
ಹೈದರಾಬಾದ್: ಫೋರ್ಜರಿ, ಸನ್ ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಗೆ ಬೆದರಿಕೆ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಎ.ಜಗನ್ ಮೋಹನ್ ರಾವ್ A-1 ಆರೋಪಿಯಾಗಿದ್ದು, ಇತರ ಐವರನ್ನು ಬಂಧಿಸಲಾಗಿದೆ.
ವಂಚನೆ ಉದ್ದೇಶದಿಂದ ದಾಖಲೆಗಳ ಪೋರ್ಜರಿ ಮತ್ತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನ ಆರೋಪಿತ ಪದಾಧಿಕಾರಿಗಳಿಂದ ನಂಬಿಕೆಯ ಉಲ್ಲಂಘನೆಯೊಂದಿಗೆ ಹಣ ದುರುಪಯೋಗದ ಪ್ರಕರಣ ಇದಾಗಿದೆ ಎಂದು ಗುರುವಾರ ಸಿಐಡಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಂಬಂಧ ಹೈದರಾಬಾದ್‌ನ ತೆಲಂಗಾಣ ಕ್ರಿಕೆಟ್ ಸಂಸ್ಥೆ (TCA) ಪ್ರಧಾನ ಕಾರ್ಯದರ್ಶಿ ಧರಂ ಗುರುವಾ ರೆಡ್ಡಿ ಅವರು ಫೆಬ್ರವರಿ 2025ರಲ್ಲಿ IPC ಸೆಕ್ಷನ್ 465, 468, 471, 403, 409, 420 ಆರ್/ಡಬ್ಲ್ಯು 34 ಐಪಿಸಿ ಅಡಿಯಲ್ಲಿ ದಾಖಲಿಸಿದ ದೂರಿನ ಆಧಾರದ ಮೇಲೆ ಜೂನ್ 9, 2025 ರಂದು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.
ಸಿಐಡಿ ಅಧಿಕಾರಿಗಳು ಸಂಗ್ರಹಿಸಿದ ತನಿಖೆ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿ ಎ ಜಗನ್ ಮೋಹನ್ ರಾವ್ ಅವರು ಸಿ ರಾಜೇಂದರ್ ಯಾದವ್ ಮತ್ತು ಅವರ ಪತ್ನಿ ಜಿ ಕವಿತಾ ಅವರೊಂದಿಗೆ ಶಾಮೀಲಾಗಿ ಗೌಳಿಪುರ ಕ್ರಿಕೆಟ್ ಕ್ಲಬ್ ಅಧ್ಯಕ್ಷರ ನಕಲಿ ಸಹಿ ಪಡೆದು ಶ್ರೀ ಚಕ್ರ ಕ್ರಿಕೆಟ್ ಕ್ಲಬ್‌ನ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ
ಸಿಐಡಿ ಅಧಿಕಾರಿಗಳು ನಡೆಸಿದ ತನಿಖೆ ಮತ್ತು ಸಂಗ್ರಹಿಸಿದ ಸಾಕ್ಷ್ಯದಲ್ಲಿ ಇದು ಬಹಿರಂಗವಾಗಿದೆ ಎಂದು ಸಿಐಡಿ ಹೇಳಿಕೆಯಲ್ಲಿ ತಿಳಿಸಿದೆ. ಈ ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಲಾಗಿದ್ದು, ಜಗನ್ ಮೋಹನ್ ರಾವ್ ಅವರು ಅಕ್ರಮವಾಗಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥನ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಜಗನ್ ಮೋಹನ್ ರಾವ್, ಖಜಾಂಚಿ ಸಿಜೆ ಶ್ರೀನಿವಾಸ್ ರಾವ್ ಮತ್ತು HCA ಸಿಇಒ ಸುನೀಲ್ ಕಾಂಟೆ ಮತ್ತಿತರರೊಂದಿಗೆ ಕಾಂಪ್ಲಿಮೆಂಟರಿ ಟಿಕೆಟ್ ವಿಚಾರವಾಗಿ ಬೆದರಿಕೆ ಹೇಳಿಕೆ, ಕಾರ್ಪೋರೇಟ್ ಬಾಕ್ಸ್ ಗಳಿಗೆ ಪ್ರವೇಶ ಮತ್ತು ಬೆದರಿಕೆ ಆರೋಪ ಸೇರಿದಂತೆ ದುರುದ್ದೇಶ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯಿಂದ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಿಐಡಿ ಹೇಳಿದೆ.
ಆರೋಪಿಗಳಾದ ಎ ಜಗನ್ ಮೋಹನ್ ರಾವ್ (ಎಚ್‌ಸಿಎ ಅಧ್ಯಕ್ಷ), ಜೆಎಸ್ ಶ್ರೀನಿವಾಸ ರಾವ್ (ಎಚ್‌ಸಿಎ ಖಜಾಂಚಿ), ಸುನೀಲ್ ಕಾಂಟೆ (CEO HCA) ರಾಜೇಂದ್ರ ಯಾದವ್ (ಶ್ರೀ ಚಕ್ರ ಕ್ರಿಕೆಟ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ) ಜಿ ಕವಿತಾ (ಶ್ರೀ ಚಕ್ರ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷೆ) ಅವರನ್ನು ಬುಧವಾರ ಸಿಐಡಿ ಬಂಧಿಸಿದೆ.
ಈ ಹಿಂದೆ ಆರೋಪಗಳ ಬಗ್ಗೆ ತನಿಖೆ ನಡೆಸಿದ CID 2025 ರ ಐಪಿಎಲ್ ನಲ್ಲಿ ಟಿಕೆಟ್ ಹಂಚಿಕೆಯಲ್ಲಿನ ಅಕ್ರಮಗಳ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು.
Advertisement