ಏಷ್ಯಾದ ಅತ್ಯಂತ ಹಿರಿಯ ಆನೆ 'ವತ್ಸಲಾ' ಇನ್ನಿಲ್ಲ: ಪನ್ನಾ ಹುಲಿ ಅಭಯಾರಣ್ಯದಲ್ಲಿ 'ದಾದಿ ಮಾ' ಗೆ ಕಣ್ಣೀರ ವಿದಾಯ!

ವತ್ಸಲಾಗೆ 100 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದು, ದೀರ್ಘಕಾಲದವರೆಗೆ ಪನ್ನಾ ಕಾಡಿನಲ್ಲಿಯೇ ವಾಸವಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Vathsala Elephant
ವತ್ಸಲಾ ಆನೆ
Updated on

ಮಧ್ಯಪ್ರದೇಶ: ಏಷ್ಯಾದ ಅತ್ಯಂತ ಹಿರಿಯ ಆನೆ ವತ್ಸಲಾ ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದೆ. ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದ ಹಿನೌಟಾ ಶ್ರೇಣಿಯಲ್ಲಿರುವ ಆನೆ ಶಿಬಿರದಲ್ಲಿ ಕೊನೆಯುಸಿರೆಳೆದಿದೆ.

ವತ್ಸಲಾಗೆ 100 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದು, ದೀರ್ಘಕಾಲದವರೆಗೆ ಪನ್ನಾ ಕಾಡಿನಲ್ಲಿಯೇ ವಾಸವಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವತ್ಸಲಾ ಅತ್ಯಂತ ಹಿರಿಯ ಮತ್ತು ಪ್ರೀತಿಯ ಆನೆಯಾಗಿತ್ತು.

ಇತ್ತೀಚಿನ ದಿನಗಳಲ್ಲಿ, ವತ್ಸಲಾಳ ಮುಂಭಾಗದ ಕಾಲ್ಬೆರಳ ಉಗುರುಗಳು ಗಾಯಗೊಂಡಿದ್ದವು. ಹಿನೌಟಾ ಪ್ರದೇಶದ ಖೈರೈಯಾನ್ ನಾಲಾ ಬಳಿ ಮಲಗಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಿಲ್ಲ. ಮಧ್ಯಾಹ್ನ 1.30 ರ ಸುಮಾರಿಗೆ ಮೃತಪಟ್ಟಿದೆ.

ಅರಣ್ಯ ಸಿಬ್ಬಂದಿ ಮತ್ತು ವನ್ಯಜೀವಿ ಪ್ರಿಯರು ಪ್ರೀತಿಯಿಂದ 'ದಾದಿ' ಮತ್ತು 'ದಾಯಿ ಮಾ' ಎಂದು ಕರೆಯುತ್ತಿದ್ದರು. ಶಿಬಿರದಲ್ಲಿ ಅವರ ಅಂತ್ಯಕ್ರಿಯೆಯನ್ನು ಗೌರವದಿಂದ ನಡೆಸಲಾಯಿತು

Vathsala Elephant
ದಕ್ಷಿಣ ರಾಜ್ಯಗಳಲ್ಲಿ ಆನೆ ಗಣತಿ: ಮುಂಚೂಣಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ

ಕೇರಳದಿಂದ ಮಧ್ಯಪ್ರದೇಶಕ್ಕೆ ತರಲಾಗಿತ್ತು 1971ರಲ್ಲಿ ಕೇರಳದ ನೀಲಂಬೂರು ಕಾಡಿನಿಂದ ವತ್ಸಲಾಳನ್ನು ಮಧ್ಯಪ್ರದೇಶಕ್ಕೆ ಕರೆತರಲಾಗಿತ್ತು. ಮೊದಲು ಅವಳನ್ನು ನರ್ಮದಾಪುರಂನಲ್ಲಿ ಇರಿಸಲಾಯಿತು ಮತ್ತು ನಂತರ ಪನ್ನಾ ಹುಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಯಿತು. ಖೈರೈಯಾನ್ ನಾಲಾದಲ್ಲಿ ಪ್ರತಿದಿನ ಅವಳಿಗೆ ಸ್ನಾನ ಮಾಡಿಸಿ ಗಂಜಿ ಮುಂತಾದ ಮೃದುವಾದ ಆಹಾರವನ್ನು ನೀಡಲಾಗುತ್ತಿತ್ತು. ವಯಸ್ಸಾಗಿದ್ದ ಕಾರಣ ತುಂಬಾ ದೂರ ನಡೆಯಲು ಸಾಧ್ಯವಾಗುತ್ತಿರಲಿಲ್ಲ.

ವತ್ಸಲಾವನ್ನು ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲಾಗಿತ್ತು. ಆಕೆಯ ಅಂತ್ಯಕ್ರಿಯೆಯನ್ನು ಪನ್ನಾ ಹುಲಿ ಅಭಯಾರಣ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿ ನೆರವೇರಿಸಿದರು. ವರ್ಷಗಳ ಕಾಲ, ವತ್ಸಲಾ ಪ್ರವಾಸಿ ಆಕರ್ಷಣೆಯಾಗಿತ್ತು ಮತ್ತು ಅತ್ಯಂತ ಹಿರಿಯಳಾಗಿದ್ದರಿಂದ, ಅವಳು ಅಭಯಾರಣ್ಯದಲ್ಲಿರುವ ಸಂಪೂರ್ಣ ಆನೆಗಳ ಗುಂಪನ್ನು ಮುನ್ನಡೆಸುತ್ತಿದ್ದಳು ಎಂದು ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com