ಶಾಲಾ ಕಚೇರಿಯಲ್ಲೇ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ Romance; Video viral

ಪ್ರಿನ್ಸಿಪಾಲ್‌ ಕೊಠಡಿಯಲ್ಲಿ ಈ ಇಬ್ಬರು ಮುದ್ದಾಡುತ್ತಾ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಇದೀಗ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
school head master romance with lady teacher in Rajasthan
ಶಾಲಾ ಕಚೇರಿಯಲ್ಲೇ ರೊಮ್ಯಾನ್ಸ್
Updated on

ರಾಜಸ್ತಾನ: 'ಜ್ಞಾನ ದೇಗುಲವಿದು.. ಕೈ ಮುಗಿದು ಒಳಗೆ ಬಾ..' ಇದು ಸರ್ಕಾರಿ ಶಾಲೆಗಳಲ್ಲಿನ ಘೋಷ ವಾಕ್ಯ.. ಇಂತಹ ದೇಗುಲದಲ್ಲೇ ಶಾಲಾ ಹೆಡ್ ಮಾಸ್ಟರ್ ಓರ್ವ ತನ್ನ ಸಹೋದ್ಯೋಗಿ ಶಿಕ್ಷಕಿಯೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವ ನಾಚಿಕೆಗೇಡಿನ ಕೃತ್ಯ ವೈರಲ್ ಆಗುತ್ತಿದೆ.

ಹೌದು.. ರಾಜಸ್ತಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಗಂಗ್ರಾರ್ ಬ್ಲಾಕ್‌ನ ಸಲೇರಾ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಡ್‌ ಮಾಸ್ಟರ್‌ ಮತ್ತು ಲೇಡಿ ಟೀಚರ್‌ ಕರ್ತವ್ಯ ಪ್ರಜ್ಞೆಯನ್ನು ಮರೆತು ರೊಮ್ಯಾನ್ಸ್‌ ಮಾಡಿದ್ದಾರೆ. ಹೆಡ್‌ ಮಾಸ್ಟರ್‌ ಶಾಲೆಯಲ್ಲಿಯೇ ಲೇಡಿ ಟೀಚರ್‌ ಜೊತೆ ಕಿಸ್ಸಿಂಗ್‌, ರೊಮ್ಯಾನ್ಸ್‌ ಅಂತ ಚಕ್ಕಂದ ಆಡಿದ್ದು, ಇವರಿಬ್ಬರ ಸರಸ ಸಲ್ಲಾಪದ ದೃಶ್ಯ ಶಾಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಿನ್ಸಿಪಾಲ್‌ ಕೊಠಡಿಯಲ್ಲಿ ಈ ಇಬ್ಬರು ಮುದ್ದಾಡುತ್ತಾ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಇದೀಗ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

school head master romance with lady teacher in Rajasthan
Maha Kumbh 2025: ಕುಂಭ ಮೇಳದಿಂದ 'ಐಐಟಿ ಬಾಬಾ' ಹೊರಕ್ಕೆ? ಕಾರಣ ಏನು? Abhey Singh ಹೇಳಿದ್ದೇನು?

ವಿದ್ಯಾ ದೇಗುಲದಲ್ಲಿ ನಾಚಿಕೆಗೇಡಿನ ವರ್ತನೆಯನ್ನು ತೋರಿದ ಈ ಇಬ್ಬರೂ ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಲಾಗಿದೆ.

ಈ ವಿಡಿಯೋವನ್ನು News4rajasthan ಹೆಸರಿನ ಎಕ್ಸ್‌ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತಮ್ಮ ಕೊಠಡಿಗೆ ಬಂದಂತಹ ಶಿಕ್ಷಕಿಯನ್ನು ತಬ್ಬಿಕೊಂಡು ಆಕೆಯೊಂದಿಗೆ ಹೆಡ್‌ ಮಾಸ್ಟರ್‌ ರೊಮ್ಯಾನ್ಸ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com