ISRO 100ನೇ ರಾಕೆಟ್‌ ಉಡಾವಣೆ ಯಶಸ್ವಿ: ಶ್ರೀಹರಿಕೋಟದಿಂದ ನಾವಿಕ್-02 ಉಡ್ಡಯನ, ಇತಿಹಾಸ ಸೃಷ್ಟಿ

ಇಸ್ರೋ ಅಧ್ಯಕ್ಷರಾಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ವಿ.ನಾರಾಯಣ್ ಅವರ ಪಾಲಿಗೆ ಇದು ಮೊದಲ ಮಹತ್ವದ ಯೋಜನೆಯಾಗಿದೆ.
ಎನ್'ವಿಎಸ್-02 ಉಪಗ್ರಹ
ಎನ್'ವಿಎಸ್-02 ಉಪಗ್ರಹ
Updated on

ಶ್ರೀಹರಿಕೋಟಾ: 1963ರ ನ.21ರಂದು ಅಮೆರಿಕಾದ ರಾಕೆಟ್ ಬಳಸಿ ಮೊದಲ ಬಾರಿಗೆ ಉಪಗ್ರಹ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಬುಧವಾರ ತನ್ನ 100ನೇ ಉಡ್ಡಯನವನ್ನು ಯಶಸ್ವಿಯಾಗಿ ನಡೆದಿದೆ.

ಇಂದು ಬೆಳಿಗ್ಗೆ 6.23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎನ್'ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್'ವಿ ಬೆಂಕಿ ಉಗುಳುತ್ತಾ ನಭಕ್ಕೆ ಜಿಗಿಯಿತು. ಈ ಮೂಲಕ ಸ್ವದೇಶಿ ಜಿಪಿಎಸ್ ಯೋಜನೆಯ ಭಾಗವಾಗಿ ಎನ್'ವಿಎಸ್-02 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. 100ನೇ ಉಡ್ಡಯನದೊಂದಿಗೆ ಇತಿಹಾಸ ಸೃಷ್ಟಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಇಸ್ರೋ, "ಜಿಎಸ್‌ಎಲ್‌ವಿ- ಎಫ್15 ರಾಕೆಟ್‌ ಮೂಲಕ ಎನ್‌ವಿಎಸ್‌- 02 ಉಪಗ್ರಹ ಉಡ್ಡಯನ ಯೋಜನೆ ಯಶಸ್ವಿಯಾಗಿದೆ. ಬಾಹ್ಯಾಕಾಶ ನ್ಯಾವಿಗೇಷನ್‌ನಲ್ಲಿ ಭಾರತ ಹೊಸ ಎತ್ತರಕ್ಕೆ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದೆ.

ಇಸ್ರೋ ಅಧ್ಯಕ್ಷರಾಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ವಿ.ನಾರಾಯಣ್ ಅವರ ಪಾಲಿಗೆ ಇದು ಮೊದಲ ಮಹತ್ವದ ಯೋಜನೆಯಾಗಿದೆ.

ರಾಕೆಟ್ ಉಡಾವಣೆ ಯಶಸ್ವಿ ಕುರಿತು ಮಾತನಾಡಿರುವ ನಾರಾಯಣ್ ಅವರು, ಈ ಸಾಧನೆಯು ಟೀಮ್‌ವರ್ಕ್'ನಿಂದ ಆಗಿದ್ದು, ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಈ ವರ್ಷ ಇಸ್ರೋಗೆ ಬಿಡುವಿಲ್ಲದ ವರ್ಷವಾಗಿದೆ. ಮುಂಬರುವ ತಿಂಗಳುಗಳಲ್ಲಿ ಹಲವಾರು ಮಿಷನ್‌ಗಳು ನಮ್ಮ ಮುಂದಿವೆ. ಗಗನ್‌ಯಾನ ಭಾಗವಾಗಿ G1 ಮಿಷನ್‌ನ ತಯಾರಿಕೆಯಲ್ಲಿ ಉತ್ತಮವಾಗಿ ಮುನ್ನಡೆಯುತ್ತಿದ್ದೇವೆ. ಇದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ವರ್ಷ ಇನ್ನೂ ಕೆಲವು ಯೋಜನೆಗಳು ಇಸ್ರೋ ಮುಂದಿವೆ. ಚಂದ್ರಯಾನ 4, ಚಂದ್ರಯಾನ 5 ಮಿಷನ್‌ಗಳ ಜೊತೆಗೆ ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ಪ್ಯಾಡ್ ಮತ್ತು ಕುಲಶೇಖರಪಟ್ಟಣಂನಲ್ಲಿ ಎರಡನೇ ಉಡಾವಣೆ ಸೇರಿದಂತೆ ಹಲವಾರು ಯೋಜನೆಗಳಿವೆ. ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಯನ್ನು ಹೊರತರುವಲ್ಲಿ ನನ್ನನ್ನು ಇಸ್ರೋ ಅಧ್ಯಕ್ಷನಾಗಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆಂದು ಹೇಳಿದ್ದಾರೆ.

ಈ ಎನ್'ವಿಎಸ್ ಸ್ಯಾಟಲೈಟ್ ಭಾರತದ ನ್ಯಾವಿಗೇಷನ್ (ಸ್ವದೇಶಿ ಜಿಪಿಎಸ್) ಉಪಗ್ರಹಗಳ ಜಾಲದ 2ನೇ ತಲೆಮಾರಿನ ಉಪಗ್ರಹವಾಗಿದೆ. ಇದು ಭಾರತೀಯ ಉಪಖಂಡ (ಜೊತೆಗೆ ಅದರಾಚೆಗಿನ 1500 ಕಿ.ಮೀ.ದೂರದವರೆಗೆ)ದ ಬಳಕೆದಾರರಿಗೆ ನಿಖರ ಸಮಯ, ಸ್ಥಾನ ಮತ್ತು ವೇಗವನ್ನು ನೀಡುವ ಗುರಿಯನ್ನು ಹೊಂದಿದೆ.

ಎನ್'ವಿಎಸ್-02 ಉಪಗ್ರಹ
ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ಅಧಿಕಾರ ಸ್ವೀಕಾರ

ಈ ಉಪಗ್ರಹವು ಭೂಮಿ, ವಾಯು ಮತ್ತು ಸಾಗರ ಸಂಚಾರ, ಕೃಷಿ, ನೌಕೆಗಳ ನಿರ್ವಹಣೆ, ಮೊಬೈಲ್ ಲೊಕೇಷನ್ ಆಧರಿತ ಸೇವೆಗಳು, ಸ್ಯಾಟಲೈಟ್ ಗಳ ಕಕ್ಷೆಯ ನಿರ್ಧಾರ, ಇಂಟರ್ನೆಟ್ ಆಫ್ ಥಿಂಗ್ಸ್ ಆಧರಿತ ಅಪ್ಲಿಕೇಷನ್ ಗಳು, ತುರ್ತು ಮತ್ತು ಸಮಯಾಧಾರಿತ ಸೇವಗಳಿಗೆ ನೆರವು ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com