IAF: ವಾಯುಸೇನೆಗೆ ಮತ್ತೊಂದು Astra ಸೇರ್ಪಡೆ; DRDO ಪರೀಕ್ಷೆ ಯಶಸ್ವಿ

100 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಅಸ್ಟ್ರಾ ಬಿವಿಆರೆಎಂ ಸುಧಾರಿತ ಮಾರ್ಗದರ್ಶನ ಮತ್ತು ನ್ಯಾವಿಗೇಷನ್ ವ್ಯವಸ್ಥೆಗಳನ್ನು ಹೊಂದಿದೆ.
Astra BVR AAM With Indigenous RF Seeker
ಅಸ್ತ್ರ ಕ್ಷಿಪಣಿ ಉಡಾವಣೆ
Updated on

ಭುವನೇಶ್ವರ್: ಭಾರತೀಯ ವಾಯುಸೇನೆಗೆ ಮತ್ತೊಂದು ವಿಧ್ವಂಸಕ 'ಅಸ್ತ್ರ' ಸೇರ್ಪಡೆಯಾಗಿದ್ದು, DRDO ಅಭಿವೃದ್ಧಿ ಪಡಿಸಿರುವ ಏರ್-ಟು-ಏರ್ ಕ್ಷಿಪಣಿ `ಅಸ್ಟ್ರಾ’ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಹೌದು.. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ವಾಯುಪಡೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೋ ಫ್ರೀಕ್ವೆನ್ಸಿ ಸೀಕರ್ ಹೊಂದಿರುವ ದೇಶೀಯ ಬಿಯಾಂಡ್ ವಿಷುಯಲ್ ರೇಂಜ್ (ವೀಕ್ಷಣಾ ವ್ಯಾಪ್ತಿಯನ್ನು ಮೀರಿ) ಏರ್-ಟು-ಏರ್ ಕ್ಷಿಪಣಿ `ಅಸ್ಟ್ರಾ’ ಕ್ಷಿಪಣಿಯ ಹಾರಾಟ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ.

ಒಡಿಶಾ ಕರಾವಳಿಯಲ್ಲಿ ಭಾರತೀಯ ವಾಯುಪಡೆಯ ಸುಖೋಯ್ 30 ಎಂಕೆ1 ಯುದ್ಧ ವಿಮಾನದ ಮೂಲಕ ಈ ಪರೀಕ್ಷೆ ನಡೆಸಲಾಗಿದ್ದು ಪ್ರಾಯೋಗಿಕ ಪರೀಕ್ಷೆ ಯಶಸ್ಸು ಕಂಡಿದೆ, 100 ಕಿ.ಮೀ ವ್ಯಾಪ್ತಿಯಲ್ಲಿ `ಅಸ್ತ್ರ’ ಏರ್-ಟು-ಏರ್ ಕ್ಷಿಪಣಿ ಹಾರಾಟ ಯಶಸ್ವಿಯಾಗಿದೆ.

ವಿವಿಧ ವ್ಯಾಪ್ತಿ, ಗುರಿ ಕೋನಗಳು ಮತ್ತು ಪರಿಸ್ಥಿತಿಗಳಲ್ಲಿ ಹೈಸ್ಪೀಡ್ ಮಾನವರಹಿತ ವೈಮಾನಿಕ ಗುರಿಗಳ ವಿರುದ್ಧ ಪರೀಕ್ಷೆಯ ಸಮಯದಲ್ಲಿ ಎರಡು ಕ್ಷಿಪಣಿ ಉಡಾವಣೆಗಳನ್ನು ನಡೆಸಲಾಯಿತು. ಎರಡೂ ಸಂದರ್ಭಗಳಲ್ಲಿ, ಅಸ್ಟ್ರಾ ಕ್ಷಿಪಣಿಗಳು ತಮ್ಮ ಗುರಿಗಳನ್ನು ಹೆಚ್ಚಿನ ನಿಖರತೆಯಿಂದ ನಾಶಪಡಿಸಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

Astra BVR AAM With Indigenous RF Seeker
Air India ಅಪಘಾತಕ್ಕೆ ಉದ್ದೇಶಪೂರ್ವಕ ಮಾನವ ಹಸ್ತಕ್ಷೇಪ ಕಾರಣ: ತಜ್ಞರು

ರಕ್ಷಣಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

ಈ ಪರೀಕ್ಷೆ ದೇಶೀಯ ರಕ್ಷಣಾ ಸಾಮರ್ಥ್ಯಗಳಿಗೆ ಮಹತ್ವದ ಮೈಲಿಗಲ್ಲಾಗಿದ್ದು, ಶತ್ರು ಗುರಿಗಳನ್ನು ಪತ್ತೆಹಚ್ಚಲು ಮತ್ತು ತೊಡಗಿಸಿಕೊಳ್ಳಲು ನಿರ್ಣಾಯಕವಾದ ಆರ್ ಎಫ್ (Radio frequency) ಸೀಕರ್ ಅನ್ನು ಸಂಪೂರ್ಣವಾಗಿ ಡಿಆರ್ ಡಿಒ ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಯೋಜಿಸಿದ ರೇಂಜ್ ಟ್ರ್ಯಾಕಿಂಗ್ ಉಪಕರಣಗಳ ಡೇಟಾವನ್ನು ಬಳಸಿಕೊಂಡು ಅಸ್ಟ್ರಾ ವ್ಯವಸ್ಥೆಯ ಯಶಸ್ಸನ್ನು ದೃಢಪಡಿಸಲಾಗಿದೆ ಎಂದು ಡಿಆರ್ ಡಿಒ ಮಾಹಿತಿ ನೀಡಿದೆ.

Astra ವಿಶೇಷತೆ ಏನು?

100 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಅಸ್ಟ್ರಾ ಬಿವಿಆರೆಎಂ ಸುಧಾರಿತ ಮಾರ್ಗದರ್ಶನ ಮತ್ತು ನ್ಯಾವಿಗೇಷನ್ ವ್ಯವಸ್ಥೆಗಳನ್ನು ಹೊಂದಿದೆ. ಶಸ್ತ್ರಾಸ್ತ್ರ ವ್ಯವಸ್ಥೆಯು ವಿವಿಧ ಡಿಆರ್ ಡಿಒ ಪ್ರಯೋಗಾಲಯಗಳು ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸೇರಿದಂತೆ 50 ಕ್ಕೂ ಹೆಚ್ಚು ಸಾರ್ವಜನಿಕ ಮತ್ತು ಕೈಗಾರಿಕೆಗಳ ನಡುವಿನ ಸಹಯೋಗದ ಫಲಿತಾಂಶವಾಗಿದೆ.

ರಾಜನಾಥ್ ಸಿಂಗ್ ಶ್ಲಾಘನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರ್‌ಎಫ್ ಸೀಕರ್‌ನ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಡಿಆರ್‌ಡಿಒ, ಐಎಎಫ್ ಮತ್ತು ಉದ್ಯಮವನ್ನು ಶ್ಲಾಘಿಸಿದರು ಮತ್ತು ಸ್ಥಳೀಯ ಸೀಕರ್‌ನೊಂದಿಗೆ ಕ್ಷಿಪಣಿಯ ಯಶಸ್ವಿ ಪರೀಕ್ಷೆಯು ನಿರ್ಣಾಯಕ ರಕ್ಷಣಾ ತಂತ್ರಜ್ಞಾನದಲ್ಲಿ ಪ್ರಮುಖ ಮೈಲಿಗಲ್ಲು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com