ದೆಹಲಿಯಲ್ಲಿ ಬಿಜೆಪಿಯಿಂದ ಬಂಗಾಳಿಗಳ ಟಾರ್ಗೆಟ್; 'ಬಾಂಗ್ಲಾ ವಿರೋಧಿ ಕಾರ್ಯಸೂಚಿ'

ರಾಷ್ಟ್ರ ರಾಜಧಾನಿಯ ವಸಂತ್ ಕುಂಜ್ ಪ್ರದೇಶದಲ್ಲಿ ಬಂಗಾಳಿ ನಿವಾಸಿಗಳಿಗೆ ಕಿರುಕುಳ ಮತ್ತು ಬಲವಂತದ ಹೊರಹಾಕುವಿಕೆಯ ವರದಿಗಳಿಂದ ನಾನು "ತೀವ್ರ ವಿಚಲಿತಳಾಗಿದ್ದೇನೆ".
Mamata Banerjee
ಮಮತಾ ಬ್ಯಾನರ್ಜಿ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೆಹಲಿಯ ಜೈ ಹಿಂದ್ ಕಾಲೋನಿಯಲ್ಲಿರುವ ಬಂಗಾಳಿ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ರಾಜ್ಯದ ಗಡಿಯಾಚೆಗೆ ತನ್ನ ಬಂಗಾಳಿ ವಿರೋಧಿ ಕಾರ್ಯಸೂಚಿಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ವಸಂತ್ ಕುಂಜ್ ಪ್ರದೇಶದಲ್ಲಿ ಬಂಗಾಳಿ ನಿವಾಸಿಗಳಿಗೆ ಕಿರುಕುಳ ಮತ್ತು ಬಲವಂತದ ಹೊರಹಾಕುವಿಕೆಯ ವರದಿಗಳಿಂದ ನಾನು "ತೀವ್ರ ವಿಚಲಿತಳಾಗಿದ್ದೇನೆ" ಎಂದು ಮಮತಾ ಬ್ಯಾನರ್ಜಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ದೆಹಲಿ ಸರ್ಕಾರ, ಬಂಗಾಳಿಗಳನ್ನು ಸ್ಥಳಾಂತರಿಸುವ ಪ್ರಯತ್ನದಲ್ಲಿ ನೀರು ಮತ್ತು ವಿದ್ಯುತ್‌ನಂತಹ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಿದೆ ಎಂದು ದೀದಿ ಆರೋಪಿಸಿದ್ದಾರೆ.

"ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ಜೈ ಹಿಂದ್ ಕಾಲೋನಿಯಿಂದ ಹೊರಹೊಮ್ಮುತ್ತಿರುವ ಕಿರುಕುಳದ ಆತಂಕಕಾರಿ ಸುದ್ದಿಯಿಂದ ನಾನು ತೀವ್ರ ವಿಚಲಿತಳಾಗಿದ್ದೇನೆ. ಇದು ಪ್ರಮುಖವಾಗಿ ಬಂಗಾಳಿಗಳು ವಾಸಿಸುವ ವಸಾಹತು, ಅವರು ನಗರವನ್ನು ತಮ್ಮ ಅಸಂಘಟಿತ ಕಾರ್ಯಪಡೆಯ ಭಾಗವಾಗಿ ನಿರ್ಮಿಸಿದ್ದಾರೆ" ಎಂದು ಟಿಎಂಸಿ ಮುಖ್ಯಸ್ಥೆ ಹೇಳಿದ್ದಾರೆ.

Mamata Banerjee
ಬಂಗಾಳ ನಿವಾಸಿಗಳನ್ನು ಗುರಿಯಾಗಿಸಿಕೊಂಡು ಅಸ್ಸಾಂ ಸರ್ಕಾರ NRC ಬಳಸುತ್ತಿದೆ: ವಿಪಕ್ಷಗಳು ಒಟ್ಟಾಗುವಂತೆ ಮಮತಾ ಬ್ಯಾನರ್ಜಿ ಕರೆ

"ಬಿಜೆಪಿ ನೇತೃತ್ವದ ಸರ್ಕಾರದ ಆದೇಶದ ಮೇರೆಗೆ ನೀರು ಸರಬರಾಜು ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ವಿದ್ಯುತ್ ಮೀಟರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು ಹಠಾತ್ತನೆ ವಿದ್ಯುತ್ ಕಡಿತಗೊಳಿಸಲಾಯಿತು. ಆರ್‌ಎಎಫ್ ಸಿಬ್ಬಂದಿಯ ಬೆಂಬಲದೊಂದಿಗೆ ದೆಹಲಿ ಪೊಲೀಸರು, ತಾವೇ ವ್ಯವಸ್ಥೆ ಮಾಡಿಕೊಂಡಿದ್ದ ಮತ್ತು ಹಣ ಪಾವತಿಸಿದ್ದ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಸಹ ತಡೆದಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸ್ಥಳಾಂತರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದರೂ, ಬಲವಂತದ ಹೊರಹಾಕುವಿಕೆ ನಡೆಯುತ್ತಿದೆ. ಆಶ್ರಯ, ನೀರು, ವಿದ್ಯುತ್‌ನಂತಹ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದ್ದರೆ ನಾವು ಪ್ರಜಾಪ್ರಭುತ್ವ ಗಣರಾಜ್ಯ ಎಂದು ಹೇಗೆ ಹೇಳಿಕೊಳ್ಳಬೇಕು?" ಪಶ್ಚಿಮ ಬಂಗಾಳ ಸಿಎಂ ಪ್ರಶ್ನಿಸಿದ್ದಾರೆ.

ಇಂತಹ ಕ್ರಮಗಳು ಬಂಗಾಳಿ ಮಾತನಾಡುವ ಭಾರತೀಯರ ಗುರುತು ಮತ್ತು ಭಾಷೆಯನ್ನು ಅಪರಾಧೀಕರಿಸಿದಂತೆ ಎಂದು ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ ಮತ್ತು ಬಿಜೆಪಿ ಅವರನ್ನು "ತಮ್ಮ ಸ್ವಂತ ದೇಶದಲ್ಲಿ ನುಸುಳುಕೋರರಂತೆ" ನಡೆಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com