ಲಂಚ ಕೇಳಿದ ಸರ್ಕಾರಿ ಅಧಿಕಾರಿಗೆ ಹಣದ ಮಳೆಯನ್ನೇ ಸುರಿಸಿದ ಗ್ರಾಮಸ್ಥರು: Video Viral

ಗ್ರಾಮದ ಕಲುಷಿತ ಕುಡಿಯುವ ನೀರು ಸಮಸ್ಯೆ ನೀಗಿಸಲು ಗ್ರಾಮಸ್ಥರು ಸರ್ಕಾರಿ ಅಧಿಕಾರಿಗೆ ಮನವಿ ಮಾಡಿದ್ದು, ಈ ವೇಳೆ ಆತ ಲಂಚ ಕೇಳಿದ್ದಾನೆ ಎನ್ನಲಾಗಿದೆ.
angry villagers throwing bundles of cash allegedly at a government officer
ಸರ್ಕಾರಿ ಅಧಿಕಾರಿ ಮೇಲೆ ಹಣ ಮಳೆ ಸುರಿಸಿದ ಗ್ರಾಮಸ್ಥರು
Updated on

ಅಹ್ಮದಾಬಾದ್: ಗ್ರಾಮದ ಕಲುಷಿತ ಕುಡಿಯುವ ನೀರು ಸಮಸ್ಯೆ ನೀಗಿಸಲು ಲಂಚ ಕೇಳಿದ ಸರ್ಕಾರಿ ಅಧಿಕಾರಿ ಕಚೇರಿಗೆ ನುಗ್ಗಿದ ಗ್ರಾಮಸ್ಥರು ಆತನ ಮೇಲೆ ಹಣ ಸುರಿಮಳೆಯನ್ನೇ ಸುರಿಸಿದ ಘಟನೆ ಗುಜರಾತ್ ನಲ್ಲಿ ವರದಿಯಾಗಿದೆ.

ಮೂಲಗಳ ಪ್ರಕಾರ ತಮ್ಮ ಗ್ರಾಮದ ಕಲುಷಿತ ಕುಡಿಯುವ ನೀರು ಸಮಸ್ಯೆ ನೀಗಿಸಲು ಗ್ರಾಮಸ್ಥರು ಸರ್ಕಾರಿ ಅಧಿಕಾರಿಗೆ ಮನವಿ ಮಾಡಿದ್ದು, ಈ ವೇಳೆ ಆತ ಲಂಚ ಕೇಳಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನೋಟಿನ ಕಂತೆಗಳನ್ನೇ ಸರ್ಕಾರಿ ಕಚೇರಿಗೆ ತಂದು ಆತನ ಮೇಲೆ ಸುರಿದಿದ್ದಾರೆ. ಅಲ್ಲದೆ ನಿನಗೆಷ್ಟು ಹಣಬೇಕು ತಗೋ.. ಇದನ್ನೇ ತಿನ್ನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

angry villagers throwing bundles of cash allegedly at a government officer
'ನಮಾಜ್ ಗಾಗಿ ಕಾದಿದ್ದ ದುಷ್ಕರ್ಮಿಗಳು': ಮಂಗಳೂರಿನಲ್ಲೂ ಬ್ಯಾಂಕ್ ದರೋಡೆ; 12 ಕೋಟಿ ರೂ ಮೌಲ್ಯದ ಚಿನ್ನ, ನಗದು ಹೊತ್ತು ಪರಾರಿ! Video

@kalamkeechot ಎಂಬ ಟ್ವಿಟರ್ ಖಾತೆಯಲ್ಲಿ ಈ ಕುರಿತ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ವಿಡಿಯೋದಲ್ಲಿರುವಂತೆ ಸರ್ಕಾರಿ ಅಧಿಕಾರಿ ಕಚೇರಿಗೆ ನುಗ್ಗಿದ ಜನರು ಎಷ್ಟು ಬೇಕು ಅಷ್ಟು ಹಣ ತೆಗೆದುಕೋ! ಎಂದು ಆತನ ಮೇಲೆ ಹಣದ ಮಳೆ ಸುರಿಸಿದ್ದಾರೆ. ಈ ವೇಳೆ ಅಧಿಕಾರಿ ಕುರ್ಚಿಯ ಮೇಲೆ ಕೈಮುಗಿದು ಕುಳಿತಿರುವುದನ್ನು ಕಾಣಬಹುದು. ಜನರು ಗುಜರಾತಿ ಭಾಷೆಯಲ್ಲಿ ಅವರ ಮೇಲೆ ಆರೋಪ ಮಾಡುತ್ತಿದ್ದು, ಇದರೊಂದಿಗೆ, ತಾವು ತಂದಿದ್ದ ನೋಟುಗಳನ್ನು ಆತನ ಮೇಲೆ ಸುರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com