
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ವಸ್ತುಗಳ ಆಮದುಗಳ ಮೇಲೆ ಶೇ.25 ರಷ್ಟು ಸುಂಕ ಮತ್ತು ದಂಡ ವಿಧಿಸಿದ ಕ್ರಮಕ್ಕೆ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷರ ನಡುವಿನ ಸ್ನೇಹಕ್ಕೆ ಅರ್ಥವಿಲ್ಲ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಂದ ಸ್ಫೂರ್ತಿ ಪಡೆದು ಅಮೆರಿಕದ ಅಧ್ಯಕ್ಷರ ವಿರುದ್ಧ ನಿಲ್ಲಬೇಕು ಎಂದು ಹೇಳಿದ್ದಾರೆ. ಅಧ್ಯಕ್ಷ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ಮತ್ತು ದಂಡ ವಿಧಿಸಿದ್ದಾರೆ. ಅವರ ಮತ್ತು 'ಹೌಡಿ ಮೋದಿ' ನಡುವಿನ ಸಂಬಂಧಗಳಿಗೆ ಅರ್ಥವಿಲ್ಲ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ (TMC) ರಾಜ್ಯಸಭಾ ನಾಯಕ ಡೆರೆಕ್ ಒ'ಬ್ರೇನ್, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಮೈಕ್ರೋಬ್ಲಾಗಿಂಗ್ ವೇದಿಕೆ ಪೋಸ್ಟ್‌ನಲ್ಲಿ ಅವರು, "56 ಎಂದರೆ 25 ಕ್ಕಿಂತ ಕಡಿಮೆ! ಈಗ 56 ಇಂಚು ಕ್ರೂರ ಶೇಕಡಾ 25ರಷ್ಟು ಟ್ರಂಪ್ ಸುಂಕದ ಬಗ್ಗೆ ಏನು ಹೇಳುತ್ತದೆ. ಇದನ್ನು ನೆನಪಿಡಿ ಎಂದು ಹೇಳಿದರು.
ಸಂಸತ್ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ಜನತಾ ದಳ (RJD) ಸಂಸದ ಮನೋಜ್ ಝಾ, ಪ್ರಧಾನಿ ಮೋದಿಯವರ ಆಳ್ವಿಕೆಯಲ್ಲಿ ಇದು ಸಂಭವಿಸಿದೆ ಎಂದು ನಮಗೇನೂ ಸಂತೋಷವಾಗಿಲ್ಲ. ನಮ್ಮ ಸರ್ಕಾರವು ನ್ಯೂನತೆಗಳನ್ನು ಒಪ್ಪಿಕೊಳ್ಳಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಈ ಸುಂಕ ಹೇರಿಕೆ ವಿರುದ್ಧ ನಿಲ್ಲಬೇಕು ಎಂದರು.
ಭಾರತದ ಕಮ್ಯುನಿಸ್ಟ್ ಪಕ್ಷದ (CPI) ಸಂಸದ ಪಿ. ಸಂದೋಷ್ ಕುಮಾರ್ ಟ್ರಂಪ್ ಅವರ ನಿರ್ಧಾರವನ್ನು ಭಾರತಕ್ಕೆ ಮತ್ತೊಂದು ಅವಮಾನ ಎಂದು ಬಣ್ಣಿಸಿದ್ದಾರೆ. ಇದು ಭಾರತದ ಪ್ರತಿಷ್ಠೆಗೆ ಮತ್ತೊಂದು ಅವಮಾನ. ಒಂದು ಕಡೆ ವ್ಯಾಪಾರ ಒಪ್ಪಂದದ ಚರ್ಚೆಗಳು ನಡೆಯುತ್ತಿರುವಾಗ, ಟ್ರಂಪ್ ಭಾರತೀಯ ಹಿತಾಸಕ್ತಿಗಳನ್ನು ಅವಮಾನಿಸುತ್ತಿದ್ದಾರೆ ಎಂದರು.
ಸುಂಕಗಳ ಬಗ್ಗೆ ಕೇಳಿದಾಗ, ಡಿಎಂಕೆ ನಾಯಕ ತಿರುಚಿ ಶಿವ ಅವರು ಪ್ರಧಾನಿ ಅವರು ದೇಶದ ಜನತೆಗೆ ಈ ಬಗ್ಗೆ ಉತ್ತರಿಸಬೇಕು ಎಂದರು. ಇದು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ವಿವರಿಸಬೇಕು ಎಂದರು.
ಇದು ಮೋದಿ ಸರ್ಕಾರದ ವೈಫಲ್ಯ. ವಿದೇಶಾಂಗ ಸಚಿವರು ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಹೇಳಿದರು.
ಫೇಸ್‌ಬುಕ್ ಪೋಸ್ಟ್‌ನಲ್ಲಿ, ಸಿಪಿಐ(ML) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಟ್ರಂಪ್ ಅವರು ಭಾರತದ ಹೆಚ್ಚಿನ ಸುಂಕಗಳು ಮಾತ್ರವಲ್ಲದೆ, ರಷ್ಯಾದಿಂದ ಮಿಲಿಟರಿ ಉಪಕರಣಗಳು ಮತ್ತು ಇಂಧನವನ್ನು ಖರೀದಿಸಿದ್ದಕ್ಕಾಗಿಯೂ ಭಾರತವನ್ನು ಶಿಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಯುಎಸ್ ಮೇಲೆ ಮಾತ್ರ ಅವಲಂಬಿತವಾಗದಿದ್ದಕ್ಕಾಗಿ! ಭಾರತದ ಸಾರ್ವಭೌಮತ್ವದ ಮೇಲೆ ಹೆಚ್ಚು ನಿರ್ಲಜ್ಜ ದಾಳಿ ನಡೆಯಬಹುದೇ? ಮೋದಿ ಸರ್ಕಾರ ಹೆಚ್ಚು ಶರಣಾಗುತ್ತದೆ ಮತ್ತು ಮೌನವಾಗಿರುತ್ತದೆ, ಟ್ರಂಪ್ ಆಡಳಿತವು ಭಾರತದ ಮೇಲೆ ಇನ್ನಷ್ಟು ಬೆದರಿಕೆಯೊಡ್ಡುತ್ತಾ ಹೋಗುತ್ತದೆ ಎಂದು ಹೇಳಿದರು.
ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಟ್ರಂಪ್ ಕನಿಷ್ಠ 30 ಬಾರಿ ವ್ಯಾಪಾರವನ್ನು ಹತೋಟಿಯಾಗಿ ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದು ಭಾರತದ ವಿದೇಶಾಂಗ ನೀತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಂತೆ, ಆದರೂ ಬಿಜೆಪಿ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದ್ದಾರೆ.
ಮೋದಿ ಸರ್ಕಾರದ ಪ್ರತಿಕ್ರಿಯೆ ಏನು ಒಂದು ಮಾತಿಲ್ಲ. ಪ್ರತಿಭಟನೆ ಇಲ್ಲ. ಯಾವುದೇ ಖಂಡನೆ ಇಲ್ಲ. ಪ್ರಧಾನಿಯಾಗಲಿ ಅಥವಾ ಒಬ್ಬ ಕ್ಯಾಬಿನೆಟ್ ಸಚಿವರಾಗಲಿ ಟ್ರಂಪ್ ಅವರನ್ನು ಸಂಸತ್ತಿನಲ್ಲಿ ಖಂಡಿಸುವ ಧೈರ್ಯವೂ ಇಲ್ಲ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮಾತನಾಡಬೇಕು! ಭಾರತವು ತನ್ನ ರಾಜಕೀಯ ಸ್ವಾಯತ್ತತೆ, ಆರ್ಥಿಕ ಸಾರ್ವಭೌಮತ್ವ ಮತ್ತು ನೈತಿಕ ಅಧಿಕಾರವನ್ನು ಮರಳಿ ಪಡೆಯುವ ಸಮಯ ಇದು ಎಂದರು.
ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಗಳಲ್ಲಿ ಬಿಕ್ಕಟ್ಟಿನ ಲಕ್ಷಣಗಳ ಮಧ್ಯೆ, ಆಗಸ್ಟ್ 1 ರಿಂದ ಭಾರತದ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ಟ್ರಂಪ್ ಘೋಷಿಸಿದ್ದಾರೆ.
Advertisement