ಚಂಡೀಗಢ ಮೇಯರ್ ಚುನಾವಣೆ
ಚಂಡೀಗಢ ಮೇಯರ್ ಚುನಾವಣೆTNIE

AAP ಅಡ್ಡಾದಲ್ಲಿ BJP ಗೆದ್ದಿದ್ದೇ ರೋಚಕ: ಬಿಜೆಪಿಗೆ ಒಲಿದ ಚಂಡೀಗಢ ಮೇಯರ್ ಪಟ್ಟ; INDIA ಮೈತ್ರಿಕೂಟಕ್ಕೆ ನಿರಾಸೆ!

ಅಡ್ಡ ಮತದಾನವನ್ನು ತಡೆಗಟ್ಟಲು ಮತ್ತು ಪ್ರತಿಯೊಂದು ಮತವನ್ನು ಉಳಿಸಲು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟವು ತಮ್ಮ ಎಲ್ಲಾ ಕೌನ್ಸಿಲರ್‌ಗಳನ್ನು ರೆಸಾರ್ಟ್‌ನಲ್ಲಿ ಇರಿಸಿತ್ತು. ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಪಂಜಾಬ್ ಪೊಲೀಸರ ಕಣ್ಗಾವಲಿನಲ್ಲಿದ್ದರು.
Published on

ಚಂಡೀಗಢ: ಈ ಬಾರಿ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಒಟ್ಟಾಗಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತಡೆಯಲು ಸಾಧ್ಯವಾಗಲಿಲ್ಲ. ಬಿಜೆಪಿ ಅಭ್ಯರ್ಥಿ ಹರ್‌ಪ್ರೀತ್ ಕೌರ್ ಒಟ್ಟು 19 ಮತಗಳನ್ನು ಪಡೆಯುವ ಮೂಲಕ ಮೇಯರ್ ಪಟ್ಟ ಅಲಂಕರಿಸಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದ ಮೇಯರ್ ಅಭ್ಯರ್ಥಿ ಪ್ರೇಮಲತಾ ಪರವಾಗಿ 17 ಮತಗಳು ಬಂದಿವೆ. ಸಂಖ್ಯಾಬಲದ ಆಟ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಪರವಾಗಿತ್ತು. ಆದರೆ ಬಿಜೆಪಿ ಗೆದ್ದು ಬೀಗಿದೆ.

ಮೂವರು ಕೌನ್ಸಿಲರ್‌ಗಳು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಅಡ್ಡ ಮತದಾನವನ್ನು ತಡೆಗಟ್ಟಲು ಮತ್ತು ಪ್ರತಿಯೊಂದು ಮತವನ್ನು ಉಳಿಸಲು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟವು ತಮ್ಮ ಎಲ್ಲಾ ಕೌನ್ಸಿಲರ್‌ಗಳನ್ನು ರೆಸಾರ್ಟ್‌ನಲ್ಲಿ ಇರಿಸಿತ್ತು. ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಪಂಜಾಬ್ ಪೊಲೀಸರ ಕಣ್ಗಾವಲಿನಲ್ಲಿದ್ದರು. ಇನ್ನು ಕಾಂಗ್ರೆಸ್ ಕೌನ್ಸಿಲರ್‌ಗಳನ್ನು ಪಕ್ಷದ ನಾಯಕರು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದರು. ಆದರೂ ಈ ತಂತ್ರವೂ ಕೆಲಸ ಮಾಡಲಿಲ್ಲ.

ಈ ಬಾರಿ ಮತದಾನವು ರಹಸ್ಯ ಮತದಾನ ವ್ಯವಸ್ಥೆಯ ಮೂಲಕ ನಡೆಯಿತು. ಇಂತಹ ಪರಿಸ್ಥಿತಿಯಲ್ಲಿ, ಅಡ್ಡ ಮತದಾನ ಮಾಡುತ್ತಿರುವ ಕೌನ್ಸಿಲರ್‌ಗಳನ್ನು ಪತ್ತೆಹಚ್ಚುವುದು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸುಲಭವಲ್ಲ. ಇದಕ್ಕೂ ಮೊದಲು, ಸುಪ್ರೀಂ ಕೋರ್ಟ್ ನೇಮಿಸಿದ ಸ್ವತಂತ್ರ ವೀಕ್ಷಕ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ನ್ಯಾಯಮೂರ್ತಿ ಜಯಶ್ರೀ ಠಾಕೂರ್ ಅವರ ಮೇಲ್ವಿಚಾರಣೆಯಲ್ಲಿ ಚುನಾವಣೆಗಳು ನಡೆದವು.

ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಕಾಂಗ್ರೆಸ್‌ನ ಜಸ್ಬೀರ್ ಸಿಂಗ್ ಬಂಟಿ ಹಿರಿಯ ಉಪ ಮೇಯರ್ ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ ಅಭ್ಯರ್ಥಿ ತರುಣ್ ಮೆಹ್ತಾ ಉಪಮೇಯರ್ ಸ್ಥಾನ ಗೆದ್ದಿದ್ದಾರೆ. ಮೆಹ್ತಾ 19 ಮತಗಳನ್ನು ಪಡೆದ್ದು ಅದೇ ಸಮಯದಲ್ಲಿ, ಬಿಜೆಪಿ ಅಭ್ಯರ್ಥಿ 17 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮೇಯರ್ ನಿಂದ ಉಪಮೇಯರ್ ವರೆಗೆ, ಎಲ್ಲಾ ಮತಗಳು ಮಾನ್ಯವಾಗಿದ್ದವು ಮತ್ತು ಒಂದೇ ಒಂದು ಮತವೂ ರದ್ದಾಗಲಿಲ್ಲ.

ಚಂಡೀಗಢ ಮೇಯರ್ ಚುನಾವಣೆ
ದೆಹಲಿ ಚುನಾವಣೆಗೂ ಮುನ್ನ AAP ಗೆ ಶಾಕ್: ಪಂಜಾಬ್ ಸಿಎಂ ಭಗವಂತ್ ಮಾನ್ ದೆಹಲಿಯ ಮನೆಯಲ್ಲಿ EC ಶೋಧ

ಮೇಯರ್ ಚುನಾವಣೆಯಲ್ಲಿ ಮೊದಲ ಮತವನ್ನು ಚಂಡೀಗಢ ಸಂಸದ ಮನೀಶ್ ತಿವಾರಿ ಚಲಾಯಿಸಿದರು. ಇದಾದ ನಂತರ ಕೌನ್ಸಿಲರ್‌ಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತದಾನದ ಮೊದಲ ಗಂಟೆಯೊಳಗೆ ಮತಪತ್ರಗಳ ವಿವಾದವೂ ಭುಗಿಲೆದ್ದಿತು. ಚಂಡೀಗಢದ ವಾರ್ಡ್ ನಂಬರ್ ಒನ್ ನ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಜಸ್ವಿಂದರ್ ಕೌರ್ ಅವರು ಮತಪತ್ರದಲ್ಲಿ ಒಂದು ಚುಕ್ಕೆ ಇದೆ ಎಂದು ಆರೋಪಿಸಿ ಮತ ಚಲಾಯಿಸಲು ಮತ್ತೊಂದು ಮತಪತ್ರಕ್ಕೆ ಒತ್ತಾಯಿಸಿದರು.

ಚಂಡೀಗಢ ಮಹಾನಗರ ಪಾಲಿಕೆಯ ಒಟ್ಟು ಸದಸ್ಯ ಬಲ 35. ನಿಗಮದ 35 ಕೌನ್ಸಿಲರ್‌ಗಳ ಜೊತೆಗೆ, ಚಂಡೀಗಢದ ಸಂಸದರು ಸಹ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಒಟ್ಟು 36 ಮತಗಳಿವೆ. ನೂರು ಪ್ರತಿಶತ ಮತಗಳು ಚಲಾವಣೆಯಾದವು ಆದರೆ ಅಡ್ಡ ಮತದಾನದಿಂದಾಗಿ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸೋಲನ್ನು ಎದುರಿಸಬೇಕಾಯಿತು. ಚಂಡೀಗಢದ ಮುನ್ಸಿಪಲ್ ಹೌಸ್‌ನಲ್ಲಿ, ಆಮ್ ಆದ್ಮಿ ಪಕ್ಷವು 13 ಕೌನ್ಸಿಲರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರು ಕೌನ್ಸಿಲರ್‌ಗಳೊಂದಿಗೆ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸಂಸದರ ಮತಗಳನ್ನು ಒಳಗೊಂಡಂತೆ ಒಟ್ಟು 20 ಮತಗಳನ್ನು ಹೊಂದಿದ್ದು, ಇದು ಗೆಲುವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ 19ಕ್ಕಿಂತ ಒಂದು ಮತ ಹೆಚ್ಚಿತ್ತು.

X

Advertisement

X
Kannada Prabha
www.kannadaprabha.com