
ನವದೆಹಲಿ: ವಿಮಾನ ನಿಲ್ದಾಣದ ಪ್ರವೇಶ, ಭದ್ರತಾ ತಪಾಸಣೆ ಪ್ರದೇಶಗಳು ಮತ್ತು ವಿಮಾನ ಬೋರ್ಡಿಂಗ್ ಸೇರಿದಂತೆ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿರುವ ಡಿಜಿ ಯಾತ್ರಾ ಆ್ಯಪ್ ನ್ನು 2028 ರ ವೇಳೆಗೆ ಸುಮಾರು ಶೇ. 80 ರಷ್ಟು ದೇಶಿ ವಿಮಾನ ಪ್ರಯಾಣಿಕರು ಬಳಸುವ ನಿರೀಕ್ಷೆಯಿದೆ ಎಂದು ಸಿಇಒ ಸುರೇಶ್ ಖಡಕಭಾವಿ ತಿಳಿಸಿದ್ದಾರೆ.
ಇದರ ದೈನಂದಿನ ಬಳಕೆ ಪ್ರಸ್ತುತ ಶೇಕಡಾ 30 ರಿಂದ 35 ರಷ್ಟಿದೆ. "ಬಹುಶಃ, ಭಾಷೆ ಅಡ್ಡಿಯಾಗುವ ಸಾಧ್ಯತೆಯಿಂದ ವಿವಿಧ ಭಾಷೆಗಳಿಗೆ ಹೊಂದಿಕೆಯಾಗುವಂತೆ ಆ್ಯಪ್ ಪರಿಚಯಿಸಲಾಗುತ್ತಿದೆ. ಸದ್ಯ ಇಂಗ್ಲೀಷ್ ನಲ್ಲಿ ಮಾತ್ರ ಲಭ್ಯವಿದ್ದು, ಇದೇ ತಿಂಗಳಲ್ಲಿ ಹಿಂದಿ, ಬೆಂಗಾಲಿ, ತಮಿಳು, ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಪರಿಚಯಿಸಲಾಗುವುದು ಎಂದು ಹೇಳಿದರು.
ಇದೀಗ ಅವುಗಳನ್ನು ಪರಿಶೀಲಿಸುತ್ತಿದ್ದು, ಜುಲೈ ವೇಳೆಗೆ ಬಳಕೆದಾರರು ಆರು ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ತದನಂತರ ಸಾಂವಿಧಾನಿಕ ಮಾನ್ಯತೆ ಪಡೆದ ಎಲ್ಲಾ 22 ಭಾರತೀಯ ಭಾಷೆಗಳಲ್ಲಿ ಆ್ಯಪ್ ನ್ನು ಪರಿಚಯಿಸುವ ಗುರಿ ಹೊಂದಿದ್ದೇವೆ ಎಂದು ಖಡಕಭಾವಿ ಬ್ಯುಸಿನೆಸ್ ಸ್ಟಾಂಡರ್ಡ್ ಗೆ ತಿಳಿಸಿದ್ದಾರೆ.
ಈ ಆ್ಯಪ್ ನಲ್ಲಿ ದಾಖಲೆಗಳ ಬದಲಿಗೆ ಮುಖ ಗುರುತಿಸುವಿಕೆಯ ವ್ಯವಸ್ಥೆ ಹೊಂದಿದ್ದು, ಪ್ರಸ್ತುತ ನೋಂದಣಿಗೆ ಆಧಾರನ್ನು ಮಾತ್ರ ಸ್ವೀಕರಿಸುತ್ತದೆ. ಇದನ್ನು ಕೂಡಾ ಬದಲಾವಣೆ ಮಾಡಲಾಗುವುದು. ಡ್ರೈವಿಂಗ್ ಲೈಸೆನ್ಸ್ ಬಳಸಿ ಡಿಜಿ ಯಾತ್ರೆ ಆ್ಯಪ್ ನಲ್ಲಿ ನೋಂದಾಯಿಸಲು ಸಾಧ್ಯವಿಲ್ಲ. ಅದಕ್ಕೆ ಬಳಕೆದಾರರನ್ನು ಸ್ವೀಕರಿಸುವುದನ್ನು ಸೇರಿಸಲಾಗುತ್ತಿದೆ.
ಒಂದು ತಿಂಗಳಲ್ಲಿ ಆಧಾರ್ ಕಾರ್ಡ್ ಮಾತ್ರವಲ್ಲದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್‌ನಲ್ಲೂ ನೋಂದಾಯಿಸಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು. ಡಿಜಿ ಯಾತ್ರಾ ಪ್ರಸ್ತುತ 24 ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರ್ಚ್ 2026 ರ ವೇಳೆಗೆ 41 ವಿಮಾನ ನಿಲ್ದಾಣಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.
ಡಿಜಿ ಯಾತ್ರಾ ಆ್ಯಪ್ ನ್ನು 2028 ರ ವೇಳೆಗೆ ಸುಮಾರು ಶೇ. 80 ರಷ್ಟು ದೇಶಿ ವಿಮಾನ ಪ್ರಯಾಣಿಕರು ಬಳಸುವ ನಿರೀಕ್ಷೆಯಿದೆ .ಅಂತಾರಾಷ್ಟ್ರೀಯವಾಗಿಯೂ ಈ ಆ್ಯಪ್ ಬಳಕೆ ನಿಟ್ಟಿನಲ್ಲಿ ಫೌಂಡೇಷನ್ ಯೋಜಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
Advertisement