
ವಡೋದರ: ಗುಜರಾತ್‌ನ ವಡೋದರಾದಲ್ಲಿ ಸಂಭವಿಸಿದ ಮೇಲ್ಸೇತುವೆ ಕುಸಿತ ದುರಂತ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಸೇತುವೆಯ ಶಿಥಿಲಾವಸ್ಥೆಯ ಕುರಿತು ವರದಿಗಾರರೊಬ್ಬರು ಮೂರು ತಿಂಗಳ ಮೊದಲೇ ಎಚ್ಚರಿಸಿದ್ದರು ಎನ್ನಲಾಗಿದೆ.
ಹೌದು.. ಗುಜರಾತ್ ನ ವಡೋದರಾದ ಆನಂದ್ ಮತ್ತು ವಡೋದರಾ ಪ್ರದೇಶಗಳನ್ನು ಸಂಪರ್ಕಿಸುವ ಗಂಭೀರ ಸೇತುವೆ ಕುಸಿದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದು, 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತದ ವೇಳೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಟ್ರಕ್, ಟ್ಯಾಂಕರ್ ಮತ್ತು ಕಾರುಗಳು ಸೇರಿದಂತೆ ಹಲವಾರು ವಾಹನಗಳು ನದಿಗೆ ಬಿದ್ದಿವೆ.
ಪ್ರಸ್ತುತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಗ್ರಾಮಸ್ಥರು, ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಐವರನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.
3 ತಿಂಗಳ ಮೊದಲೇ ಎಚ್ಚರಿಸಿದ್ದ ವರದಿಗಾರ
ಇನ್ನು ಈ ಸೇತುವೆ ಬಹಳ ಹಿಂದಿನಿಂದಲೂ ಶಿಥಿಲಾವಸ್ಥೆಯಲ್ಲಿದ್ದು ಅಪಾಯಕಾರಿಯಾಗಿತ್ತು. ಸ್ಥಳೀಯರು ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇದ್ದರು. ತುರ್ತು ದುರಸ್ತಿ ಮಾಡಬೇಕೆಂದು ಇಲ್ಲವೇ ಹೊಸದಾಗಿ ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದರು. ಇದೇ ವಿಚಾರವಾಗಿ ವರದಿಗಾರನೋರ್ವ ಈ ಬಗ್ಗೆ ವರದಿ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಕುರಿತ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲೇನಿದೆ?
ವರದಿಗಾರನ ಈ ವಿಡಿಯೋದಲ್ಲಿ ಮೇಲ್ಸೇತುವೆಯಲ್ಲಿ ಬಿರುಕು ಮತ್ತು ಕಾಂಕ್ರೀಟ್ ಗಳಲ್ಲಿನ ಬಿರುಕಿನ ಕುರಿತು ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಈ ಮೇಲ್ಸೇತುವೆ ಮೇಲೆ ಭಾರಿ ವಾಹನಗಳು ಚಲಿಸಿದರು ಸೇತುವ ನಡುಗಿದಂತೆ ಭಾಸವಾಗುತ್ತದೆ. ಅಲ್ಲದೆ ಸೇತುವೆಯಲ್ಲಿನ ಜಾಯಿಂಟ್ ಗಳು ಬಿರುಕು ಬಿಟ್ಟಿರುವುದು ಸ್ಪಷ್ಟವಾಗಿದೆ.
Advertisement