ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿ: 'ವೆಸ್ಟ್ ಆರ್ಟಿಕಾ' ಕಾನ್ಸುಲೇಟ್ ನಡೆಸುತ್ತಿದ್ದ ವ್ಯಕ್ತಿ ಬಂಧನ; Video

ಆರೋಪಿಯನ್ನು ಗಾಜಿಯಾಬಾದ್‌ನ ಕವಿ ನಗರದ ನಿವಾಸಿ ಹರ್ಷವರ್ಧನ್ ಜೈನ್ ಎಂದು ಗುರುತಿಸಲಾಗಿದ್ದು, ಮಂಗಳವಾರ ಬಂಧಿಸಲಾಗಿದೆ.
fake embassy in Ghaziabad
ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿದ್ದ ವಾಹನಗಳು
Updated on

ಲಖನೌ: ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಗಾಜಿಯಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ರಾಯಭಾರ ಕಚೇರಿಯನ್ನು ಪತ್ತೆಹಚ್ಚಿದ್ದು, ಅಸ್ತಿತ್ವದಲ್ಲೇ ಇಲ್ಲದ 'ವೆಸ್ಟ್ ಆರ್ಟಿಕಾ'ದ ರಾಜತಾಂತ್ರಿಕ ಎಂದು ಹೇಳಿಕೊಂಡು 'ದೂತಾವಾಸ' ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಆರೋಪಿಯನ್ನು ಗಾಜಿಯಾಬಾದ್‌ನ ಕವಿ ನಗರದ ನಿವಾಸಿ ಹರ್ಷವರ್ಧನ್ ಜೈನ್ ಎಂದು ಗುರುತಿಸಲಾಗಿದ್ದು, ಮಂಗಳವಾರ ಬಂಧಿಸಲಾಗಿದೆ.

ಎಸ್‌ಟಿಎಫ್‌ನ ನೋಯ್ಡಾ ಘಟಕದ ಪ್ರಕಾರ, ಜೈನ್ ವಿದೇಶಗಳಲ್ಲಿನ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ಉದ್ಯೋಗದ ಸುಳ್ಳು ಭರವಸೆ ನೀಡುವ ಮೂಲಕ ದಲ್ಲಾಳಿ ವ್ಯವಹಾರಗಳಲ್ಲಿ ತೊಡಗಿದ್ದನು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯಲ್ಲಿಯೂ ಆತ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ. ಆರೋಪಿ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಗಣ್ಯರೊಂದಿಗೆ ಇರುವ ತಿರುಚಿದ ಫೋಟೊಗಳನ್ನು ಜನರನ್ನು ದಾರಿ ತಪ್ಪಿಸಲು ಬಳಸಿದ್ದಾನೆ ಎಂದು ಸಂಸ್ಥೆ ತಿಳಿಸಿದೆ.

ಆರೋಪಿಯು ಬಾಡಿಗೆ ಮನೆಯಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದನು ಮತ್ತು ಪಶ್ಚಿಮ ಆರ್ಟಿಕಾ, ಸಬೋರ್ಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ಅಸ್ತಿತ್ವದಲ್ಲಿಲ್ಲದ ದೇಶಗಳ ರಾಯಭಾರಿಯಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದ್ದನು. ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳಲ್ಲಿ ತಿರುಗಾಡುತ್ತಿದ್ದನು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ಯಶ್ ಹೇಳಿದ್ದಾರೆ.

ವಿಚಾರಣೆಯಲ್ಲಿ ಆರೋಪಿಗೆ ವಿವಾದಾತ್ಮಕ ದೇವಮಾನವ ಚಂದ್ರಸ್ವಾಮಿ ಮತ್ತು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಜೊತೆ ಈ ಹಿಂದೆ ಸಂಬಂಧವಿತ್ತು ಎಂದು ತಿಳಿದುಬಂದಿದೆ.

2011ರಲ್ಲಿ, ಜೈನ್ ವಿರುದ್ಧ ಅಕ್ರಮ ಸ್ಯಾಟಲೈಟ್ ಫೋನ್ ವಶಪಡಿಸಿಕೊಂಡ ಪ್ರಕರಣದಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳವಾರ ಆತನ ಬಂಧನದ ನಂತರ, ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿದ್ದ ನಾಲ್ಕು ವಾಹನಗಳು, ಮೈಕ್ರೋನೇಷನ್ಸ್ ಎಂದು ಕರೆಯಲ್ಪಡುವ 12 ನಕಲಿ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು, ವಿದೇಶಾಂಗ ಸಚಿವಾಲಯದ ಮುದ್ರೆಯೊಂದಿಗೆ ನಕಲಿ ದಾಖಲೆಗಳು, ಎರಡು ನಕಲಿ ಪ್ಯಾನ್ ಕಾರ್ಡ್‌ಗಳು, ವಿವಿಧ ದೇಶಗಳು ಮತ್ತು ಕಂಪನಿಗಳ 34 ರಬ್ಬರ್ ಸ್ಟ್ಯಾಂಪ್‌ಗಳು ಮತ್ತು ಎರಡು ನಕಲಿ ಪ್ರೆಸ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

fake embassy in Ghaziabad
Watch | ಸಾಲ ಕೊಡಿಸುವುದಾಗಿ ಕೋಟಿ ಕೋಟಿ ರೂ ವಂಚನೆ; ರೋಷನ್ ಸಲ್ಡಾನಾ ಐಷಾರಾಮಿ ಮನೆ ನೋಡಿ!

ಇದರೊಂದಿಗೆ, 44.7 ಲಕ್ಷ ರೂ. ನಗದು, ವಿದೇಶಿ ಕರೆನ್ಸಿ, ಬಹು ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು 18 ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಎಸ್‌ಟಿಎಫ್ ವಶಪಡಿಸಿಕೊಂಡಿದೆ.

ಕವಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com