಬಕಾರಿ ನೀತಿಯಿಂದಾಗಿ 2,026 ಕೋಟಿ ರೂಪಾಯಿ ನಷ್ಟವನ್ನು ಸಿಎಜಿ ಅಂದಾಜಿಸಿದೆ ಎಂಬ ಬಿಜೆಪಿಯ ಹೇಳಿಕೆಯ ಬಗ್ಗೆ ಕೇಳಿದಾಗ ಅವರು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರು ಈಗಾಗಲೇ ತಮ್ಮ ಸ್ನೇಹಿತರಿಂದ ಮತ್ತು ಸರ್ಕಾರಿ ಗುತ್ತಿಗೆಗಳ ಮೂಲಕ ಸಾಕಷ್ಟು ಹಣವನ್ನು ಸಂಗ್ರಹಿಸಿದ್ದಾರೆ. ಈಗ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಣವನ್ನು ಸಂಗ್ರಹಿಸುವ ಅಗತ್ಯವಿಲ್ಲ ಎಂದರು.

Delhi minister Atishi Singh addresses a press conference at Delhi Secretariat, Tuesday, May 28, 2024.
ತನ್ನ ತಂದೆ ಬಗ್ಗೆ ಬಿಜೆಪಿ ನಾಯಕನ ಆಕ್ಷೇಪಾರ್ಹ ಹೇಳಿಕೆಗೆ ಕಣ್ಣೀರಿಟ್ಟ ದೆಹಲಿ ಸಿಎಂ ಅತಿಶಿ

ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಮರುಚುನಾವಣೆ ಬಯಸಿರುವ ಅತಿಶಿ, ಮಾಜಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಡಿಸೆಂಬರ್‌ನಲ್ಲಿ, ಹಿರಿಯ ಎಎಪಿ ನಾಯಕ ಮತ್ತು ಜಂಗ್‌ಪುರದ ಪಕ್ಷದ ಅಭ್ಯರ್ಥಿ ಮನೀಶ್ ಸಿಸೋಡಿಯಾ ಅವರು ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದರು. ಚುನಾವಣಾ ಪ್ರಚಾರಕ್ಕಾಗಿ ಜನರಿಂದ ಹಣಕಾಸಿನ ನೆರವು ಕೋರಿದರು.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5 ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com