Video: 'ರಾಕ್ಷಸೀ' ಡ್ರೋನ್ ಗಳ ಹತ್ತಿಕ್ಕಲು Eagle Squad ಸೇರ್ಪಡೆ; ಪ್ರಪಂಚದ 2ನೇ ಪೊಲೀಸ್ ಇಲಾಖೆ!

ತೆಲಂಗಾಣ ಪೊಲೀಸ್ ಇಲಾಖೆಗೆ ಇದೀಗ Eagle Squad ಸೇರ್ಪಡೆಯಾಗಿದ್ದು, ಇತ್ತೀಚೆಗೆ ಪೊಲೀಸರು ಹದ್ದುಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಯಶಸ್ವಿಯಾಗಿದೆ.
Telangana police gets Eagle Squad
ತೆಲಂಗಾಣ ಪೊಲೀಸರ ಈಗಲ್ ಸ್ಕ್ವಾಡ್
Updated on

ಹೈದರಾಬಾದ್: ಬದಲಾದ ಸನ್ನಿವೇಶ ಮತ್ತು ಬದಲಾಗುತ್ತಿರುವ ತಂತ್ರಜ್ಞಾನಗಳ ಆಧಾರದ ಮೇಲೆ ಪೊಲೀಸ್ ಇಲಾಖೆ ಕೂಡ ಬದಲಾಗುತ್ತಿದ್ದು ರಾಕ್ಷಸೀ ಡ್ರೋನ್ ಗಳ ಹತ್ತಿಕ್ಕಲು ಇದೀಗ 'ಗರುಡಾ ಪಡೆ' ಸೇರ್ಪಡೆಯಾಗಿದೆ.

ಹೌದು.. ತೆಲಂಗಾಣ ಪೊಲೀಸ್ ಇಲಾಖೆಗೆ ಇದೀಗ Eagle Squad ಸೇರ್ಪಡೆಯಾಗಿದ್ದು, ಇತ್ತೀಚೆಗೆ ಪೊಲೀಸರು ಹದ್ದುಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಯಶಸ್ವಿಯಾಗಿದೆ. ಇತ್ತೀಚಿನ ಪ್ರದರ್ಶನದಲ್ಲಿ ಹದ್ದುಗಳ ಪಡೆಯು ಡ್ರೋನ್‌ಗಳನ್ನು ಪ್ರತಿಬಂಧಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ತೆಲಂಗಾಣ ಪೊಲೀಸ್ ಉನ್ನತ ಅಧಿಕಾರಿಗಳ ಮುಂದೆ ವೃತ್ತಿಪರರಿಂದ ತರಬೇತಿ ಪಡೆದ ಮೂರು ಹದ್ದುಗಳು ತಮ್ಮ ಪ್ರದರ್ಶನ ನೀಡಿದವು. ಈ ವೇಳೆ ಸಿಬ್ಬಂದಿ ಹಾರಿಸಿದ ಡ್ರೋನ್ ಗಳನ್ನು ದೂರದಲ್ಲಿ ಕುಳಿತಿದ್ದ ಹದ್ದುಗಳು ಕ್ಷಣಮಾತ್ರದಲ್ಲಿ ಅವುಗಳನ್ನು ಹಿಡಿದು ಕ್ಯಾಂಪ್ ಗೆ ತಂದು ಬಿಟ್ಟವು.

ಈ ಬಗ್ಗೆ ಮಾಹಿತಿ ನೀಡಿರುವ ತೆಲಂಗಾಣ ಪೊಲೀಸರು ಈ ಉಪಕ್ರಮವು ವಿವಿಐಪಿ ಭೇಟಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಘಟಕವನ್ನು ತೆಲಂಗಾಣ ಪೊಲೀಸರು ಮುನ್ನಡೆಸುತ್ತಿದ್ದಾರೆ. ಹದ್ದುಗಳ ದಳವನ್ನು ಸಕ್ರಿಯ ಸೇವೆಗೆ ಸಂಯೋಜಿಸಲು ಯೋಜನೆಗಳು ನಡೆಯುತ್ತಿವೆ, ಡ್ರೋನ್ ಬೆದರಿಕೆಯನ್ನು ಎದುರಿಸಲು ತೆಲಂಗಾಣ ಪೊಲೀಸರೊಳಗೆ ವಿಶೇಷ ಈಗಲ್‌ಸ್ಕ್ವಾಡ್ ಘಟಕವನ್ನು ಸ್ಥಾಪಿಸಲಾಗಿದೆ.

ಸುಮಾರು ಎರಡು ವರ್ಷ ವಯಸ್ಸಿನ ಎರಡು ಹದ್ದುಗಳಿಗೆ ವಸ್ತು ಕಣ್ಗಾವಲುಗಾಗಿ ತರಬೇತಿ ನೀಡಲಾಗಿದೆ. ಮತ್ತೊಂದು ಹದ್ದುವಿಗೆ ಉತ್ತಮ ಗುಣಮಟ್ಟದ ಚಿತ್ರಣಕ್ಕಾಗಿ ಕಣ್ಗಾವಲು ಕ್ಯಾಮೆರಾವನ್ನು ಅಳವಡಿಸಿ ಈ ತರಬೇತಿ ನಡೆಯಸಲಾಯಿತು. ಹದ್ದುಗಳಿಗೆ ನಿತ್ಯ ಒಂದು ಗಂಟೆ ತರಬೇತಿ ನೀಡಲಾಗುತ್ತಿದ್ದು, ಇದು ರಾಕ್ಷಸ ಡ್ರೋನ್‌ಗಳನ್ನು ಪ್ರತಿಬಂಧಿಸುವಲ್ಲಿ ಹದ್ದುಗಳ ದಳದ ಹೆಚ್ಚಿನ ಯಶಸ್ಸಿನ ಪ್ರಮಾಣಕ್ಕೆ ಕಾರಣವಾಗಿವೆ.

ಈಗಲ್ ಸ್ಕ್ವಾಡ್ ಹೊಂದಿರುವ ಪ್ರಪಂಚದ 2ನೇ ಇಲಾಖೆ

ಇನ್ನು ಪ್ರಸ್ತುತ ಈಗಲ್ ಸ್ಕ್ವಾಡ್ ಹೊಂದುವ ಮೂಲಕ ತೆಲಂಗಾಣ ಪೊಲೀಸ್ ಇಲಾಖೆಯು ಇಂತಹ ಸ್ಕ್ವಾಡ್ ಹೊಂದಿರುವ ಪ್ರಪಂಚದ 2ನೇ ಪೊಲೀಸ್ ಇಲಾಖಖೆ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ ನೆದರ್‌ಲ್ಯಾಂಡ್ಸ್ ಇಂತಹ ಈಗಲ್ ಸ್ಕ್ವಾಡ್ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com