
ನವದೆಹಲಿ: ತನ್ನ ಮದುವೆ ಲಗ್ನ ಪತ್ರಿಕೆ ಹಂಚಲು ಹೋಗುತ್ತಿದ್ದ ಮಧುಮಗನ ಕಾರು ಬೆಂಕಿಗಾಹುತಿಯಾಗಿ ಆತ ಸುಟ್ಟು ಕರಕಲಾದ ಧಾರುಣ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಗಾಜಿಪುರ ಪ್ರದೇಶದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ಈ ಘಟನೆ ನಡೆದಿದ್ದು, ಲಗ್ನ ಪತ್ರಿಕೆ ಹಂಚಲು ತೆರಳಿದ್ದ ಮಧಮಗ ಇದ್ದ ವ್ಯಾಗನ್ ಆರ್ ಕಾರಿಗೆ ಬೆಂಕಿ ತಗುಲಿ ಮದುಮಗ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ.
ಮೃತ ಮದುಮಗನನ್ನು ಗ್ರೇಟರ್ ನೋಯ್ಡಾದ ನಾವಡಾ ನಿವಾಸಿ ಅನಿಲ್ ಎಂದು ಗುರುತಿಸಲಾಗಿದ್ದು, ಅನಿಲ್ ರ ಮದುವೆ ಫೆಬ್ರವರಿ 14 ರಂದು ನಿಶ್ಚಯವಾಗಿತ್ತು. ಹೀಗಾಗಿ ತನ್ನ ಮದುವೆಯ ಕಾರ್ಡ್‌ಗಳನ್ನು ವಿತರಿಸಲು ಹೊರಟಿದ್ದರು ಎನ್ನಲಾಗಿದೆ.
ಮನೆಗೆ ವಾಪಸ್ ಆಗದೇ ಇದ್ದಾಗ ಅನುಮಾನ
ಕುಟುಂಬಸ್ಥರು ತಿಳಿಸಿರುವಂತೆ ಮಧ್ಯಾಹ್ನ ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲು ಅನಿಲ್ ಹೋಗಿದ್ದರು. ಆದರೆ ತಡರಾತ್ರಿಯವರೆಗೆ ಮನೆಗೆ ಹಿಂತಿರುಗದಿದ್ದಾಗ ಮನೆಯವರು ಅನಿಲ್ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ಡ್ಆಫ್ ಬಂದಿದೆ. ಬಳಿಕ ರಾತ್ರಿ 11.30ರ ವೇಳೆಗೆ ದೆಹಲಿ ಪೊಲೀಸರು ಕರೆ ಮಾಡಿ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಕೂಡಲೇ ಅನಿಲ್ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದು, ಅಷ್ಟು ಹೊತ್ತಿಗಾಗಲೇ ಅನಿಲ್ ಅವರನ್ನು ಆಗಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಬಳಿಕ ಅನಿಲ್ ಸಾವಿನ ಕುರಿತು ಮಾಹಿತಿ ನೀಡಿದರು ಎಂದು ಸಂತ್ರಸ್ತೆಯ ಹಿರಿಯ ಸಹೋದರ ಸುಮಿತ್ ಹೇಳಿದ್ದಾರೆ.
Advertisement