ಪಾಟ್ನಾ: ಬಿಹಾರದಲ್ಲಿ ಕಳೆದ ತಿಂಗಳು ನಡೆದಿದ್ದ BPSC ಪೂರ್ವಭಾವಿ ಪರೀಕ್ಷೆಯ ರದ್ದತಿಗೆ ಒತ್ತಾಯಿಸಿ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಗುರುವಾರ ಗಂಗಾ ನದಿ ತೀರದಲ್ಲಿ ನಡೆಸುತ್ತಿದ್ದ ತಮ್ಮ ಅಮರಣಾಂತ ಉಪವಾಸವನ್ನು ಅಂತ್ಯಗೊಳಿಸಿದರು. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸತ್ಯಾಗ್ರಹವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
ಡಿಸೆಂಬರ್ 13 ರಂದು ನಡೆದಿದ್ದ BPSC ಪೂರ್ವಭಾವಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ರದ್ದುಪಡಿಸಲು ಮತ್ತು ಮರುಪರೀಕ್ಷೆಗೆ ಒತ್ತಾಯಿಸಿ ಕಿಶೋರ್ ಜನವರಿ 2 ರಂದು ಅಭ್ಯರ್ಥಿಗಳ ಪರ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದರು. ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮಧ್ಯಪ್ರವೇಶಿಸುವಂತೆ ಪಾಟ್ನಾ ಹೈಕೋರ್ಟ್‌ಗೆ ಜನ್ ಸೂರಾಜ್ ಪಕ್ಷ ಮನವಿ ಕೂಡಾ ಸಲ್ಲಿಸಿತ್ತು.
ಬಾಳೆಹಣ್ಣು ತಿಂದು ಜ್ಯೂಸ್ ಕುಡಿಯುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಪ್ರಶಾಂತ್ ಕಿಶೋರ್ ಅಂತ್ಯಗೊಳಿಸಿದರು.
ಇದಕ್ಕೂ ಮುನ್ನಾ ಕೊರೆಯುವ ಚಳಿಯಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು. ಇದೇ ವೇಳೆ ನಗರದ ಜೆಪಿ ಮಾರ್ಗದ ಪಕ್ಕದಲ್ಲಿ ಹಾಕಲಾದ ಟೆಂಟ್ ನಲ್ಲಿ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್, ಸರ್ಕಾರಿ ವೈದ್ಯರ ಸಮಿತಿಯಿಂದ ತಕ್ಷಣ ಮಾನಸಿಕ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಅವರು ಒತ್ತಾಯಿಸಿದರು.

Advertisement