
ಪ್ರಯಾಗ್ ರಾಜ್: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಬಗ್ಗೆ ಅಸಹ್ಯಕರ ಹೇಳಿಕೆಯೊಂದನ್ನು ವಿಡಿಯೋ ಮೂಲಕ ವ್ಯಕ್ತಿಯೋರ್ವ ನೀಡಿದ್ದಾರೆ. ಮಹಿಳೆಯರ ಘನತೆಗೆ ಚ್ಯುತಿ ತರುವ ಹೇಳಿಕೆ ಇದಾಗಿದ್ದು, ಪೊಲೀರು ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿಯ ಶಬೀರ್ ಹುಸೇನ್ ಎಂಬ ವ್ಯಕ್ತಿ ಮಹಾಕುಂಭ ಮೇಳ ಹಾಗೂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಮಿರ್ಗಂಜ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ 353 (ಸುಳ್ಳು ಮಾಹಿತಿ, ವದಂತಿಗಳನ್ನು ಹರಡುವುದು) ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ (ಸಿಒ) ಅಂಜನಿ ಕುಮಾರ್ ತಿವಾರಿ ತಿಳಿಸಿದ್ದಾರೆ.
ಮಹಾ ಕುಂಭದಲ್ಲಿ ಮಹಿಳೆಯರ ಬಗ್ಗೆ ಅವಮಾನಕರ ಕಾಮೆಂಟ್‌ಗಳ ವೀಡಿಯೊದ ತನಿಖೆಯ ನಂತರ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಮೀರ್ಗಂಜ್ ನಿವಾಸಿ ಹುಸೇನ್ ಮಹಾ ಕುಂಭದ ಬಗ್ಗೆ ನಕಲಿ ಸುದ್ದಿ ಪ್ರಸಾರ ಮಾಡಿದ ವೈರಲ್ ಪೋಸ್ಟ್ ಬಂದಿದೆ ಎಂದು ಉಪ ನಿರೀಕ್ಷಕ ಯತೇಂದ್ರ ಕುಮಾರ್ ಎಫ್ಐಆರ್ ನಲ್ಲಿ ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಹುಸೇನ್ ಅವರ ವೈರಲ್ ಪೋಸ್ಟ್ ಹಿಂದೂ ಧರ್ಮದ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಸಮುದಾಯದ ಜನರಲ್ಲಿ ಸಾಕಷ್ಟು ಕೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement