ಮುಂಬೈ ರಸ್ತೆ ಅಪಘಾತ: ಕಿರುತೆರೆ ನಟ ಅಮನ್ ಜೈಸ್ವಾಲ್ ನಿಧನ

ಟ್ರಕ್ ಚಾಲಕನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮುಂಬೈನ ಅಂಬೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Aman Jaiswal
ಅಮನ್ ಜೈಸ್ವಾಲ್
Updated on

ಮುಂಬೈ: 'ಧರ್ತಿಪುತ್ರ ನಂದಿನಿ' ಧಾರಾವಾಹಿಯಲ್ಲಿನ ಪ್ರಮುಖ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದ ಕಿರುತೆರೆ ನಟ ಅಮನ್ ಜೈಸ್ವಾಲ್ (23) ಕಳೆದ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಜೈಸ್ವಾಲ್ ಅವರ ಬೈಕ್ ಗೆ ಟ್ರಕ್ ವೊಂದು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಜೈಸ್ವಾಲ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್ ಚಾಲಕನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮುಂಬೈನ ಅಂಬೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Aman Jaiswal
ಹೃದಯಾಘಾತದಿಂದ ಕಿರುತೆರೆ ನಟ ನಿತೇಶ್ ಪಾಂಡೆ ಸಾವು!

ಮೂಲತಃ ಉತ್ತರ ಪ್ರದೇಶದ ಅಮನ್ ಜೈಸ್ವಾಲ್ ಅವರು ಧರ್ತಿಪುತ್ರ ನಂದಿನಿ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಖ್ಯಾತಿಯನ್ನು ಗಳಿಸಿದರು. ರವಿ ದುಬೆ ಮತ್ತು ಸರ್ಗುನ್ ಮೆಹ್ತಾ ನಿರ್ಮಿಸಿದ ಜನಪ್ರಿಯ ಶೋ ಉದಯನ್‌ನಲ್ಲಿ ಕಾಣಿಸಿಕೊಳ್ಳುವ ಮೊದಲು ಅವರು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com