
ಚೆನ್ನೈ: ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರು ಗೋಮೂತ್ರದ 'ಔಷಧೀಯ ಮೌಲ್ಯ'ವನ್ನು ಶ್ಲಾಘಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗೋಮೂತ್ರವು 'ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಜೀರ್ಣಕಾರಿ ಗುಣಗಳನ್ನು ಹೊಂದಿವೆ ಕಾಮಕೋಟಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇದು ಕರುಳು ಬೇನೆಯಂತಹ ಸಮಸ್ಯೆಗಳಿಗೆ ಉಪಯುಕ್ತವಾಗಿದ್ದು ಅದನ್ನು 'ಔಷಧೀಯ ಮೌಲ್ಯ' ಎಂದು ಪರಿಗಣಿಸಬೇಕೆಂದು ಪ್ರತಿಪಾದಿಸಿದರು.
ತೀವ್ರ ಜ್ವರದಿಂದ ಬಳಲುತ್ತಿದ್ದಾಗ ಗೋಮೂತ್ರ ಸೇವಿಸಿದ ಸನ್ಯಾಸಿಯೊಬ್ಬರ ಜೀವನದ ಒಂದು ಘಟನೆಯನ್ನು ವಿವರಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ. ಜನವರಿ 15ರಂದು ಪೊಂಗಲ್ ಹಬ್ಬದ ಪ್ರಯುಕ್ತ ಇಲ್ಲಿನ ಗೋ ಸಂರಕ್ಷಣಾ ಶಾಲಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಮಕೋಟಿ ಅವರು ಈ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ನಾಯಕ ಕಾರ್ತಿ ಪಿ ಚಿದಂಬರಂ ಈ ಹೇಳಿಕೆಗಳನ್ನು ಖಂಡಿಸಿದ್ದು 'ಐಐಟಿ ಮದ್ರಾಸ್‌ನ ನಿರ್ದೇಶಕರು ಹುಸಿ ವಿಜ್ಞಾನವನ್ನು ಪ್ರಚಾರ ಮಾಡುವುದು @IMAIndiaOrg ಗೆ ಅತ್ಯಂತ ಅಸಹ್ಯಕರವಾಗಿದೆ ಎಂದು ಹೇಳಿದ್ದಾರೆ.
ಪ್ರೀಮಿಯಂ ಸಂಸ್ಥೆಯ ಮೂಲಗಳು ಈ ಹೇಳಿಕೆಯನ್ನು ಕಾಮಕೋಟಿ ಅವರೇ ಮಾಡಿದ್ದಾರೆ ಎಂದು ದೃಢಪಡಿಸಿದೆ. 'ಸಾವಯವ ರೈತ'ರಾಗಿರುವ ಕಾಮಕೋಟಿ ಅವರು ಗೋಶಾಲಾ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಅವರ ಹೇಳಿಕೆಗೆ ವಿಶಾಲವಾದ ಹಿನ್ನೆಲೆ ಇದೆ ಎಂದು ಹೇಳಿದರು.
Advertisement