ಗ್ರಾಹಕರಿಗೆ ಹಾಲು ಹಾಕುವ ಮುನ್ನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ ಬಂಧನ

ಪಪ್ಪು ಅಲಿಯಾಸ್ ಮೊಹಮ್ಮದ್ ಷರೀಫ್ ಬಂಧಿತ ಆರೋಪಿ. ಗೋಮತಿ ನಗರ ಪ್ರದೇಶದಲ್ಲಿ ಹಾಲು ವಿತರಿಸುತ್ತಿದ್ದಾಗ ಕೃತ್ಯ ದಾಖಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಲಕ್ನೋ: ಹಾಲು ವಿತರಿಸುವ ಮೊದಲು ವ್ಯಾಪಾರಿಯೊಬ್ಬ ಅದಕ್ಕೆ ಉಗುಳುವುದನ್ನು ನೋಡಿದ್ದಾರೆ ಎಂದು ಆರೋಪಿಸಿದ ನಂತರ, ಹಾಲು ವ್ಯಾಪಾರಿಯನ್ನು ಬಂಧಿಸಲಾಯಿತು. ಈ ಘಟನೆ ಗ್ರಾಹಕರ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.

ಪಪ್ಪು ಅಲಿಯಾಸ್ ಮೊಹಮ್ಮದ್ ಷರೀಫ್ ಬಂಧಿತ ಆರೋಪಿ. ಗೋಮತಿ ನಗರ ಪ್ರದೇಶದಲ್ಲಿ ಹಾಲು ವಿತರಿಸುತ್ತಿದ್ದಾಗ ಕೃತ್ಯ ದಾಖಲಾಗಿದೆ. ಗೋಮತಿ ನಗರದ ವಿನಯ್ ಖಾಂಡ್ ನಿವಾಸಿ ಲವ್ ಶುಕ್ಲಾ ಶನಿವಾರ ಬೆಳಿಗ್ಗೆ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ, ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ" ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ಬ್ರಿಜೇಶ್ ತಿವಾರಿ ಪಿಟಿಐಗೆ ತಿಳಿಸಿದರು.

ಘಟನೆಯನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಆಹಾರ ಸುರಕ್ಷತಾ ಪದ್ಧತಿಗಳ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಕಳವಳಕ್ಕೆ ಕಾರಣವಾಗಿದೆ.

Representational image
ಧಾರ್ಮಿಕ ಮೆರವಣಿಗೆ ವೇಳೆ 'ಉಗುಳಿದ' ಆರೋಪ: ಮೂವರು ಮುಸ್ಲಿಂ ಯುವಕರ ಮನೆ ಭಾಗಶಃ ಧ್ವಂಸ! ವಿಡಿಯೋ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com