ಇಂದಿರಾ 'ತುರ್ತು ಪರಿಸ್ಥಿತಿ' ಬಗ್ಗೆ ಲೇಖನ: ಮತ್ತೆ ಬಿಜೆಪಿ ಮಾತುಗಳು; ತರೂರ್ ವಿರುದ್ಧ ಕಾಂಗ್ರೆಸ್ ಸಂಸದ ಗುಡುಗು!

ಶಶಿ ತರೂರ್ ಅವರ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಬಿಜೆಪಿ ತುರ್ತು ಪರಿಸ್ಥಿತಿಯನ್ನು ಆಗಾಗ್ಗೆ ಬಳಸುವ ಮೂಲಕ ಕಾಂಗ್ರೆಸ್ ವಿರುದ್ಧ ದಾಳಿ ನಡೆಸುತ್ತಾ ಬಂದಿದೆ.
Shashi Tharoor and Congress MP Manickam Tagore
ಶಶಿ ತರೂರ್, ಸಂಸದ ಮಾಣಿಕಂ ಟ್ಯಾಗೋರ್
Updated on

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಇತ್ತೀಚಿನ ಬಹಿರಂಗ ಟೀಕೆಗಳು, ತುರ್ತು ಪರಿಸ್ಥಿತಿಯ ಬಗ್ಗೆ ಅವರ ವಿಮರ್ಶಾತ್ಮಕ ಲೇಖನ ಮತ್ತು ಭಾರತದ ರಾಜತಾಂತ್ರಿಕ ಕಾರ್ಯತಂತ್ರದ ಕುರಿತು ಅವರ ಅಭಿಪ್ರಾಯಗಳಿಗೆ ಪಕ್ಷದೊಳಗೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಆಂತರಿಕ ಭಿನ್ನಾಭಿಪ್ರಾಯ ಸೂಚಿಸುತ್ತಿದೆ.

ಮಲಯಾಳಂ ದಿನಪತ್ರಿಕೆ ದೀಪಿಕಾದಲ್ಲಿ ಪ್ರಕಟವಾದ ಇತ್ತೀಚಿನ ಅವರ ಲೇಖನವು ವೈರಲ್ ಆಗಿದ್ದು, ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ "ಕರಾಳ ಯುಗ" ಎಂದು ತರೂರ್ ಬಣ್ಣಿಸಿದ್ದಾರೆ ಆ ಸಮಯದಲ್ಲಿ ನಡೆದ "ಸಹಿಸಲಾಗದ ದೌರ್ಜನ್ಯಗಳು" ಎಂದು ಕರೆದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್ 25ರಿಂದ 1977ರ ಮಾರ್ಚ್‌ 21ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಕರಾಳ ಯುಗ. ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೈಗೊಂಡ ಪ್ರಯತ್ನಗಳು ಕ್ರೌರ್ಯದ ರೂಪ ತಾಳಿತು. ಹಾಗೆಂದು ಆ ಕ್ರಮವನ್ನು ಸಮರ್ಥಿಸಲಾಗದು ಎಂದು ಅವರು ಹೇಳಿದ್ದಾರೆ.

‘ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು ಈ ಅವಧಿಯ ಕುಕೃತ್ಯಕ್ಕೆ ಒಂದು ಉದಾಹರಣೆ. ಸಂಜಯ್‌ ಇಟ್ಟ ಅನಿಯಂತ್ರಿತ ಗುರಿಯನ್ನು ತಲುಪಲು ಬಡ ಗ್ರಾಮೀಣ ಭಾಗದಲ್ಲಿ ಹಿಂಸೆ ಮತ್ತು ಬಲವಂತದಿಂದ ಸಂತಾನಹರಣ ಮಾಡಿಸಲಾಗುತ್ತಿತ್ತು. ನವದೆಹಲಿ ಹಾಗೂ ಇನ್ನಿತರ ನಗರಗಳ ಕೊಳಗೇರಿಗಳನ್ನು ಕರುಣೆಯೇ ಇಲ್ಲದೆ ನೆಲಸಮಗೊಳಿಸಲಾಯಿತು. ಸಾವಿರಾರು ಜನರು ನಿರ್ವಸತಿಗರಾದರು. ಅವರ ಯೋಗಕ್ಷೇಮವನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ತರೂರ್ ಹೇಳಿದ್ದಾರೆ.

Shashi Tharoor and Congress MP Manickam Tagore
ಇಂದಿರಾ 'ತುರ್ತು ಪರಿಸ್ಥಿತಿ' ವೇಳೆ ಸಂಜಯ್ ಗಾಂಧಿ 'ಕುಕೃತ್ಯ' ಬಗ್ಗೆ ತರೂರ್ ಲೇಖನ: ಕಾಂಗ್ರೆಸ್ ನಲ್ಲಿ ತಲ್ಲಣ

ಶಶಿ ತರೂರ್ ಅವರ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಬಿಜೆಪಿ ತುರ್ತು ಪರಿಸ್ಥಿತಿಯನ್ನು ಆಗಾಗ್ಗೆ ಬಳಸುವ ಮೂಲಕ ಕಾಂಗ್ರೆಸ್ ವಿರುದ್ಧ ದಾಳಿ ನಡೆಸುತ್ತಾ ಬಂದಿದೆ. ಇದೇ ರೀತಿಯ ಇದೀಗ ಶಶಿ ತರೂರ್ ಅವರ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಪಕ್ಷ ಔಪಚಾರಿಕವಾಗಿ ಖಂಡಿಸದಿದ್ದರೂ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪರೋಕ್ಷವಾಗಿ ತರೂರ್ ಗೆ ಪ್ರತಿಕ್ರಿಯಿಸಿದ್ದಾರೆ.

ಸಹೋದ್ಯೋಗಿಯೊಬ್ಬರು ಬಿಜೆಪಿಯ ಮಾತುಗಳನ್ನು ಪುನರಾವರ್ತಿಸಲು ಪ್ರಾರಂಭಿಸಿದಾಗ ಹಕ್ಕಿ ಗಿಳಿಯಾಗುತ್ತಿದೆಯೇ? ಎಂದು ನಿಮಗೆ ಆಶ್ಚರ್ಯವಾಗಿತ್ತು. ಹಕ್ಕಿಗಳಲ್ಲಿ ಮಿಮಿಕ್ರಿ ಕ್ಯೂಟ್ ಆಗಿರುತ್ತದೆ ಹೊರತು ರಾಜಕೀಯದಲ್ಲಿ ಅಲ್ಲ ಎಂದಿದ್ದಾರೆ. ಫೋಸ್ಟ್ ನಲ್ಲಿ ತರೂರ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರ ತುರ್ತುಪರಿಸ್ಥಿತಿ ಲೇಖನ ಪ್ರಕಟವಾಗುತ್ತಿದ್ದಂತೆಯೇ ಟ್ಯಾಗೋರ್ ಈ ರೀತಿಯ ಫೋಸ್ಟ್ ಮಾಡಿದ್ದಾರೆ. ತಿರುವನಂತಪುರಂ ಸಂಸದರ ನಿಲುವಿನ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.

ಕಳೆದ ತಿಂಗಳು ಕೂಡಾ ಇದೇ ರೀತಿಯ ಫೋಸ್ಟ್ ವಾರ್ ನಡೆದಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ನಮಗೆ ದೇಶ ಮೊದಲು, ಆದರೆ ಕೆಲವರಿಗೆ ಮೋದಿಯೇ ಮೊದಲು” ಎಂದು ತರೂರ್ ಅವರನ್ನು ಟೀಕಿಸಿದ ಒಂದು ದಿನದ ನಂತರ, ತಿರುವನಂತಪುರಂ ಸಂಸದ ಸಾಮಾಜಿಕ ಮಾಧ್ಯಮದಲ್ಲಿ ಹಾರುತ್ತಿರುವ ಹಕ್ಕಿಯ ಫೋಟೋವನ್ನು ಹಂಚಿಕೊಂಡು, 'ರೆಕ್ಕೆ ನಿಮ್ಮದು, ಹಾರಲು ಯಾರ ಅನುಮತಿಯೂ ಬೇಕಾಗಿಲ್ಲ. ಆಕಾಶ ಯಾರದ್ದೂ ಅಲ್ಲ' ಎಂದು ಬರೆದಿದ್ದರು.

ಈಗ ಶಶಿ ತರೂರ್ ಪೋಸ್ಟ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು, "ಹಾರಲು ಅನುಮತಿ ಕೇಳಬೇಡಿ. ಪಕ್ಷಿಗಳು ಮೇಲೆ ಹಾರಲು ಅನುಮತಿ ಅಗತ್ಯವಿಲ್ಲ ನಿಜ. ಆದರೆ ಇಂದು, ಸ್ವತಂತ್ರ ಹಕ್ಕಿ ಕೂಡ ಆಕಾಶದಲ್ಲಿ ಹಾರಬೇಕಾದರೆ ಹುಷಾರಾಗಿರಬೇಕು. ಏಕೆಂದರೆ, ಗಿಡುಗಗಳು, ರಣಹದ್ದುಗಳು ಮತ್ತು ‘ಹದ್ದುಗಳು’ ಯಾವಾಗಲೂ ಬೇಟೆಯಾಡುತ್ತಲೇ ಇರುತ್ತವೆ. ಸ್ವಾತಂತ್ರ್ಯವು ಎಲ್ಲರಿಗೂ ಮುಕ್ತವಲ್ಲ. ವಿಶೇಷವಾಗಿ ಪರಭಕ್ಷಕಗಳು ದೇಶಭಕ್ತಿಯನ್ನು ಗರಿಗಳಾಗಿ ಧರಿಸಿದಾಗ ಸ್ವಾತಂತ್ರ್ಯ ಮುಕ್ತವಲ್ಲ ಎಂದು ಎಚ್ಚರಿಸಿದ್ದರು. ಟಾಗೋರ್ ಅವರ ಪೋಸ್ಟ್‌ನಲ್ಲಿ ಪರಭಕ್ಷಕ ಪಕ್ಷಿಗಳ ಚಿತ್ರಗಳೂ ಇವೆ. ಇದು ಪಕ್ಷದೊಳಗಿನ ಆಂತರಿಕ ಉದ್ವಿಗ್ನತೆಯನ್ನು ಸೂಚಿಸುತಿತ್ತು.

ಇತ್ತೀಚಿನ ದಿನಗಳಲ್ಲಿ ಶಶಿ ತರೂರ್ ಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನ ಹೆಚ್ಚಾಗುತ್ತಿದೆ. ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಅವರ ಹೇಳಿಕೆಗಳು ಮತ್ತು ಆಪರೇಷನ್ ಸಿಂಧೂರ್‌ನಲ್ಲಿ ಸರ್ಕಾರದ ನಿಲುವನ್ನು ಜಗತ್ತಿಗೆ ಸಾರಲು ಅಮೆರಿಕಕ್ಕೆ ತೆರಳಿದ ಸರ್ವ ಪಕ್ಷ ನಿಯೋಗದ ನಾಯಕತ್ವ ವಹಿಸಿಕೊಂಡದ್ದು ಕೂಡಾ ಪಕ್ಷಕ್ಕೆ ವಿರುದ್ಧವಾಗಿತ್ತು. ಈ ನಡೆಗಳು ಪಕ್ಷದ ಒಳಗಿನವರಿಂದ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿತ್ತು.

ಆದರೆ ತರೂರ್ ಅವರ ಹೇಳಿಕೆಗಳು ಅವರ ವೈಯಕ್ತಿಕವಾಗಿದ್ದು, ಕಾಂಗ್ರೆಸ್ ನ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಪದೇ ಪದೇ ಒತ್ತಿ ಹೇಳಿದ್ದರು.

Shashi Tharoor and Congress MP Manickam Tagore
ಸ್ವತಂತ್ರ ಹಕ್ಕಿಯೂ ಹುಷಾರಾಗಿರಬೇಕು: ಶಶಿ ತರೂರ್ ಪೋಸ್ಟ್‌ಗೆ ಕಾಂಗ್ರೆಸ್ ತಿರುಗೇಟು

ಕಾಂಗ್ರೆಸ್ ನಾಯಕರು ತರೂರ್ ವಿರುದ್ಧ ನೇರವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಿದ್ದಾರೆ. ಆದರೆ, ಆದರೆ ಪದೇ ಪದೇ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿರುವುದು ಪಕ್ಷದ ಅಸಮಾಧಾನವನ್ನು ಸ್ಪಷ್ಟವಾಗಿ ತೋರಿಸಿದೆ.

ತಮ್ಮ ಬರಹಗಳು ಐತಿಹಾಸಿಕ ಆತ್ಮಾವಲೋಕನವನ್ನು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ ಎಂದು ತರೂರ್ ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ಸೂಕ್ಷ್ಮ ವಿಷಯಗಳ ಬಗ್ಗೆ ಅವರ ಬಹಿರಂಗ ಹೇಳಿಕೆಗಳು ಭಿನ್ನವಾಗಿರುವುದರಿಂದ ಅವರ ಸ್ವತಂತ್ರ ನಿಲುವು ಮತ್ತು ಕಾಂಗ್ರೆಸ್‌ನ ಸಾಮೂಹಿಕ ನಿಲುವಿನ ನಡುವಿನ ಅಂತರ ಹೆಚ್ಚಾಗಿರುವಂತೆ ತೋರಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com