ಐದು ತಿಂಗಳಲ್ಲಿ 33 ಕೆಜಿ ತೂಕ ಕಳೆದುಕೊಂಡ ನವಜೋತ್ ಸಿಂಗ್ ಸಿಧು; ಫೋಟೊ ಹಂಚಿಕೊಂಡ ಮಾಜಿ ಕ್ರಿಕೆಟಿಗ

ಸಿಧು ಅವರ ಪೋಸ್ಟ್ 10,000ಕ್ಕೂ ಹೆಚ್ಚು ಲೈಕ್ಸ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಇನ್‌ಸ್ಟಾಗ್ರಾಂ ಬಳಕೆದಾರರು ಸಿಧು ಅವರ ಅದ್ಭುತ ರೂಪಾಂತರಕ್ಕಾಗಿ ಹೊಗಳಿದ್ದಾರೆ.
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Updated on

ಇತ್ತೀಚಿನ ದಿನಗಳಲ್ಲಿ ಬಹುತೇಕರಿಗೆ ತೂಕ ಕಳೆದುಕೊಳ್ಳುವುದು ಬಹುದೊಡ್ಡ ಸವಾಲಾಗಿರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗದೆ ಹಲವರು ಅಸಮಾಧಾನ ಹೊರಹಾಕುತ್ತಾರೆ. ಇದೀಗ ಮಾಜಿ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ತಮ್ಮ ತೂಕ ಇಳಿಕೆಯ ಜರ್ನಿಯ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೊದಲು ಮತ್ತು ನಂತರ ಎಂದು ಫೋಟೊಗಳನ್ನು ಹಂಚಿಕೊಂಡಿದ್ದು, ಆಗಸ್ಟ್‌ನಿಂದ ಐದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 33 ಕೆಜಿ ತೂಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಶೀರ್ಷಿಕೆಯಲ್ಲಿ, ಅವರು ಈ ಫಿಟ್‌ನೆಸ್ ಗುರಿಯನ್ನು ಸಾಧಿಸಲು ಆಹಾರ, ಪ್ರಾಣಾಯಾಮ ಮತ್ತು ದೀರ್ಘ ನಡಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಹಂಚಿಕೊಂಡಿದ್ದಾರೆ.

'ಇದು ಇಚ್ಛಾಶಕ್ತಿ, ನಿರ್ಣಯ, ಪ್ರಕ್ರಿಯೆ ಮತ್ತು ಪ್ರಾಣಾಯಾಮ, ತೂಕ ತರಬೇತಿ ಮತ್ತು ದೀರ್ಘ ನಡಿಗೆಗಳಿಂದ ಸುಗಮಗೊಳಿಸಲ್ಪಟ್ಟ ಶಿಸ್ತುಬದ್ಧ ಆಹಾರದ ಬಗ್ಗೆ... ಇದು ಅಸಾಧ್ಯವಲ್ಲ, - 'ಆರೋಗ್ಯಕರ ದೇಹವನ್ನು ಹೊಂದುವುದು ದೊಡ್ಡ ಆಶೀರ್ವಾದ' ಎಂದು ಕಾಂಗ್ರೆಸ್ ನಾಯಕ ಬರೆದುಕೊಂಡಿದ್ದಾರೆ.

ಸಿಧು ಅವರ ಪೋಸ್ಟ್ 10,000ಕ್ಕೂ ಹೆಚ್ಚು ಲೈಕ್ಸ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಇನ್‌ಸ್ಟಾಗ್ರಾಂ ಬಳಕೆದಾರರು ಸಿಧು ಅವರ ಅದ್ಭುತ ರೂಪಾಂತರಕ್ಕಾಗಿ ಹೊಗಳಿದ್ದಾರೆ.

'ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಸಾಧನೆಗಳಷ್ಟೇ ದೊಡ್ಡ ಸಾಧನೆ, ವಿಶೇಷವಾಗಿ ನೀವು ಸಿಕ್ಸರ್‌ಗಳನ್ನು ಬಾರಿಸುವುದು (ಜಿಯೋಫ್ ಬಾಯ್‌ಕಾಟ್‌ ಅವರು ಈ ಬಗ್ಗೆ ಒಮ್ಮೆ ಪ್ರಸ್ತಾಪಿಸಿದ್ದರು) ನವಜೋತ್ ಸಿಂಗ್ ಸಿಧು ಜೀ, ನಿಮ್ಮ ಆಹಾರದ ರಹಸ್ಯವನ್ನು ನೀವು ಹಂಚಿಕೊಳ್ಳಬಹುದೇ, ಇದರಿಂದ ನಿಮ್ಮ ಅಭಿಮಾನಿಗಳು ಸಹ ಪ್ರಯೋಜನ ಪಡೆಯುತ್ತಾರೆ' ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ.

'ನಿಮ್ಮ ಎನರ್ಜಿ ಲೆವೆಲ್ ಹೆಚ್ಚಾಗುವುದನ್ನು ನಾವು ಸುಲಭವಾಗಿ ನೋಡಬಹುದು ಮತ್ತು ಆಂಟಿ ಚೇತರಿಸಿಕೊಂಡ ನಂತರ ನೀವು ಹಾಕುತ್ತಿರುವ ಎಲ್ಲ ವಿಡಿಯೋಗಳಲ್ಲಿ ನಿಮ್ಮನ್ನು ನೋಡಲು ನಮಗೆ ಸಂತೋಷವಾಗಿದೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

'ಬ್ರಾವೋ ! ನೀವು ಈಗ 95 ಕೆಜಿಗೆ ಮರಳಿದ್ದೀರಿ ಎಂಬುದನ್ನು ನೋಡಲು ತುಂಬಾ ಸಂತೋಷವಾಗಿದೆ... ಮತ್ತೆ ಶತಕದ ಕಡೆ ಓಡಬೇಡಿ...... ಕಡಿಮೆ ಸ್ಕೋರ್ ಮತ್ತು ಹೆಚ್ಚಿನ ಪ್ರೊಫೈಲ್ ಅನ್ನು ಕಾಪಾಡಿಕೊಳ್ಳಿ ಸರ್' ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com