
ಪುಣೆ: ಮಹಾರಾಷ್ಟ್ರದ ನಾರಾಯಣಗಾಂವ್ ಬಳಿಯ ನಾಸಿಕ್-ಪುಣೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಒಂಬತ್ತು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ಹಿಂದಿನಿಂದ ಬಂದ ಟ್ರಕ್ ಕಾರನ್ನು ಡಿಕ್ಕಿ ಹೊಡೆದು ನಂತರ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಎಸ್‌ಪಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ.
ಇಂದು ಶುಕ್ರವಾರ ಬೆಳಗ್ಗೆ ನಾಸಿಕ್-ಪುಣೆ ಹೆದ್ದಾರಿಯ ಮುಕ್ತೈ ಡಾಬಾ ಬಳಿ ದುರ್ಘಟನೆ ಸಂಭವಿಸಿದ್ದು, ಗಾಯಗೊಂಡವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳೀಯ ಪೊಲೀಸರು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.
Advertisement