Dalai Lama
ಬೌದ್ಧ ಧಾರ್ಮಿಕ ಗುರು ದಲೈಲಾಮ

Dalai Lama ಉತ್ತರಾಧಿಕಾರಿ ಆಯ್ಕೆ: 'India-China ಸಂಬಂಧಕ್ಕೆ ಮುಳ್ಳು'!

ಭಾರತದ ಕಾರ್ಯತಂತ್ರ ಮತ್ತು ಶೈಕ್ಷಣಿಕ ಸಮುದಾಯಗಳ ಕೆಲವರು ದಲೈ ಲಾಮಾ ಅವರ ಪುನರ್ಜನ್ಮದ ಬಗ್ಗೆ "ಅನುಚಿತ ಹೇಳಿಕೆಗಳನ್ನು" ನೀಡಿದ್ದಾರೆ.
Published on

ನವದೆಹಲಿ: ಖ್ಯಾತ ಬೌದ್ಧ ಧರ್ಮದ ಧಾರ್ಮಿಕ ಗುರು ದಲೈಲಾಮ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವಾಗಿ ಕೆಂಡಾಮಂಡಲವಾಗಿರುವ ಚೀನಾ ಈ ವಿಚಾರ ಭಾರತ-ಚೀನಾ ಸಂಬಂಧಕ್ಕೆ ಮುಳ್ಳಾಗಲಿದೆ ಎಂದು ಚೀನಾ ಎಚ್ಚರಿಕೆ ನೀಡಿದೆ.

2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಪಡೆಗಳ ಜೊತೆ ಭಾರತದ ಸೇನೆಯು ಸಂಘರ್ಷ ನಡೆದ ಬಳಿಕ ಇದೇ ಮೊದಲ ಬಾರಿಗೆ ಚೀನಾಕ್ಕೆ ತೆರಳಲಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರವಾಸಕ್ಕೂ ಮುನ್ನ ಆಕ್ಷೇಪ ವ್ಯಕ್ತಪಡಿಸಿದ್ದು, ಟಿಬೆಟ್‌ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವು ಭಾರತ ಹಾಗೂ ಚೀನಾ ಸಂಬಂಧಕ್ಕೆ ಮುಳ್ಳಾಗಲಿದೆ' ಎಂದು ಚೀನಾ ಎಚ್ಚರಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್, 'ಭಾರತದ ಕಾರ್ಯತಂತ್ರ ಮತ್ತು ಶೈಕ್ಷಣಿಕ ಸಮುದಾಯಗಳ ಕೆಲವರು ದಲೈ ಲಾಮಾ ಅವರ ಪುನರ್ಜನ್ಮದ ಬಗ್ಗೆ "ಅನುಚಿತ ಹೇಳಿಕೆಗಳನ್ನು" ನೀಡಿದ್ದಾರೆ.

Dalai Lama
Video: Pakistan ದಲ್ಲಿ ರಾಮಾಯಣ ನಾಟಕ ಪ್ರದರ್ಶನ; ಸ್ಪೆಷಲ್ ಎಫೆಕ್ಟ್ ಗಾಗಿ AI ಬಳಕೆ!

ವಿದೇಶಾಂಗ ನೀತಿಯ ವೃತ್ತಿಪರರಾಗಿ ಕ್ಸಿಜಾಂಗ್‌ ಸೂಕ್ಷ್ಮತೆಯ ವಿಚಾರದಲ್ಲಿ ಸಂಪೂರ್ಣ ಅರಿವು ಹೊಂದಿರಬೇಕು. ಲಾಮಾ ಅವರ ಪುನರ್ಜನ್ಮ ಹಾಗೂ ಉತ್ತರಾಧಿಕಾರಿ ಆಯ್ಕೆ ವಿಚಾರವು ಅಂತರ್ಗತವಾಗಿ ಚೀನಾದ ಆಂತರಿಕ ವಿಚಾರವಾಗಿದೆ ಎಂದು ಹೇಳಿದ್ದಾರೆ.

‘ದಲೈಲಾಮಾ ಉತ್ತರಾಧಿಕಾರಿ ಮೇಲೆ ತನ್ನ ಪಾತ್ರವಿಲ್ಲ, ಆದರೆ, ಆಯ್ಕೆಗೆ ತಮ್ಮ ದೇಶದ ನಾಯಕರ ಒಪ್ಪಿಗೆ ಅಗತ್ಯ’ ಎಂದು ಚೀನಾವು ಪುನಾರವರ್ತಿಸಿದೆ. ಟಿಬೆಟ್‌ ಪ್ರಾಂತ್ಯವನ್ನು ಚೀನಾವು ‘ಕ್ಸಿಜಾಂಗ್‌’ ಎಂದೇ ಕರೆಯುತ್ತದೆ. ಜಿಂಗ್ ಅವರು ಯಾರನ್ನೂ ಕೂಡ ಬೊಟ್ಟುಮಾಡಿ ಆರೋಪಿಸಿಲ್ಲ.

ದಲೈಲಾಮಾ ಅವರು ಇತ್ತೀಚಿಗೆ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ಸಚಿವರು ಪಾಲ್ಗೊಂಡಿದ್ದರು. ಇದಕ್ಕೂ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಅಂದಹಾಗೆ ಜುಲೈ 15ರಂದು ಉತ್ತರ ಚೀನಾದ ತಿಯಾನ್‌ಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಪ್ರಾದೇಶಿಕ ಭದ್ರತಾ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

Dalai Lama
ದಲೈ ಲಾಮಾ, ಚೀನಾ, ಮತ್ತು ಭಾರತದ ಸಾಫ್ಟ್ ಪವರ್! (ತೆರೆದ ಕಿಟಕಿ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com