ಭಾರತದಿಂದ ಆಕಾಶ್ ಪ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿ; Video

ಭಾರತೀಯ ಸೇನೆಗಾಗಿ ಈ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ನವೀಕರಿಸಲಾಗಿದ್ದು, 4,500 ಮೀಟರ್ ಎತ್ತರದಲ್ಲಿ ಕಾರ್ಯನಿರ್ವಹಿಸುವಂತೆ ಕಸ್ಟಮೈಸ್ ಮಾಡಲಾಗಿದೆ.
 Akash Prime missile
ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿ
Updated on

ನವದೆಹಲಿ: ಭಾರತೀಯ ಸೇನೆ ಲಡಾಖ್‌ನಲ್ಲಿ ಆಕಾಶ್ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

ಭಾರತೀಯ ಸೇನೆಗಾಗಿ ಈ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ನವೀಕರಿಸಲಾಗಿದ್ದು, 4,500 ಮೀಟರ್ ಎತ್ತರದಲ್ಲಿ ಕಾರ್ಯನಿರ್ವಹಿಸುವಂತೆ ಕಸ್ಟಮೈಸ್ ಮಾಡಲಾಗಿದೆ.

"ಭಾರತ, ಜುಲೈ 16 ರಂದು ಲಡಾಖ್‌ನಲ್ಲಿ ಎರಡು ವೈಮಾನಿಕ ಹೈಸ್ಪೀಡ್ ಮಾನವರಹಿತ ಗುರಿಗಳನ್ನು ನವೀಕರಿಸಿದ ರೂಪಾಂತರವಾದ ಆಕಾಶ್ ಪ್ರೈಮ್ ಯಶಸ್ವಿಯಾಗಿ ನಾಶಪಡಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ" ಎಂದು ಸಚಿವಾಲಯ ತಿಳಿಸಿದೆ.

ಇದು ಭಾರತದ ವಾಯು ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ಕ್ರಮವಾಗಿದೆ. ಭಾರತೀಯ ಸೇನೆಯು ಇಂದು ಲಡಾಖ್‌ ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಆಕಾಶ್ ಪ್ರೈಮ್, ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯ ಉನ್ನತ-ಎತ್ತರದ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿತು ಎಂದ ಸಚಿವಾಲಯ ತಿಳಿಸಿದೆ.

 Akash Prime missile
Anytime Anywhere: ಶತ್ರು ರಾಷ್ಟ್ರಗಳ ಹಡಗುಗಳನ್ನು ಉಡಾಯಿಸಬಲ್ಲ ಕ್ಷಿಪಣಿ ಪರೀಕ್ಷೆ ಯಶಸ್ವಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com