ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ: ತಕ್ಷಣದಿಂದ ಜಾರಿಗೆ- ಕೇಂದ್ರ ಸರ್ಕಾರ

ಶೂನ್ಯ ವೇಳೆ ಬಳಿಕ ಮಧ್ಯಾಹ್ನ 12 ಗಂಟೆಗೆ ರಾಜ್ಯಸಭಾ ಕಲಾಪ ಮತ್ತೆ ಆರಂಭವಾದಾಗ ಅಧ್ಯಕ್ಷೀಯ ಪೀಠದಲ್ಲಿದ್ದ ಘನಶ್ಯಾಮ ತಿವಾರಿಯವರು ಗೃಹ ಸಚಿವಾಲಯದ ಅಧಿಸೂಚನೆ ಬಗ್ಗೆ ಸಭೆಗೆ ತಿಳಿಸಿದರು.
Jagdeep Dhankhar and President Droupadi Murmu
ಜಗದೀಪ್ ಧನಕರ್ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು
Updated on

ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಹುದ್ದೆಗೆ ನೀಡಿದ ರಾಜೀನಾಮೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಶೂನ್ಯ ವೇಳೆ ಬಳಿಕ ಮಧ್ಯಾಹ್ನ 12 ಗಂಟೆಗೆ ರಾಜ್ಯಸಭಾ ಕಲಾಪ ಮತ್ತೆ ಆರಂಭವಾದಾಗ ಅಧ್ಯಕ್ಷೀಯ ಪೀಠದಲ್ಲಿದ್ದ ಘನಶ್ಯಾಮ ತಿವಾರಿಯವರು ಗೃಹ ಸಚಿವಾಲಯದ ಅಧಿಸೂಚನೆ ಬಗ್ಗೆ ಸಭೆಗೆ ತಿಳಿಸಿದರು.

‘2025 ಜುಲೈ 22ರ ಅಧಿಸೂಚನೆಯಲ್ಲಿ ಗೃಹ ಸಚಿವಾಲಯವು, ಸಂವಿಧಾನದ 67 (ಎ) ವಿಧಿಯ ಅಡಿಯಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ನೀಡಿದ ರಾಜೀನಾಮೆಯನ್ನು ತಕ್ಷಣಕ್ಕೆ ಜಾರಿಗೆ ಬಂದಿದೆ ಎಂದು ತಿಳಿಸಿದೆ‘ ಎಂದು ತಿವಾರಿ ಘೋಷಿಸಿದರು.

ಜಗದೀಪ್ ಧನಕರ್ ಅವರ ರಾಜೀನಾಮೆಯ ನಂತರ ಮಂಗಳವಾರದ ಕಲಾಪಗಳನ್ನು ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಜಗದೀಪ್ ಧನಕರ್ ಅವರು ಸೋಮವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಕಳುಹಿಸಿದ್ದರು.

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣವೇ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆಂದು ಎಂದು ಪತ್ರದಲ್ಲಿ ತಿಳಿಸಿದ್ದರು.

Jagdeep Dhankhar and President Droupadi Murmu
BAC ಸಭೆಗೆ ನಡ್ಡಾ-ಕಿರಣ್ ರಿಜಿಜು ಗೈರು: Dhankar ದಿಢೀರ್​ ರಾಜೀನಾಮೆಗೆ ಇದೇ ಕಾರಣ? ಕೇಂದ್ರ ಸರ್ಕಾರ ಹೇಳಿದ್ದೇನು?

ನಾನು ನನ್ನ ಆರೋಗ್ಯ ರಕ್ಷಣೆಯತ್ತ ಗಮನ ಹರಿಸಲು ಬಯಸುತ್ತೇನೆ. ಈ ನಿಟ್ಟಿನಲ್ಲಿ, ವೈದ್ಯರ ಸಲಹೆಯ ಮೇರೆಗೆ ನಾನು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಂವಿಧಾನದ 67(ಎ) ವಿಧಿಯ ಪ್ರಕಾರ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ನನ್ನ ನಿರ್ಧಾರ ತಕ್ಷಣವೇ ಜಾರಿಗೆ ಬರಲಿದೆ. ಉಪರಾಷ್ಟ್ರಪತಿ ಹುದ್ದೆಯ ಜವಾಬ್ದಾರಿಗಳನ್ನು ಪೂರೈಸುವ ಅವಧಿಯಲ್ಲಿ ಸಂಪೂರ್ಣ ಬೆಂಬಲ ನೀಡಿದ್ದಕ್ಕಾಗಿ ಅಧ್ಯಕ್ಷ ಮುರ್ಮು, ಪ್ರಧಾನಿ ಮೋದಿ, ಕೇಂದ್ರ ಸಚಿವರು ಮತ್ತು ಎಲ್ಲಾ ಸಂಸತ್ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ.

ನಿಮ್ಮೆಲ್ಲರಿಂದ ನನಗೆ ದೊರೆತ ಅಮೂಲ್ಯ ಬೆಂಬಲ ಮತ್ತು ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಉಪರಾಷ್ಟ್ರಪತಿಯಾಗಿದ್ದ ವರ್ಷಗಳಲ್ಲಿ ಅನೇಕ ಅಮೂಲ್ಯ ವಿಷಯಗಳನ್ನು ಕಲಿತಿದ್ದೇನೆ. ನಾನು ಅನೇಕ ಜೀವನ ಅನುಭವಗಳನ್ನು ಗಳಿಸಿದ್ದೇನೆ. ಉಪರಾಷ್ಟ್ರಪತಿಯಾಗಿ, ಇಂತಹ ಪರಿವರ್ತನಾ ಸಮಯದಲ್ಲಿ ದೇಶದ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಗಮನಿಸಿದ್ದೇನೆ. ಈ ಅವಕಾಶವನ್ನು ನಾನು ಗೌರವವೆಂದು ಪರಿಗಣಿಸುತ್ತೇನೆ. ಇದು ನನಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಈ ರಾಜೀನಾಮೆಯೊಂದಿಗೆ ಅಧಿಕಾರದಲ್ಲಿರುವಾಗ ರಾಜೀನಾಮೆ ನೀಡಿದ ಮೂರನೇ ಉಪರಾಷ್ಟ್ರಪತಿಯಾಗಿ ಧನಕರ್​ ದಾಖಲೆ ಪುಸ್ತಕಗಳಲ್ಲಿ ದಾಖಲಾಗಿದ್ದಾರೆ.

ಈ ಹಿಂದೆ, ವಿವಿ ಗಿರಿ ಮತ್ತು ಆರ್. ವೆಂಕಟರಾಮನ್ ಇದೇ ರೀತಿಯ ರಾಜೀನಾಮೆಗಳನ್ನು ಸಲ್ಲಿಸಿದ್ದರು. ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರೂ ರಾಜೀನಾಮೆ ನೀಡಿದ್ದರು. ಆದರೆ, ಅನಾರೋಗ್ಯದ ಕಾರಣ ಧನಕರ್​ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com