ಆಂಟಿ ಜೊತೆ ಅಕ್ರಮ ಸಂಬಂಧ: ಯುವಕನಿಗೆ ಹಿಗ್ಗಾಮುಗ್ಗ ಥಳಿತ, ಸ್ಥಳದಲ್ಲೇ ಮದುವೆ! Video

ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ ಯುವಕ ತನ್ನ ಆಂಟಿ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎಂದು ಆರೋಪಿಸಿ ಮನಸೋ ಇಚ್ಛೆ ಥಳಿಸಲಾಗಿದೆ.
Man Brutally Thrashed, Forced To Marry Aunt Over Affair
ಅಕ್ರಮ ಸಂಬಂಧ ಆರೋಪ, ಯುವಕನ ಮೇಲೆ ಹಲ್ಲೆ
Updated on

ಪಾಟ್ನಾ: ಗಂಡ ಇಲ್ಲದಿರುವಾಗ ಆಂಟಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಹಿಡಿದ ಸ್ಥಳೀಯರು ಆತನಿಗೆ ಥಳಿಸಿ ಸ್ಥಳದಲ್ಲೇ ಆಂಟಿ ಜೊತೆ ಮದುವೆ ಮಾಡಿದ್ದಾರೆ.

ಹೌದು.. ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ ಯುವಕ ತನ್ನ ಆಂಟಿ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎಂದು ಆರೋಪಿಸಿ ಮನಸೋ ಇಚ್ಛೆ ಥಳಿಸಲಾಗಿದೆ. ಅಲ್ಲದೆ ಬಲವಂತವಾಗಿ ಆಂಟಿ ಜೊತೆ ಆತನಿಗೆ ಮದುವೆ ಮಾಡಲಾಗಿದೆ.

ಜುಲೈ 2 ರಂದು ಈ ಘಟನೆ ನಡೆದಿದ್ದು, ಭೀಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೀವ್‌ಚಾಪುರ ವಾರ್ಡ್ ಸಂಖ್ಯೆ 8 ರಲ್ಲಿ ಮಿಥಲೇಶ್ ಕುಮಾರ್ ಮಖಿಯಾ ಎಂಬ ಯುವಕನನ್ನು ಅಪಹರಿಸಿದ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ಮಾಡಿ ಬಳಿಕ ಆತನನ್ನು ಆತನ ಚಿಕ್ಕಪ್ಪ ಶಿವಚಂದ್ರ ಮುಖಿಯಾ ಅವರಿಗೆ ಸೇರಿದ ಮನೆಗೆ ಕರೆದೊಯ್ಯಿದ್ದಾರೆ.

ಅಲ್ಲಿ ಮಿಥಲೇಶ್ ಕುಮಾರ್ ಮಖಿಯಾ ಮೇಲೆ ಹಲ್ಲೆ ಮಾಡಿ ಆತ ತನ್ನ ಚಿಕ್ಕಪ್ಪ ಶಿವಚಂದ್ರ ಅವರ ಪತ್ನಿ ರೀಟಾ ದೇವಿ ಅವರೊಂದಿಗೆ ಸಂಬಂಧ ಹೊಂದಿರುವ ಕುರಿತು ತಪ್ಪೊಪ್ಪಿಗೆ ಹೇಳಿಕೆ ನೀಡಿದ ಬಳಿಕ ಮಿಥಲೇಶ್ ಕುಮಾರ್ ಮತ್ತು ರೀಟಾದೇವಿಗೆ ಸ್ಥಳದಲ್ಲೇ ಮದುವೆ ಮಾಡಲಾಗಿದೆ.

ಅಂದಹಾಗೆ ಶಿವಚಂದ್ರ ಮತ್ತು ರೀಟಾ ದೇನವಿ ದಂಪತಿಗೆ ಈಗಾಗಲೇ ನಾಲ್ಕು ವರ್ಷದ ಮಗನಿದ್ದಾನೆ. ಹೀಗಿದ್ದೂ ರೀಟಾ ದೇವಿ ಜೊತೆ ಮಿಥಿಲೇಶ್ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ.

ಇನ್ನು ಹಲ್ಲೆ ವೇಳೆ ರೀಟಾ ಮತ್ತು ಮಿಥಿಲೇಶ್ ತಂದೆ ರಾಮಚಂದ್ರ ಅವರು ತಡೆಯಲೆತ್ನಿಸಿದ್ದು. ಅವರ್ ಮೇಲೆಯೂ ಕೂಡ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

Man Brutally Thrashed, Forced To Marry Aunt Over Affair
65 ವರ್ಷದ ಅಜ್ಜಿಯ ಮೇಲೆ 25 ವರ್ಷದ ಮೊಮ್ಮಗನಿಂದಲೇ ಅತ್ಯಾಚಾರ; ಆರೋಪಿ ಬಂಧನ

ದೂರು ದಾಖಲು

ಇನ್ನು ಗ್ರಾಮಸ್ಥರ ಈ ಪುಂಡಾಟಿಕೆ ವಿರುದ್ಧ ಮಿಥಲೇಶ್ ಕುಮಾರ್ ಮಖಿಯಾ ತಂದೆ ರಾಮಚಂದ್ರ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ರೀಟಾ ಜೊತೆ ನನ್ನ ಮಗ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಮೇರೆಗೆ ಗುಂಪು ತನ್ನ ಮಗನನ್ನು ಥಳಿಸಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಜೀವ್‌ಛಾಪುರದ ನಿವಾಸಿಗಳಾದ ರಾಜ ಕುಮಾರ್, ವಿಕಾಸ್ ಮುಖಿಯಾ, ಶಿವಚಂದ್ರ ಮುಖಿಯಾ, ಸೂರಜ್ ಮುಖಿಯಾ, ಪ್ರದೀಪ್ ಠಾಕೂರ್, ಸುರೇಶ್ ಮುಖಿಯಾ ಮತ್ತು ಭೀಮ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಂಜ್ ನಿವಾಸಿಗಳಾದ ರಾಹುಲ್ ಕುಮಾರ್ ಮತ್ತು ಸಜನ್ ಸಾಹ್ನಿ ಅವರು ತಮ್ಮ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಮಚಂದ್ರ ಹೇಳಿದ್ದು, ಹಲ್ಲೆಯಲ್ಲಿ ಅವರ ಮಗನ ಬೆನ್ನು, ಕುತ್ತಿಗೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ತಂದೆ ರಾಮಚಂದ್ರ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಭೀಮ್‌ಪುರ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮಿಥ್‌ಲೇಶ್ ಪಾಂಡೆ ತಿಳಿಸಿದ್ದಾರೆ.

ಆರಂಭದಲ್ಲಿ ಮಿಥ್‌ಲೇಶ್ ಅವರನ್ನು ನರಪತ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ನಂತರ ಗಂಭೀರ ಸ್ಥಿತಿಯಲ್ಲಿ ಅರಾರಿಯಾ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com