ಸುಳ್ಳು ಹೇಳಿ ಅಮೆರಿಕ ಅಧ್ಯಕ್ಷ Donald Trump ಭೇಟಿಗೆ ಯತ್ನಿಸಿ ಮುಜುಗರಕ್ಕೀಡಾದ BJP ಸಂಸದ?: ಕಾಂಗ್ರೆಸ್ ವ್ಯಂಗ್ಯ!

ಅಮೆರಿಕದ ಅಧ್ಯಕ್ಷರು ಪಾಕಿಸ್ತಾನದ ಪರವಾಗಿ ಬಹಿರಂಗವಾಗಿ ನಿಂತು "ಆಪರೇಷನ್ ಸಿಂಧೂರ್" ನಲ್ಲಿ ಕದನ ವಿರಾಮದ ಕೀರ್ತಿಯನ್ನು ಪಡೆದಿದ್ದು ಈ ಘಟನೆ ಇನ್ನಷ್ಟು ಚಿಂತಾಜನಕವಾಗುತ್ತದೆ ಎಂದು ಖರ್ಗೆ ಬರೆದಿದ್ದಾರೆ.
Indian Delegation
ಭಾರತದ ನಿಯೋಗ
Updated on

ನವದೆಹಲಿ: 'ಆಪರೇಷನ್ ಸಿಂಧೂರ' ರಾಜತಾಂತ್ರಿಕ ತಂಡದ ಜೊತೆ ಬಿಜೆಪಿ ಸಂಸದಯೊಬ್ಬರು ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಯತ್ನಿಸಿ ಮುಜುಗರಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಕಾಂಗ್ರೆಸ್ ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದು ಬಿಜೆಪಿಯ ಯುವ ಸಂಸದರೊಬ್ಬರು ಅಮೆರಿಕದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯವಾಗಿ ಭೇಟಿಗೆ ಯತ್ನಿಸಿದ್ದರ ಬಗ್ಗೆ ಲೇವಡಿ ಮಾಡಿದ್ದಾರೆ.

ಈ ಸುದ್ದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡ ಖರ್ಗೆ, ಈ 'ರಾಜತಾಂತ್ರಿಕ ಉಲ್ಲಂಘನೆ'ಯ ಕುರಿತು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದಿಂದ ಉತ್ತರಗಳನ್ನು ಕೋರಿದ್ದಾರೆ. ಈ ವರದಿ ನಿಜವಾಗಿದ್ದರೆ ಅದು ಅತ್ಯಂತ ನಾಚಿಕೆಗೇಡಿನ ಸಂಗತಿ. ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ರಾಜತಾಂತ್ರಿಕ ಶಿಷ್ಟಾಚಾರವನ್ನು ಮೀರಿ ಸಂಸದರೊಬ್ಬರು ಟ್ರಂಪ್ ಅವರ ಭೇಟಿಗೆ ಯತ್ನಿಸಿದ್ದರು? ವಿದೇಶಾಂಗ ಸಚಿವಾಲಯಕ್ಕೆ ಇದರ ಬಗ್ಗೆ ತಿಳಿದಿತ್ತೇ? ಈ ವ್ಯಕ್ತಿ ಅಧಿಕೃತ ನಿಯೋಗದ ಭಾಗವಾಗಿದ್ದಾಗ ಇಂತಹ ಅಪ್ರಬುದ್ಧ ಕೃತ್ಯಕ್ಕೆ ಸಮರ್ಥನೆ ಏನು? ಈ ಬಿಜೆಪಿ ಸಂಸದ ಯಾರು ಮತ್ತು ಸರ್ಕಾರ ಈ ಉಲ್ಲಂಘನೆಯ ಬಗ್ಗೆ ಯಾವ ಕ್ರಮ ಕೈಗೊಂಡಿತು? ಎಂದು ಪ್ರಶ್ನಿಸಿದ್ದಾರೆ.

ಅಮೆರಿಕದ ಅಧ್ಯಕ್ಷರು ಪಾಕಿಸ್ತಾನದ ಪರವಾಗಿ ಬಹಿರಂಗವಾಗಿ ನಿಂತು "ಆಪರೇಷನ್ ಸಿಂಧೂರ್" ನಲ್ಲಿ ಕದನ ವಿರಾಮದ ಕೀರ್ತಿಯನ್ನು ಪಡೆದಿದ್ದು ಈ ಘಟನೆ ಇನ್ನಷ್ಟು ಚಿಂತಾಜನಕವಾಗುತ್ತದೆ ಎಂದು ಖರ್ಗೆ ಬರೆದಿದ್ದಾರೆ. ಇದು ಸಣ್ಣ ರಾಜಕೀಯ ಗಾಸಿಪ್ ಅಲ್ಲ, ಆದರೆ ಭಾರತದ ಸಾಂಸ್ಥಿಕ ಘನತೆ ಮತ್ತು ರಾಜತಾಂತ್ರಿಕ ಖ್ಯಾತಿಯ ಮೇಲಿನ ದಾಳಿ ಎಂದು ಎಕ್ಸ್ ಮಾಡಿದ್ದಾರೆ.

ಇಡೀ ವಿಷಯವೇನು?

ಪ್ರಮುಖ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಯುವ ಬಿಜೆಪಿ ಸಂಸದರೊಬ್ಬರು ಕಾಂಗ್ರೆಸ್ ನಾಯಕ ಶಶಿ ತರೂರ್ ನೇತೃತ್ವದ ಸಂಸದೀಯ ನಿಯೋಗದ ಭಾಗವಾಗಿದ್ದರು. ಇದು "ಆಪರೇಷನ್ ಸಿಂಧೂರ್" ಪರಿಸ್ಥಿತಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಗುರಿಯನ್ನು ಹೊಂದಿತ್ತು. ಅಮೆರಿಕಕ್ಕೆ ತೆರಳಿದ ನಿಯೋಗದಲ್ಲಿದ್ದ ಸಂಸದ ಮಿಲಿಂದ್ ದಿಯೊರಾ ಅವರು ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಅವರನ್ನು ಭೇಟಿಯಾಗಿದ್ದರು. ಈ ಭೇಟಿಗೆ ಟ್ರಂಪ್‌ ಅವರಿಂದ ಸಮಯ ಮತ್ತು ಅನುಮತಿ ಪಡೆದುಕೊಂಡಿದ್ದರು. ನಾನೇನೂ ಕಡಿಮೆ ಇಲ್ಲ, ನಾನೂ ಅವರನ್ನು ಭೇಟಿ ಮಾಡುವೆ ಎಂಬ ಹುಂಬತನದಿಂದ ಬಿಜೆಪಿ ಸಂಸದರು ಅವರನ್ನು ಭೇಟಿ ಮಾಡಲು ನಿರ್ಧರಿಸಿದರು. ಆದರೆ ಅವರಿಗೆ ಜೂನಿಯರ್‌ ಟ್ರಂಪ್‌ ಅವರಿಂದ ಅನುಮತಿ ಸಿಗಲಿಲ್ಲ. ಇದರಿಂದ ಸುಮ್ಮನಾಗಲಿಲ್ಲ. ಬದಲಾಗಿ ಟ್ರಂಪ್‌ ಅವರನ್ನು ನೇರವಾಗಿ ಭೇಟಿ ಮಾಡುವ ಶಪತ ಮಾಡಿದರು. ಅಮೆರಿಕದಲ್ಲಿದ್ದ ತನ್ನ ಗೆಳೆಯನ ನೇರವನ್ನು ಪಡೆದು ಟ್ರಂಪ್‌ ಅವರನ್ನು ಭೇಟಿ ಮಾಡಲು ಯತ್ನಿಸಿದರು.

Indian Delegation
'Objectionable': ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಮನಾಥ್ ಕೋವಿಂದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಖರ್ಗೆ ಕ್ಷಮೆಯಾಚಿಸುವಂತೆ ಬಿಜೆಪಿ ಒತ್ತಾಯ

ಡೊನಾಲ್ಡ್ ಟ್ರಂಪ್‌ ಅವರ ಫ್ಲೊರಿಡಾ ನಗರದಲ್ಲಿರುವ ಖಾಸಗಿ ನಿವಾಸ ಮಾರ್‌ ಅ ಲಾಗೊ ಎಸ್ಟೇಟ್‌ ಗೆ ಸಂಸದ ತಮ್ಮಿಬ್ಬರ ಸ್ನೇಹಿತರೊಂದಿಗೆ ಹೊರಟು ನಿಂತರು. 1985 ರಿಂದ ಈ ನಿವಾಸದಲ್ಲಿ ಟ್ರಂಪ್‌ ವಾಸಿಸುತ್ತಿದ್ದಾರೆ. ಇದೇನೂ ಸಾಮಾನ್ಯ ನಿವಾಸ ಅಲ್ಲ, ಅರಮನೆಯನ್ನೂ ಮೀರಿಸುವ ಬಂಗಲೆ. 62,500 ಚ.ಅಡಿಯಲ್ಲಿ ವಿಸ್ತರಿಸಿರುವ ಈ ಬಂಗಲೆಯಲ್ಲಿ 126 ಕೊಠಡಿಗಳಿವೆ. 1994ರಲ್ಲಿ ಈ ಎಸ್ಟೇಟ್‌ ಅನ್ನು ಖಾಸಗಿ ಕ್ಲಬ್‌ ಆಗಿ ಪರಿವರ್ತಿಸಲಾಗಿದೆ. ಅಲ್ಲಿಗೆ ಹೋದ ಸಂಸದ ಟ್ರಂಪ್‌ ಬಳಿ ತನ್ನನ್ನು ಪರಿಚಯಿಸಿಕೊಳ್ಳುತ್ತಾ ಭಾರತ ಪ್ರಧಾನಿಯ ನಿಕಟವರ್ತಿ ಎಂದು ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್‌ ಈ ಭೇಟಿಯನ್ನು ನಿರಾಕರಿಸಿದ್ದು ಅತ್ಯಂತ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಸಂಸದ ಮುಜುಗರಕ್ಕೀಡಾಗಿದ್ದಾರೆ. ನಂತರ ಈ ವಿಷಯವನ್ನು ಭಾರತದ ಪ್ರಧಾನಮಂತ್ರಿ ಕಚೇರಿಗೆ ತಿಳಿಸಲಾಗಿದೆ. ನಂತರ ಪಿಎಂಒ ಕಚೇರಿಯಿಂದ ಸಂಸದನಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com